ಬೆಳಿಗ್ಗೆ ಸೆಂಚುರಿ ಹೊಡೆದ್ರೆ ಸಂಜೆ ಬಂದು ಪಾನಿಪೂರಿ ಮಾರುತಿದ್ದ u-19 ಹೀರೋನ 'ಯಶಸ್ವಿ' ಕಥೆ

ಅಂಡರ್ 19 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಕಿರಿಯರು ಫೈನಲ್ ಪ್ರವೇಶ ಮಾಡಿದ್ದಾರೆ. ಪಾಕಿಸ್ತಾನದ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದುಕೊಂಡಿದೆ. ಒಂದೂ ವಿಕೆಟ್ ಕಳೆದುಕೊಳ್ಳದ ಟೀಮ್ ಇಂಡಿಯಾ ಹತ್ತು ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿ ಫೈನಲ್ ಪ್ರವೇಶ ಮಾಡಿದೆ.

ಅಜೇಯವಾಗಿ ಫೈನಲ್ ಪ್ರವೇಶ ಮಾಡಿರುವ ಟೀಮ್ ಇಂಡಿಯಾ ಅಂಡರ್ 19 ತಂಡದಲ್ಲಿ ಪ್ರತಿಭಾನ್ವಿತ ಯುವ ಆಟಗಾರರಿದ್ದಾರೆ. ಅದರಲ್ಲೂ ಓರ್ವ ಆಟಗಾರ ಮಾತ್ರ ಇಡೀ ಟೂರ್ನಿಯಲ್ಲಿ ತನ್ನತ್ತ ಗಮನ ಕೇಂದ್ರೀಕರಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅದು ಬೇರೆ ಯಾರೂ ಅಲ್ಲ. ಪಾಕಿಸ್ತಾನದ ವಿರುದ್ಧ ಅಜೇಯ ಶತಕವನ್ನು ಬಾರಿಸಿದ 18ರ ಹರೆಯದ ಯಶಸ್ವೀ ಜೈಸ್ವಾಲ್. ಪಾಕಿಸ್ತಾನ ಮಾತ್ರವಲ್ಲ ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲಿ ಅದ್ಭುತವಾಗಿ ಮಿಂಚಿ ಗೆಲುವಿಗೆ ಕಾರಣವಾಗಿದ್ದಾರೆ. ಯಶಸ್ವಿ ಜೈಸ್ವಾಲ್ ಯಶಸ್ಸಿನ ಹಾದಿಯತ್ತ ಒಮ್ಮೆ ಕಣ್ಣು ಹಾಯಿಸೋಣ.

ವಿಶ್ವಕಪ್‌ನಲ್ಲಿನ ಸಾಧನೆ:

ವಿಶ್ವಕಪ್‌ನಲ್ಲಿನ ಸಾಧನೆ:

ಯಶಸ್ವಿ ಜೈಸ್ವಾಲ್ ವಿಶ್ವಕಪ್‌ನಲ್ಲಿ ಆಡಿದ ಐದು ಪಂದ್ಯಗಳಲ್ಲಿ ಮೂರು ಅರ್ಧ ಶತಕ ಮತ್ತು ಒಂದು ಅಜೇಯ ಶತಕದ ಸಾಧನೆಯನ್ನು ಮಾಡಿದ್ದಾರೆ. ಇದು ಈ ವಿಶ್ವಕಪ್‌ನ ಅತ್ಯುತ್ತಮ ಸಾಧನೆಯಾಗಿದೆ. ಸೆಮಿ ಫೈನಲ್‌ನಲ್ಲಿ ತೋರಿದ ಪ್ರದರ್ಶನ ಹುಬ್ಬೇರುವಂತೆ ಮಾಡಿದೆ.

