ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್ಸ್‌ಗೆ ಬ್ಯಾಟಿಂಗ್‌ ಬಲ ಹೆಚ್ಚಿಸಿದ ಆಸೀಸ್‌!

ICC World Cup 2019 : ಆಸಿಸ್ ಕಷ್ಟ ನೋಡಿ ನಗುತ್ತಿದೆ ಇಂಗ್ಲೆಂಡ್..! | Oneindia Kannada
World Cup 2019: Wade, Marsh called up as cover for Stoinis, Khawaja

ಬರ್ಮಿಂಗ್‌ಹ್ಯಾಮ್‌, ಜುಲೈ 07: ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಆಸ್ಟ್ರೇಲಿಯಾ ತಂಡ, ಈ ಪಂದ್ಯದ ವೇಳೆ ಭಾರಿ ಹೊಡೆತವನ್ನೇ ಅನುಭವಿಸಿದ್ದು ತಂಡದ ಸ್ಟಾರ್ಗಳಾದ ಬ್ಯಾಟ್ಸ್‌ಮನ್‌ ಉಸ್ಮಾನ್‌ ಖವಾಜ ಮತ್ತು ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ವಿವಿಧ ಭಾಗಗಳ ಸ್ನಾಯು ಸೆಳೆತದ ಸಮಸ್ಯೆ ತುತ್ತಾಗಿರುವ ಖವಾಜ ಮತ್ತು ಸ್ಟೋಯ್ನಿಸ್‌ ಅವರ ಚೇತರಿಕೆಗೆ ಸಾಕಷ್ಟು ಸಮಯ ತೆಗೆದುಕೊಳ್ಳಲಿದ್ದು, ಹೀಗಾಗಿ ವಿಶ್ವಕಪ್‌ ಟೂರ್ನಿಯ ಉಳಿದ ಪಂದ್ಯಗಳಿಂದ ಅವರು ಹೊರ ಬೀಳುವ ಸಾಧ್ಯತೆ ಇದೆ.

ಏಕದಿನ ಕ್ರಿಕೆಟ್‌ ವಿಶ್ವಕಪ್‌ ಸೆಮಿಫೈನಲ್ಸ್‌ ಪಂದ್ಯ ಎಲ್ಲಿ? ಯಾವಾಗ?ಏಕದಿನ ಕ್ರಿಕೆಟ್‌ ವಿಶ್ವಕಪ್‌ ಸೆಮಿಫೈನಲ್ಸ್‌ ಪಂದ್ಯ ಎಲ್ಲಿ? ಯಾವಾಗ?

ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ 10 ರನ್‌ಗಳಿಂದ ಸೋತು ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಾರಿದ ಆಸ್ಟ್ರೇಲಿಯಾ ತಂಡ ಇದೀಗ ಜುಲೈ 11ರಂದು ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ ವಿರುದ್ಧ ಪೈಪೋಟಿ ನಡೆಸುವಂತಾಗಿದೆ. ಹೀಗಾಗಿ ತಂಡದ ಬ್ಯಾಟಿಂಗ್‌ ಬಲ ಹೆಚ್ಚಿಸುವ ಕಡೆಗೆ ಹೆಚ್ಚಿನ ಆದ್ಯತೆ ನೀಡಿರುವ ಕಾಂಗರೂ ಪಡೆ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಮ್ಯಾಥ್ಯೂ ವೇಡ್‌ ಮತ್ತು ಫಾಸ್ಟ್‌ ಬೌಲಿಂಗ್‌ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ಗೆ ಬುಲಾವ್‌ ನೀಡಲು ಮುಂದಾಗಿದೆ.

ODI rankings: ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನಂ.1 ಸ್ಥಾನಕ್ಕೆ ಕುತ್ತು!ODI rankings: ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ನಂ.1 ಸ್ಥಾನಕ್ಕೆ ಕುತ್ತು!

ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಪ್ರಕಾರ ಖವಾಜ ಮತ್ತು ಸ್ಟೋಯ್ನಿಸ್‌ ಇಬ್ಬರೂ ಹೆಚ್ಚುವರಿ ಸ್ಕ್ಯಾನ್‌ಗೆ ಒಳಪಡಲಿದ್ದು, ಇದರ ವರದಿ ಬಂದ ಬಳಿಕವಷ್ಟೇ ಅವರು ವಿಶ್ವಕಪ್‌ನಲ್ಲಿ ಮುಂದುವರಿಯುವ ಭವಿಷ್ಯ ನಿರ್ಧಾರವಾಗಲಿದೆ.

ಬ್ಯಾಟಿಂಗ್‌ ವೇಳೆ ಸ್ನಾಯು ಸೆಳೆತದ ಸಮಸ್ಯೆಗೆ ತುತ್ತಾದ ಖವಾಜ, ನಿವೃತ್ತಿ ಹೊಂದಿದ್ದರು. ಬಳಿಕ ಬ್ಯಾಟಿಂಗ್‌ಗೆ ಮರಳಿದರಾದರೂ 18 ರನ್‌ ಗಳಿಸಿ ಕಗಿಸೊ ರಬಾಡಗೆ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ 10 ರನ್‌ಗಳಿಂದ ಸೋಲನುಭವಿಸಿತು. ವರದಿಗಳ ಪ್ರಕಾರ ಖವಾಜ ವಿಶ್ವಕಪ್‌ನಿಮದ ಹೊರ ಬೀಳುವುದು ಬಹುತೇಕ ಖಾತ್ರಿಯಾಗಿದೆ.

ವಿಶ್ವಕಪ್‌ 2019: ಯಶಸ್ಸಿನ ಉತ್ತಂಗದ ಕಾಲಘಟ್ಟದಲ್ಲಿ ರೋಹಿತ್‌ ಶರ್ಮಾವಿಶ್ವಕಪ್‌ 2019: ಯಶಸ್ಸಿನ ಉತ್ತಂಗದ ಕಾಲಘಟ್ಟದಲ್ಲಿ ರೋಹಿತ್‌ ಶರ್ಮಾ

ಇನ್ನು ಭಾರತ ವಿರುದ್ಧದ ಪಂದ್ಯದಲ್ಲೇ ಗಾಯದ ಸಮಸ್ಯೆ ಎದುರಿಸಿದ್ದ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಬಳಿಕ ಚೇತರಿಸಿ ತಂಡ ಸೇರಿಕೊಂಡಿದ್ದರು. ಆದರೀಗ ಮತ್ತೊಮ್ಮೆ ಅದೇ ಸಮಸ್ಯೆಗೆ ತುತ್ತಾಗಿರುವ ಕಾರಣ ಸೆಮಿಫೈನಲ್ಸ್‌ ಹೊತ್ತಿಗೆ ಚೇತರಿಸಿ ತಂಡದ ಸೇವೆಗೆ ಲಭ್ಯವಾಗುವುದು ಅನುಮಾನವಾಗಿದೆ. ಆಸ್ಟ್ರೇಲಿಯಾ ತಂಡ ಲೀಗ್‌ ಹಂತದಲ್ಲಿ 9 ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿತ್ತು.

Story first published: Sunday, July 7, 2019, 20:11 [IST]
Other articles published on Jul 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X