ಕುಲ್‌ದೀಪ್ ಮತ್ತು ತನಗೆ ತಂಡದಲ್ಲಿ ಸರಿಯಾದ ಅವಕಾಶ ಸಿಗದಿರುವುದಕ್ಕೆ ಕಾರಣ ಬಿಚ್ಚಿಟ್ಟ ಚಹಾಲ್

Yuzvendra Chahal ಕಡೆಗೂ ಸತ್ಯವನ್ನು ಬಿಚ್ಚಿಟ್ಟಿದ್ದಾರೆ | Oneindia Kannada

ತನಗೆ ಮತ್ತು ಕುಲ್‌ದೀಪ್ ಯಾದವ್‌ಗೆ ಟೀಂ ಇಂಡಿಯಾ ತಂಡದಲ್ಲಿ ಸತತವಾಗಿ ಆಡುವ ಅವಕಾಶ ಸಿಗದಿರುವುದರ ಬಗ್ಗೆ ಯುಜುವೇಂದ್ರ ಚಹಾಲ್ ಮೌನ ಮುರಿದಿದ್ದಾರೆ. 2019ರ ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಸೋಲನ್ನು ಕಂಡಿತ್ತು. ಹೀಗಾಗಿ ಪಂದ್ಯದ ಮಧ್ಯಮ ಓವರ್‌ಗಳಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದ ಚಹಾಲ್ ಮತ್ತು ಕುಲ್‌ದೀಪ್ ಇಬ್ಬರನ್ನೂ ತಂಡದಿಂದ ಹೊರಗಿಡಲಾಯಿತು.

ಒಂದೇ ಓವರ್‌ನಲ್ಲಿ ಸಿಕ್ಸ್ ಸಿಕ್ಸರ್ ಚಚ್ಚಿದ ಅರಿಥರನ್ ವಸೀಕರನ್

ಆ ಪಂದ್ಯದ ಬಳಿಕ ಯುಜುವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಯಾದವ್ ಒಂದೇ ಪಂದ್ಯದಲ್ಲಿ ಆಡುವ ಅವಕಾಶವನ್ನೇ ಪಡೆದಿಲ್ಲ. ಯಾವುದಾದರೂ ಸರಣಿಗೆ ಯುಜುವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಯಾದವ್ ಇಬ್ಬರೂ ಆಯ್ಕೆಯಾದರೂ ಸಹ ಅರ್ಧದಷ್ಟು ಪಂದ್ಯಗಳಲ್ಲಿ ಚಹಾಲ್ ಮತ್ತು ಉಳಿದ ಪಂದ್ಯಗಳಲ್ಲಿ ಕುಲ್‌ದೀಪ್ ಆಡುವ ಅನಿವಾರ್ಯತೆ ಉಂಟಾಗಿದೆ. ಇದೀಗ ಯುಜುವೇಂದ್ರ ಚಹಾಲ್ ತಾನು ಮತ್ತು ಕುಲ್‌ದೀಪ್ ಒಟ್ಟಿಗೆ ತಂಡದಲ್ಲಿ ಆಡದೆ ಇರುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಐಪಿಎಲ್ ಅಥವಾ ಪಿಎಸ್ಎಲ್ ಯಾವುದು ಶ್ರೀಮಂತ ಲೀಗ್? ಮಾಜಿ ಆರ್‌ಸಿಬಿ ಆಟಗಾರನ ಉತ್ತರವಿದು

'ನಾನು ಮತ್ತು ಕುಲ್‌ದೀಪ್ ಸರಣಿಗೆ ಆಯ್ಕೆಯಾದರೂ ಹಾರ್ದಿಕ್ ಪಾಂಡ್ಯ ತಂಡದಲ್ಲಿರುವ ಕಾರಣ ಇಬ್ಬರಲ್ಲೊಬ್ಬರು ಬೆಂಚ್ ಕಾಯುವ ಪರಿಸ್ಥಿತಿ ಎದುರಾಗುತ್ತದೆ. 2018ರಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೊಳಗಾಗಿ ತಂಡದಿಂದ ಹೊರಗುಳಿದಾಗ ರವೀಂದ್ರ ಜಡೇಜಾ ಮತ್ತೆ ಟೀಮ್ ಇಂಡಿಯಾವನ್ನು ಸೇರಿಕೊಂಡರು, ಅವರೂ ಕೂಡ ಸ್ಪಿನ್ನರ್ ಆದಕಾರಣ ಕುಲ್‌ದೀಪ್ ಮತ್ತು ನಾನು ಇಬ್ಬರಲ್ಲೊಬ್ಬರು ಮಾತ್ರ ತಂಡದಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ 5 ಪಂದ್ಯಗಳ ಸರಣಿಯಲ್ಲಿ 3 ಪಂದ್ಯಗಳಲ್ಲಿ ನನಗೆ ಅವಕಾಶ ದೊರೆತರೆ ಉಳಿದ ಪಂದ್ಯಗಳಲ್ಲಿ ಕುಲ್‌ದೀಪ್ ಅವಕಾಶ ಪಡೆಯುತ್ತಾರೆ ಅಥವಾ ಕುಲ್‌ದೀಪ್ 3 ಪಂದ್ಯಗಳನ್ನಾಡಿದರೆ ನಾನು 2 ಪಂದ್ಯಗಳನ್ನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಯುಜುವೇಂದ್ರ ಚಹಾಲ್ ತಾನು ಮತ್ತು ಕುಲ್‌ದೀಪ್ ಯಾದವ್ ಯಾಕೆ ಒಂದೇ ಪಂದ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂಬುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, May 21, 2021, 18:12 [IST]
Other articles published on May 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X