ಬೆಲೆ ಕಳೆದುಕೊಂಡ ಯುವರಾಜ್‌ ಸಿಂಗ್‌,ಹರ್ಭಜನ್ ಸಿಂಗ್

Posted By:
Yuvaraj singh gets least price in IPL auction

ಬೆಂಗಳೂರು, ಜನವರಿ 27: ಭಾರತದ ಹೊಡಿ ಬಡಿ ಆಟಗಾರ ಯುವರಾಜ್‌ ಸಿಂಗ್ ಐಪಿಎಲ್ 2018 ರಲ್ಲಿ ಬೆಲೆ ಕಳೆದುಕೊಂಡಿದ್ದಾರೆ!

ಕಳೆದ ಬಾರಿ ಹೈದರಾಬಾದ್ ಪರ ಆಡಿ 12 ಪಂದ್ಯಗಳಲ್ಲಿ 200 ಕ್ಕೂ ಹೆಚ್ಚು ರನ್ ಬಾರಿಸಿದ್ದ ಯುವರಾಜ್ ಅವರು ಈ ಬಾರಿ ಕಡಿಮೆ ಮೊತ್ತಕ್ಕೆ ಹರಾಜಾಗಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಯುವರಾಜ್ ಸಿಂಗ್ ಅವರನ್ನು ಕೇವಲ 2 ಕೋಟಿ ಹಣಕ್ಕೆ ಖರೀದಿಸಿದೆ. ಇಷ್ಟು ಕಡಿಮೆ ಮೊತ್ತವಿದ್ದರೂ ಸಹಿತ ಸನ್‌ ರೈಸಸ್ ಹೈದರಾಬಾದ್ ತಂಡವು ಅವರನ್ನು ಆರ್‌ಟಿಎಂ ನಿಯಮ ಬಳಸಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ನಕಾರ ವ್ಯಕ್ತಪಡಿಸಿದೆ.

LIVE: ಐಪಿಎಲ್ 2018 ಹರಾಜು: ಡೆಲ್ಲಿ ಡೇರ್ ಡೆವಿಲ್ಸ್ ಪಾಲಾದ ಗಂಭೀರ್

ಇತ್ತೀಚಿನ ದಿನಗಳಲ್ಲಿ ತಂಡದಿಂದ ಹೊರಗೇ ಇರುವ ಯುವರಾಜ್‌ ಅವರಿಗೆ ಮೌಲ್ಯ ಕುಸಿದಿದೆ. ಯುವರಾಜ್ ಮಾತ್ರವಲ್ಲದೆ ಅವರ ಆತ್ಮೀಯ ಗೆಳೆಯ ಟರ್ಬನೇಟರ್ ಖ್ಯಾತಿಯ ಹರ್ಭಜನ್ ಸಿಂಗ್ ಅವರು ಕೂಡ ಕಡಿಮೆ ಮೊತ್ತಕ್ಕೆ ಹರಾಜಾಗಿದ್ದಾರೆ.

ಐಪಿಎಲ್ ಆಟಗಾರರ ಹರಾಜು - ವಿಶೇಷ ಪುಟ

ಹರ್ಭಜನ್ ಸಿಂಗ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 2 ಕೋಟಿ ಹಣಕ್ಕೆ ಖರೀದಿಸಿದೆ. ಕ್ರಿಕೆಟ್‌ನಲ್ಲಿ ಪ್ರಸ್ತುತ ಆಟಕ್ಕಷ್ಟೆ ಬೆಲೆ ಇತಿಹಾಸ ಇಲ್ಲಿ ಲೆಕ್ಕಕ್ಕಿಲ್ಲ ಎಂಬುದನ್ನು ಐಪಿಎಲ್ 2018 ರ ಆಟಗಾರರು ಹರಾಜು ಮತ್ತೊಮ್ಮೆ ಸಾಬೀತು ಪಡಿಸುತ್ತಿದೆ.

Story first published: Saturday, January 27, 2018, 11:48 [IST]
Other articles published on Jan 27, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