WTC Final: ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ಮೈಲಿಗಲ್ಲು

ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ಬರೆದ Virat Kohli | Oneindia Kannada

ಸೌತಾಂಪ್ಟನ್: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ 7500+ ರನ್ ದಾಖಲೆ ಪಟ್ಟಿಗೆ ಕೊಹ್ಲಿ ಸೇರ್ಪಡೆಯಾಗಿದ್ದಾರೆ. ಶನಿವಾರ (ಜೂನ್ 19) ನಡೆದ ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದ್ದಾರೆ.

ಡಾನ್ ಬ್ರಾಡ್ಮನ್ ಬಗ್ಗೆ ತಿಳಿಯಬೇಕಾದ 5 ಕುತೂಹಲಕಾರಿ ಸಂಗತಿಗಳು!ಡಾನ್ ಬ್ರಾಡ್ಮನ್ ಬಗ್ಗೆ ತಿಳಿಯಬೇಕಾದ 5 ಕುತೂಹಲಕಾರಿ ಸಂಗತಿಗಳು!

ಸೌತಾಂಪ್ಟನ್‌ನ ಏಜಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ 40+ ರನ್ ಬಾರಿಸುವುದರೊಂದಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ 7500+ ರನ್ ದಾಖಲೆ ನಿರ್ಮಿಸಿದ್ದಾರೆ. 92 ಟೆಸ್ಟ್‌ ಪಂದ್ಯಗಳಲ್ಲಿ ಕೊಹ್ಲಿ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.

WTC Final, ಭಾರತ vs ನ್ಯೂಜಿಲೆಂಡ್, Live ಸ್ಕೋರ್‌

1
50883

ನಾಲ್ಕನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ವಿರಾಟ್, 105 ಎಸೆತಗಳಿಗೆ 40 ರನ್ ಬಾರಿಸಿದ್ದರು. 58.4 ಓವರ್‌ಗೆ ಭಾರತ 3 ವಿಕೆಟ್‌ ಕಳೆದು 134 ರನ್ ಗಳಿಸಿತ್ತು. ಕೊಹ್ಲಿ ಮತ್ತು ಅಜಿಂಕ್ಯ ರಹಾನೆ (22) ಆಡುತ್ತಿದ್ದರು. ಈ ಓವರ್‌ ವೇಳೆ ಭಾರತ ತಂಡ ರೋಹಿತ್ ಶರ್ಮಾ (34), ಶುಬ್ಮನ್ ಗಿಲ್ (28), ಮತ್ತು ಚೇತೇಶ್ವರ ಪೂಜಾರ (8) ವಿಕೆಟ್ ಕಳೆದುಕೊಂಡಿತ್ತು.

WTC final: ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಮ್ ಇಂಡಿಯಾWTC final: ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ಟೀಮ್ ಇಂಡಿಯಾ

ಇದೇ ಪಂದ್ಯದಲ್ಲಿ ಕೊಹ್ಲಿ 61 ಟೆಸ್ಟ್ ಪಂದ್ಯಗಳಿಗೆ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಳ್ಳುವ ಮೂಲಕ ಮಾಜಿ ನಾಯಕ ಎಂಎಸ್ ಧೋನಿ (60) ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ. 32ರ ಹರೆಯದ ಕೊಹ್ಲಿ 254 ಏಕದಿನ ಪಂದ್ಯಗಳಲ್ಲಿ 12169 ರನ್, 89 ಟಿ20ಐ ಪಂದ್ಯಗಳಲ್ಲಿ 3159 ರನ್ ದಾಖಲೆ ಹೊಂದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, June 19, 2021, 21:13 [IST]
Other articles published on Jun 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X