ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನಲ್ಲಿ ಆರ್ಭಟಿಸಬಲ್ಲ TOP 5 ಆಲ್‌ರೌಂಡರ್‌ಗಳಿವರು!

ಹಾರ್ದಿಕ್ ಪಾಂಡ್ಯ ಜೊತೆ ವಿಶ್ವಕಪ್ ನಲ್ಲಿ ಮಿಂಚುವ ಆಟಗಾರರು ಇವರೆ..? | Oneindia Kannada
World Cup 2019: watch out for these 5 all-rounders

ಬೆಂಗಳೂರು, ಮೇ 19: ಈ ಬಾರಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಆಲ್‌ರೌಂಡರ್‌ಗಳದ್ದೇ ಹವಾ ಎಂದು ವೆಸ್ಟ್‌ ಇಂಡೀಸ್‌ನ ಬ್ಯಾಟಿಂಗ್‌ ದಿಗ್ಗಜ ವಿವಿಯನ್‌ ರಿಚರ್ಡ್ಸ್‌ ಭವಿಷ್ಯ ನುಡಿದಿದ್ದರು.

World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು! World Cupನಲ್ಲಿ ಅಬ್ಬರಿಸಬಲ್ಲ Top 10 ಬ್ಯಾಟ್ಸ್‌ಮನ್‌ಗಳಿವರು!

ಇಂಗ್ಲೆಂಡ್‌ ಮತ್ತು ವೇಲ್ಸ್ ಆತಿಥ್ಯದಲ್ಲಿ ಮೇ 30ರಂದು ಆರಂಭವಾಗಲಿರುವ 12ನೇ ಆವೃತ್ತಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಈ ಬಾರಿ ಬ್ಯಾಟಿಂಗ್‌ ಪಿಚ್‌ಗಳು ಲಭ್ಯವಾಗಲಿದೆ. ಆದರೂ ಇನಿಂಗ್ಸ್‌ ಮಧ್ಯದಲ್ಲಿ ಶಿಸ್ತಿನ ಬೌಲಿಂಗ್‌ ಪ್ರದರ್ಶಿಸಬಲ್ಲ ಆಟಗಾರರು ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಬಲ್ಲರು. ಈ ನಿಟ್ಟಿನಲ್ಲಿ ಆಲ್‌ರೌಂಡರ್‌ಗಳಿಗೆ ಈ ಬಾರಿಯ ವಿಶ್ವಕಪ್‌, ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡದಲ್ಲೂ ಮಿಂಚುವ ಅದ್ಭುತ ವೇದಿಕೆಯನ್ನು ಒದಗಿಸಿಕೊಡಲಿದೆ.

ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!ಈ ಬಾರಿ ವಿಶ್ವಕಪ್‌ನಲ್ಲಿ ಮೋಡಿ ಮಾಡಬಲ್ಲ Top 5 ಸ್ಪಿನ್ನರ್‌ಗಳು!

ಅಂದಹಾಗೆ ಜಗತ್ತಿ ವಿವಿಧ ತಂಡಗಳಲ್ಲಿ ಇರುವ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ವಿಶ್ವಕಪ್‌ನಲ್ಲಿ ಧೂಳೆಬ್ಬಿಸಬಲ್ಲ ಟಾಪ್‌ 5 ಆಟಗಾರ ವಿವರ ಇಲ್ಲಿ ನೀಡಲಾಗಿದೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಪಂದ್ಯದ ದಿಕ್ಕನ್ನೇ ಬದಲಾಯಿಸಿ ಮ್ಯಾಚ್‌ ವಿನ್ನರ್‌ಗಳೆನಿಸಬಲ್ಲ ಆಲ್‌ರೌಂಡರ್‌ಗಳಿವರು.

