9.2 ಓವರ್ ಬೌಲಿಂಗ್ ಮಾಡಿ 121 ರನ್ ಬಿಟ್ಟುಕೊಟ್ಟು ಅತಿಕೆಟ್ಟ ಬೌಲರ್ ಎನಿಸಿಕೊಂಡ ಭಾರತೀಯ!

ಸದ್ಯ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿದ್ದು, ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನೂ ಗೆದ್ದ ಟೀಮ್ ಇಂಡಿಯಾ ಇದೀಗ ವಿಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ.

IND vs WI: 3ನೇ ಟಿ20ಯಲ್ಲಿ ಮಿಂಚಿದ ಬೆನ್ನಲ್ಲೇ ದುಬಾರಿ ಕಾರು ಖರೀದಿಸಿದ ಸೂರ್ಯಕುಮಾರ್ ಯಾದವ್! ಬೆಲೆ ಎಷ್ಟು?IND vs WI: 3ನೇ ಟಿ20ಯಲ್ಲಿ ಮಿಂಚಿದ ಬೆನ್ನಲ್ಲೇ ದುಬಾರಿ ಕಾರು ಖರೀದಿಸಿದ ಸೂರ್ಯಕುಮಾರ್ ಯಾದವ್! ಬೆಲೆ ಎಷ್ಟು?

ಈ ಟಿ ಟ್ವೆಂಟಿ ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ ದ್ವಿತೀಯ ಪಂದ್ಯದಲ್ಲಿ ಸೋಲನ್ನು ಅನುಭವಿಸಿತ್ತು. ನಂತರ ನಡೆದ ತೃತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಗೆದ್ದ ಟೀಮ್ ಇಂಡಿಯಾ ಸರಣಿಯಲ್ಲಿ ಸದ್ಯ 2-1 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ. ಒಂದೆಡೆ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಮತ್ತೊಂದೆಡೆ ತಂಡದ ಕೆಲ ಆಟಗಾರರು ನಿರೀಕ್ಷಿಸಿದ ಪ್ರದರ್ಶನವನ್ನು ಈ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನೀಡುತ್ತಿಲ್ಲ.

Asia Cup 2022: 25 ದಿನ ಮುಂಚಿತವಾಗಿಯೇ ಏಷ್ಯಾಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!Asia Cup 2022: 25 ದಿನ ಮುಂಚಿತವಾಗಿಯೇ ಏಷ್ಯಾಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ!

ಹೌದು, ತಂಡದ ಪ್ರಮುಖ ಆಟಗಾರರು ವಿಶ್ರಾಂತಿಯಲ್ಲಿರುವ ಕಾರಣ ಹಲವು ಯುವ ಆಟಗಾರರಿಗೆ ಈ ವಿಂಡೀಸ್ ಸರಣಿಗಳಲ್ಲಿ ಭಾರತದ ಪರ ಕಣಕ್ಕಿಳಿಯುವ ಅವಕಾಶ ದೊರಕಿದ್ದು, ಕೆಲವರು ಈ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದ್ದಾರೆ. ಅದರಲ್ಲಿ ಪ್ರಮುಖ ಆಟಗಾರ ಅವೇಶ್ ಖಾನ್. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ಕಾರಣಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶ ಪಡೆದ ಅವೇಶ್ ಖಾನ್ ಐಪಿಎಲ್‌ನಲ್ಲಿ ಮಾಡಿದ್ದ ಮೋಡಿಯನ್ನು ಇಲ್ಲಿಯೂ ಮುಂದುವರಿಸುವಲ್ಲಿ ವಿಫಲರಾಗಿದ್ದಾರೆ ಎನ್ನಬಹುದು. ಸದ್ಯ ತಾನು ನೀಡಿರುವ ಪ್ರದರ್ಶನದ ಕಾರಣದಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗಿರುವ ಅವೇಶ್ ಖಾನ್ ಅಂತರರಾಷ್ಟ್ರೀಯ ಪ್ರದರ್ಶನದ ಕುರಿತ ಕಿರು ವಿವರ ಈ ಕೆಳಕಂಡಂತಿದೆ.