ಪಾಕ್ ವಿರುದ್ಧ ಶ್ರೇಷ್ಠ ಇನ್ನಿಂಗ್ಸ್:

ಪಾಕ್ ವಿರುದ್ಧ ಶ್ರೇಷ್ಠ ಇನ್ನಿಂಗ್ಸ್:

ಪಾಕಿಸ್ತಾನದ ವಿರುದ್ಧ ಜೈಸ್ವಾಲ್ ಆಡಿದ್ದು ಶ್ರೇಷ್ಠ ಇನ್ನಿಂಗ್ಸ್. ಪಾಕಿಸ್ತಾನ ದೊಡ್ಡ ಸಾಮಾನ್ಯಮೊತ್ತದ ಸವಾಲನ್ನು ಸ್ವೀಕರಿಸಿದ ಭಾರತ ಎಲ್ಲೂ ಎಡವದಂತೆ ಜೈಸ್ವಾಲ್ ನೋಡೊಕೊಂಡರು. ತಂಡದ ಅಗತ್ಯಕ್ಕೆ ತಕ್ಕದಾಗಿ ಇನ್ನಿಂಗ್ಸನ್ನು ಕಟ್ಟಿ ಬೆಳೆಸಿದರು. ಅಂತಿಮವಾಗಿ ಸಿಕ್ಸರ್ ಬಾರಿಸಿ ಶತಕವನ್ನೂ ಪೂರೈಸಿ ಗೆಲುವನ್ನು ತಮ್ಮದಾಗಿಸಿಕೊಂಡರು.

ಪಾನಿಪೂರಿ ಮಾರಿ ಕ್ರಿಕೆಟ್ ಬದುಕು ಕಟ್ಟಿಕೊಂಡ:

ಪಾನಿಪೂರಿ ಮಾರಿ ಕ್ರಿಕೆಟ್ ಬದುಕು ಕಟ್ಟಿಕೊಂಡ:

ಕಡು ಬಡತನದ ಹಿನ್ನೆಲೆಯ ಆಟಗಾರ ಯಶಸ್ವಿ ಜೈಸ್ವಾಲ್. ಬದುಕಿನ ಅನಿವಾರ್ಯತೆಗೆ ಪಾನಿಪೂರಿ ಮಾರಾಟಮಾಡಿ ಬದುಕು ಕಟ್ಟಿಕೊಳ್ಳಲು ತಂದೆಗೆ ಸಹಾಯ ಮಾಡಿದ್ರು ಜೈಸ್ವಾಲ್. ಕಡು ಬಡತನ ಇದ್ದ ಕಾರಣ ಕ್ರಿಕೆಟರ್ ಆಗುವ ಕನಸು ಅಷ್ಟು ಸುಲಭವಾಗಿ ಈಡೇರಲಿಲ್ಲ. ಆದರೆ ಈತನ ಪರಿಶ್ರಮಕ್ಕೆ ಬಡತನ ಅಡ್ಡಿ ಆಗಲೂ ಆಗಲಿಲ್ಲ. ಮ್ಯಾಚ್‌ಗಳಿಗೆ ಹೋಗುತ್ತಿದ್ದ ಜೈಸ್ವಾಸ್ ಶತಕಗಳನ್ನು ಬಾರಿಸುತ್ತಿದ್ದರು. ಆದರೆ ಸಂಜೆ ಬಂದು ಪಾನಿಪೂರಿ ಮಾಟಾರ ಮಾಡುತ್ತಿದ್ದರು.