ಆಂಡ್ರೆ ರಸೆಲ್‌ ದಿ ಜಯಂಟ್‌

ಮುಂಬೈ ಇಂಡಿಯನ್ಸ್‌ ಈ ಬಾರಿ ಐಪಿಎಲ್‌ ಟ್ರೋಫಿ ಗೆದ್ದಿರಬಹುದು. ಆದರೆ, ಪ್ರೇಕ್ಷಕರ ಕಣ್ಣಲ್ಲಿ ಈಗಲೂ ಉಳಿದಿರುವುದು ಕೋಲ್ಕೊತಾ ನೈಟ್‌ ರೈಡರ್ಸ್‌ ತಂಡದ ದೈತ್ಯ ಆಟಗಾರ ಆಂಡ್ರೆ ರಸೆಲ್‌ ಅವರ ಸ್ಫೋಟಕ ಪ್ರದರ್ಶನ. 31 ವರ್ಷದ ವೆಸ್ಟ್‌ ಇಂಡೀಸ್‌ ಆಲ್‌ರೌಂಡರ್‌, ಐಪಿಎಲ್‌ನಲ್ಲಿ ಈ ಬಾರಿ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಮಿಂಚು ಮೂಡಿಸಿದ್ದರು. 2017ರಲ್ಲಿ ಎದುರಿಸಿದ ಡೋಪಿಂಗ್‌ ನಿಷೇಧದ ಬಳಿಕ ಕ್ರಿಕೆಟ್‌ಗೆ ಮರಳಿದ ದಿನದಿಂದಲೂ ರಸೆಲ್‌, ತಮ್ಮ ಆಟವನ್ನು ಬೇರೆಯದ್ದೇ ಹಂತಕ್ಕೆ ಕೊಂಡೊಯ್ದಿದ್ದಾರೆ. ಅಂದಿನಿಂದ ಇನಿಂದಿನ ವರೆಗೆ ರಸೆಲ್‌ 58 ಪಂದ್ಯಗಳಲ್ಲಿ 130 ಸಿಕ್ಸರ್‌ ಸಿಡಿಸಿದ್ದಾರೆ. ಐಪಿಎಲ್‌ನಲ್ಲಿ 14 ಪಂದ್ಯಗಳಿಂದ 12 ವಿಕೆಟ್‌ಗಳನ್ನು ಉರುಳಿಸಿರುವ ಅವರು ಈ ಬಾರಿ ವಿಶ್ವಕಪ್‌ನಲ್ಲಿ ಆಲ್‌ರೌಂಡ್‌ ಆಟದ ದಾಖಲೆ ಬರೆಯುವುದು ನಿಶ್ಚಿತ ಎಂಬಂತಿದೆ.

ಹಾರ್ದಿಕ್‌ ಪಾಂಡ್ಯ ಪವರ್‌

ಟೀಮ್‌ ಇಂಡಿಯಾ ಬಹಳ ವರ್ಷಗಳಿಂದ ಬ್ಯಾಟಿಂಗ್‌ ಜೊತೆಗೆ ವೇಗದ ಬೌಲಿಂಗ್‌ ದಾಳಿ ಸಂಘಟಿಸಬಲ್ಲ ಆಲ್‌ರೌಂಡರ್‌ಗಾಗಿ ಹಡುಕಾಟದಲ್ಲಿತ್ತು. ಇದೀಗ ಹಾರ್ದಿಕ್‌ ಪಾಂಡ್ಯ ಹೆಸರಿನ ಯುವ ಆಲ್‌ರೌಂಡರ್‌ ಭಾರತ ತಂಡ ಸೇರಕೊಂಡಿದ್ದಾರೆ. ಇನಿಂಗ್ಸ್‌ ಮಧ್ಯದಲ್ಲಿ ವಿಕೆಟ್‌ಗಳನ್ನು ಪಡೆದು, ವಿಶ್ವದ ಯಾವುದೇ ಕ್ರೀಡಾಂಗಣದಲ್ಲಿಚೆಂಡನ್ನು ಕ್ರೀಡಾಂಗಣದ ಮೂಲೆ ಮೂಲೆ ಸೇರಿಸಬಲ್ಲ ಸಾಮರ್ಥ್ಯ ಪಾಂಡ್ಯ ಅವರಲ್ಲಿದೆ. 25 ವರ್ಷದ ಆಲ್‌ರೌಂಡರ್‌ ಇತ್ತೀಚೆಗೆ ಅಂತ್ಯಗೊಂಡ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಮುಂಬೈ ಇಂಡಿಯನ್ಸ್‌ ಪರ ಆಡಿದ 16 ಪಂದ್ಯಗಳಿಂದ 402 ರನ್‌ಗಳನ್ನು ಚಚ್ಚಿದರೆಮ ಬೌಲಿಂಗ್‌ನಲ್ಲೂ 16 ವಿಕೆಟ್‌ಗಳನ್ನು ಪಡೆದು ತಂಡ ಪ್ರಶಸ್ತಿ ಗೆಲ್ಲುವಲ್ಲಿ ಆಲ್‌ರೌಂಡ್‌ ಪಾತ್ರ ವಹಿಸಿದ್ದರು. ವಿಶ್ವಕಪ್‌ನಲ್ಲಿ ಮೂರನೇ ಪ್ರಶಸ್ತಿ ಗೆಲುವನ್ನು ಎದುರು ನೋಡುತ್ತಿರುವ ವಿರಾಟ್‌ ಕೊಹ್ಲಿ ಸಾರಥ್ಯದ ಭಾರತ ತಂಡದಲ್ಲಿ ಪಾಂಡ್ಯ
ಸಮತೋಲನ ತಂದುಕೊಟ್ಟಿರುವ ಆಟಗಾರ.