ಅವೇಶ್ ಖಾನ್ ಕಳೆದ ಮೂರು ಪಂದ್ಯಗಳ ಅಂಕಿಅಂಶ

ಅವೇಶ್ ಖಾನ್ ಕಳೆದ ಮೂರು ಪಂದ್ಯಗಳ ಅಂಕಿಅಂಶ

ಅವೇಶ್ ಖಾನ್ ತನ್ನ ಕಳೆದ ಮೂರು ಟಿ ಟ್ವೆಂಟಿ ಪಂದ್ಯಗಳಲ್ಲಿ 9.2 ಓವರ್ ಬೌಲಿಂಗ್ ಮಾಡಿ 121 ರನ್ ಬಿಟ್ಟುಕೊಟ್ಟು ಅತಿಕೆಟ್ಟ ಬೌಲರ್ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟಿ ಟ್ವೆಂಟಿ ಸರಣಿಯ ಪಂದ್ಯವೊಂದರಲ್ಲಿ 4 ಓವರ್ ಬೌಲಿಂಗ್ ಮಾಡಿದ್ದ ಅವೇಶ್ ಖಾನ್ 43 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದಿದ್ದರು, ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ ಟ್ವೆಂಟಿ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಅವೇಶ್ ಖಾನ್ 2.2 ಓವರ್ ಬೌಲಿಂಗ್ ಮಾಡಿ 31 ರನ್ ನೀಡಿ ಕೇವಲ ಒಂದು ವಿಕೆಟ್ ಕಬಳಿಸಿದ್ದರು ಹಾಗೂ ವಿಂಡೀಸ್ ವಿರುದ್ಧದ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ 3 ಓವರ್ ಬೌಲಿಂಗ್ ಮಾಡಿ 47 ರನ್ ನೀಡಿದ ಅವೇಶ್ ಖಾನ್ ಯಾವುದೇ ವಿಕಟ್ ಪಡೆಯಲಿಲ್ಲ. ಹೀಗೆ ತಾನು ಆಡಿದ ಕಳೆದ ಮೂರು ಟಿ ಟ್ವೆಂಟಿ ಪಂದ್ಯಗಳಲ್ಲಿಯೂ ಅತೀ ಕೆಟ್ಟದಾಗಿ ಪ್ರದರ್ಶನ ನೀಡಿರುವ ಅವೇಶ್ ಖಾನ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅತಿಕೆಟ್ಟ ಬೌಲರ್ ಎನಿಸಿಕೊಳ್ಳುತ್ತಿದ್ದಾರೆ.

ಅವೇಶ್ ಖಾನ್ ಒಟ್ಟಾರೆ ಟಿ ಟ್ವೆಂಟಿ ಅಂಕಿಅಂಶ

ಅವೇಶ್ ಖಾನ್ ಒಟ್ಟಾರೆ ಟಿ ಟ್ವೆಂಟಿ ಅಂಕಿಅಂಶ

ಇನ್ನು ಅವೇಶ್ ಖಾನ್ ಇಲ್ಲಿಯವರೆಗೂ ಒಟ್ಟು 10 ಅಂತರರಾಷ್ಟ್ರೀಯ ಟಿ ಟ್ವೆಂಟಿ ಇನ್ನಿಂಗ್ಸ್‌ನಲ್ಲಿ 206 ಎಸೆತಗಳನ್ನು ಎಸೆದು 313 ರನ್ ನೀಡಿ 9 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವೇಶ್ ಖಾನ್ ತನ್ನ ಕಳೆದ ಮೂರು ಟಿ ಟ್ವೆಂಟಿ ಪಂದ್ಯಗಳಲ್ಲಿ ನೀಡಿದ ಕಳಪೆ ಪ್ರದರ್ಶನದ ಕಾರಣದಿಂದಾಗಿ ಅವರ ಒಟ್ಟಾರೆ ಅಂತರರಾಷ್ಟ್ರೀಯ ಟಿ ಟ್ವೆಂಟಿ ಬೌಲಿಂಗ್ ಎಕಾನಮಿ 9.11ಕ್ಕೆ ಏರಿಕೆ ಕಂಡಿದೆ.

ಈ ಪ್ರದರ್ಶನದಿಂದ ಅವೇಶ್ ಖಾನ್‌ಗೆ ಹಿನ್ನಡೆ

ಈ ಪ್ರದರ್ಶನದಿಂದ ಅವೇಶ್ ಖಾನ್‌ಗೆ ಹಿನ್ನಡೆ

ಇನ್ನು ಅವೇಶ್ ಖಾನ್ ನೀಡಿರುವ ಈ ಕಳಪೆ ಪ್ರದರ್ಶನ ಅವರಿಗೇ ಮುಳುವಾಗುವ ಸಾಧ್ಯತೆಗಳಿವೆ. ಮುಂದಿನ ದಿನಗಳಲ್ಲಿ ಭಾರತ ಟಿ ಟ್ವೆಂಟಿ ಮಾದರಿಯಲ್ಲಿ ಪ್ರತಿಷ್ಠಿತ ಏಷ್ಯಾಕಪ್ ಮತ್ತು ಟಿ ಟ್ವೆಂಟಿ ಟೂರ್ನಿಗಳನ್ನು ಆಡುವುದರಿಂದ ಉತ್ತಮ ಪ್ರದರ್ಶನ ನೀಡುವ ಆಟಗಾರರಿಗೆ ಹೆಚ್ಚು ಅವಕಾಶಗಳನ್ನು ನೀಡಲಿದ್ದು, ಈ ರೀತಿ ಅತಿ ದುಬಾರಿ ಬೌಲಿಂಗ್ ಮಾಡಿರುವ ಅವೇಶ್ ಖಾನ್‌ಗೆ ಹೆಚ್ಚು ಅವಕಾಶ ಸಿಗುವುದಿಲ್ಲ ಎನ್ನಬಹುದು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Read more about: avesh khan
Story first published: Thursday, August 4, 2022, 12:51 [IST]
Other articles published on Aug 4, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X