ಐಪಿಎಲ್‌ನಲ್ಲಿ 2.40 ಬೆಲೆಗೆ ಮಾರಾಟ:

ಐಪಿಎಲ್‌ನಲ್ಲಿ 2.40 ಬೆಲೆಗೆ ಮಾರಾಟ:

ಜೈಸ್ವಾಲ್ ಸಾಧನೆಗೆ ಈ ಬಾರಿಯ ಐಪಿಎಲ್ ಹರಾಜಿಲ್ಲಿ ಉತ್ತಮ ಮೊತ್ತ ಲಭ್ಯವಾಗಿದೆ. ರಾಜಸ್ಥಾನ ರಾಯಲ್ಸ್ ತಂಡ ಯಶಸ್ವಿ ಜೈಸ್ವಾಲ್‌ಗೆ ಬರೊಬ್ಬರಿ 2.40 ಕೋಟಿ ಬಿಡ್ ಮಾಡಿ ತಂಡಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದೆ. 20 ಲಕ್ಷ ಮೂಲ ಬೆಲೆ ಹೊಂದಿದ್ದ ಜೈಸ್ವಾಲ್ 12 ಪಟ್ಟು ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದ್ದಾರೆ.

ಹೈಸ್ಕೂಲ್‌ನಲ್ಲೇ ದಾಖಲೆ ಬೆನ್ನತ್ತಿದ ಸಾಹಸಿ

ಹೈಸ್ಕೂಲ್‌ನಲ್ಲೇ ದಾಖಲೆ ಬೆನ್ನತ್ತಿದ ಸಾಹಸಿ

ಹೈಸ್ಕೂಲು ಕಲಿಯುತ್ತಿದ್ದಾಗಲೇ ಅಂದರೆ 12ನೇ ವರ್ಷದವರಾಗಿದ್ದಾಗಲೇ ಯಶಶ್ವಿ ಜೈಸ್ವಾಲ್ ದಾಖಲೆ ಪುಟ ಸೇರಿದ್ದರು. 2014ರ ಜನವರಿಯಲ್ಲಿ ನಡೆದಿದ್ದ ಗೈಲ್ಸ್ ಶೀಲ್ಡ್ ಶಾಲೆಗಳ ಕ್ರಿಕೆಟ್ ಪಂದ್ಯದಲ್ಲಿ 319 ರನ್‌ಗಳ ಸುದೀರ್ಘ ಬ್ಯಾಟಿಂಗ್ ಮತ್ತು 99 ರನ್‌ಗೆ 13 ವಿಕೆಟ್‌ ಮುರಿದು ಜೈಸ್ವಾಲ್ ದಾಖಲೆ ನಿರ್ಮಿಸಿದ್ದರು. ಅಂಜುಮಾನ್ ಇಸ್ಲಾಮ್ ಹೈಸ್ಕೂಲ್ ಪ್ರತಿನಿಧಿಸಿದ್ದ ಯಶಸ್ವಿ, ರಾಜಾ ಶಿವಾಜಿ ವಿದ್ಯಾಮಂದಿರ್ ವಿರುದ್ಧ ಈ ದಾಖಲೆಯ ಪ್ರದರ್ಶನ ನೀಡಿದ್ದರು.

ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ದ್ವಿಶತಕದ ಸಾಧನೆ ಮಾಡಿದ ಕಿರಿಯ ಆಟಗಾರ

ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ದ್ವಿಶತಕದ ಸಾಧನೆ ಮಾಡಿದ ಕಿರಿಯ ಆಟಗಾರ

2019-20ರ ವಿಜಯ್ ಹಜಾರೆ ಟ್ರೋಫಿ ಪಂದ್ಯವೊಂದರಲ್ಲಿ ಯಶಸ್ವಿ ದ್ವಿಶತಕ ಬಾರಿಸಿದ್ದರು. ಆ ಮೂಲಕ ಲಿಸ್ಟ್‌ 'ಎ' ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಅತೀ ಕಿರಿಯ ಆಟಗಾರನಾಗಿ ಜೈಸ್ವಾಲ್ ಮಿಂಚಿದ್ದರು. ದಕ್ಷಿಣ ಆಫ್ರಿಕಾದ ಆ್ಯಲನ್ ಬ್ಯಾರೋ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಯಶಸ್ವಿಯಿ ಜೈಸ್ವಾಲ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, February 5, 2020, 11:01 [IST]
Other articles published on Feb 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X