ದಿ ಬಿಗ್‌ ಬೆನ್‌ ಸ್ಟೋಕ್ಸ್‌

ಇಂಗ್ಲೆಂಡ್‌ ತಂಡದ ಶ್ರೇಷ್ಠ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌. ಎಡಗೈ ಬ್ಯಾಟ್ಸ್‌ ಆಗಿರುವ ಸ್ಟೋಕ್ಸ್‌ ತಮ್ಮ ದೊಡ್ಡ ಹೊಡೆತಗಳಿಗೆ ಹೆಸರುವಾಸಿ. ಐಪಿಎಲ್‌ನಲ್ಲಿ ಇದರ ಝಲಕ್‌ ಎಲ್ಲರ ಎದುರು ಪ್ರದರ್ಶಿಸಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ 4ನೇ ಪಂದ್ಯದಲ್ಲಿ ಸ್ಟೋಕ್ಸ್‌ ಅಜೇಯ 71 ರನ್‌ಗಳನ್ನು ಸಿಡಿಸಿ ತಂಡಕ್ಕೆ 3 ವಿಕೆಟ್‌ಗಳ ಅದ್ಭುತ ಜಯ ತಂದುಕೊಟ್ಟಿದ್ದರು. ಇದು ಮಧ್ಯಮ ಕ್ರಮಾಖದಲ್ಲಿ ಸ್ಟೋಕ್ಸ್‌ ತರಬಲ್ಲ ಆಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದೇ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನೂ ಪಡೆದಿದ್ದ ಸ್ಟೋಕ್ಸ್‌, ತಾವು ಅಪ್ಪಟ ಮ್ಯಾಚ್‌ ವಿನ್ನರ್‌ ಎಂಬುದನ್ನು ಸಾರಿ ಹೇಳಿದ್ದರು. ಸ್ಟೋಕ್ಸ್‌ ಅವರಂತಹ ಬಲಿಷ್ಠ ಆಟಗಾರರನ್ನು ಹೊಂದಿರುವ ಇಂಗ್ಲೆಂಡ್‌ ಈ ಬಾರಿ ಪ್ರಸಸ್ತಿ ಗೆಲ್ಲುವ ಫೇವರಿಟ್‌ ತಂಡ ಎನಿಸಿಕೊಂಡಿದೆ.

ಮಾರ್ಕಸ್‌ ಸೂಪರ್‌ ಸ್ಟೋಯ್ನಿಸ್‌

ಆಸ್ಟ್ರೇಲಿಯಾ ತಂಡದ ಯಶಸ್ಸಿನ ಹಿಂದಿರುವ ಬಹುದೊಡ್ಡ ಗುಟ್ಟು ಆಲ್‌ರೌಂಡರ್‌ಗಳು. ಕಳೆದ ವಿಶ್ವಕಪ್‌ನಲ್ಲೂ ಆಸ್ಟ್ರೇಲಿಯಾಗೆ ಪ್ರಶಸ್ತಿ ಗೆದ್ದುಕೊಡುವಲ್ಲಿ ನೆರವಾಗಿದ್ದು ಆಲ್‌ರೌಂಡರ್‌ ಜೇಮ್ಸ್‌ ಫಾಕ್ನರ್‌. ಈ ಬಾರಿಯೂ ಆಸ್ಟ್ರೇಲಿಯಾ ತಂಡಕ್ಕೆ ಅಂಥದ್ದೇ ಪ್ರದರ್ಶನ ತಂದುಕೊಡಬಲ್ಲ ಸಮರ್ಥ ಆಟಗಾರ ಮಾರ್ಕಸ್‌ ಸ್ಟೋಯ್ನಿಸ್‌. ಇತ್ತೀಚೆಗೆ ಭಾರತ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸಿಸ್‌ಗೆ 2-1ರ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಇದೇ ಮಾರ್ಕಸ್‌. ಸರಣಿಯಲ್ಲಿ ಒಟ್ಟು 140 ರನ್‌ಗಳನ್ನು ಗಳಿಸಿದ 29 ವರ್ಷದ ಆಲ್‌ರೌಂಡರ್‌, 3ನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ವಿಕೆಟ್‌ ಪಡೆದು ಆಸೀಸ್‌ಗೆ ಗೆಲುವಿನ ಬಲ ಒದಗಿಸಿದ್ದರು. ಹೀಗಾಗಿ ವಿಶ್ವಕಪ್‌ನಲ್ಲಿ ಸ್ಟೋಯ್ನಿಸ್‌ ಪ್ರದರ್ಶನ ಆಸೀಸ್‌ಗೆ ವರದಾನವಾಗಲಿದೆ.

ಸೂಪರ್‌ ಸ್ಟಾರ್‌ ಶಾಕಿಬ್‌ ಅಲ್‌ ಹಸನ್‌

ವಿಶ್ವ ಶ್ರೇಷ್ಠ ಆಲ್‌ರೌಂಡರ್‌ಗಳನ್ನು ಪಟ್ಟಿ ಮಾಡಿದಲ್ಲಿ, ಅಲ್ಲಿ ಬಾಂಗ್ಲಾಂದೇಶ ತಂಡದ ಆಲ್‌ರೌಂಡರ್‌ ಶಾಕಿಬ್‌ ಅಲ್‌ ಹಸನ್‌ ಇರಲೇ ಬೇಕು. ಬ್ಯಾಟ್‌ ಮತ್ತು ಬೌಲ್‌ ಎರಡರಲ್ಲೂ ಬಾಂಗ್ಲಾ ತಂಡಕ್ಕೆ ಏಕಾಂಗಿಯಾಗಿ ಪ್ರಶಸ್ತಿ ಗೆದ್ದುಕೊಡಲಬಲ್ಲ ಆಟಗಾರ ಶಾಕಿಬ್‌. ವಿಶ್ವದ ವಿವಿಧ ಭಾಗಗಳಲ್ಲಿ ಆಡಿ ಸೈ ಎನಿಸಿಕೊಂಡಿರುವ ಗುಣಮಟ್ಟದ ಸ್ಪಿನ್ನರ್‌ ಆಗಿರುವ ಶಾಕಿಬ್‌, 198 ಏಕದಿನ ಪಂದ್ಯಗಳನ್ನಾಡಿದ್ದು 249 ವಿಕೆಟ್‌ಗಳನ್ನು ಪಡೆದ ಅನುಭವ ಹೊಂದಿದ್ದಾರೆ.

Story first published: Sunday, May 19, 2019, 14:35 [IST]
Other articles published on May 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X