ಮದುವೆ ನೋಂದಾಯಿಸಿದ ಜಹೀರ್ ಖಾನ್- ಸಾಗರಿಕಾ

Posted By:

ಮುಂಬೈ, ನವೆಂಬರ್ 23: ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರು ತಮ್ಮ ಗೆಳತಿ, ಬಾಲಿವುಡ್ ನಟಿ ಸಾಗರಿಕಾ ಘಾಟ್ಕೆ ಜತೆ ವಿವಾಹ ಬಂಧನಕ್ಕೊಳಪಟ್ಟಿದ್ದಾರೆ. ತಮ್ಮ ಮದುವೆಯನ್ನು ಸರಳ ರೀತಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

ಜಹೀರ್ ಎಂಗೇಜ್ ಮೆಂಟ್ ಗೆ ಸಾಕ್ಷಿಯಾದ ಕ್ರಿಕೆಟ್ ತಾರೆಯರು

ಕ್ರಿಕೆಟ್ ಹಾಗೂ ಬಾಲಿವುಡ್ ನಡುವಿನ ನಂಟು ಮತ್ತೊಮ್ಮೆ ಜಹೀರ್ ಹಾಗೂ ಸಾಗರಿಕಾರೊಂದಿಗೆ ಮುಂದುವರೆದಿದೆ. ಯುವರಾಜ್ ಸಿಂಗ್ ಹಾಗೂ ಹಜೆಲ್ ಕೀಚ್ ಈ ಪಟ್ಟಿಯಲ್ಲಿರುವ ಇತ್ತೀಚಿನ ಜೋಡಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

Zaheer Khan and Sagarika Ghatge registered their marriage

ಗುರುವಾರದಂದು ನೋಂದಣಿ ಕಚೇರಿಯಲ್ಲಿ ಜಹೀರ್‌ ಖಾನ್‌ ಮತ್ತು ಸಾಗರಿಕಾ ಘಾಟ್ಗೆ ಅವರು ಸರಳವಾಗಿ ಮದುವೆಯಾದರು. ನವೆಂಬರ್ 27 ರಂದು ಆಪ್ತರು, ಸೆಲೆಬ್ರಿಟಿಗಳು ಮತ್ತು ಕ್ರಿಕೆಟಿಗರಿಗಾಗಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದಾರೆ.

ಜಹೀರ್‌ ಖಾನ್‌ ಅವರ ಪ್ರೊ ಸ್ಪೋರ್ಟ್ಸ್‌ ಫಿಟ್ನೆಸ್‌ ಸ್ಟುಡಿಯೋದ ಬುಸಿನೆಸ್‌ ಮುಖ್ಯಸ್ಥೆ ಅಂಜನಾ ಶರ್ಮಾ ನವ ದಂಪತಿಯ ಫೋಟೊವನ್ನು ಹಂಚಿಕೊಂಡಿದ್ದಾರೆ. ಸಾಗರಿಕಾ ಸಾಂಪ್ರದಾಯಿಕ ಸೀರೆ ತೊಟ್ಟಿದ್ದರೆ, ಜಹೀರ್‌ ಖುರ್ತಾ ಧರಿಸಿದ್ದಾರೆ.

ಮಾಜಿ ವೇಗಿ ಆಶೀಶ್ ನೆಹ್ರಾ ದಂಪತಿಗಳು, ಸಾಗರಿಕಾ ಅವರ ಗೆಳತಿ ನಟಿ ವಿದ್ಯಾ ಮಳವಾಡೆ ಅವರು ಸರಳ ಸಮಾರಂಭದಲ್ಲಿ ಭಾಗಿಯಾಗಿದ್ದರು.

Zaheer Khan and Sagarika Ghatge registered their marriage

ಭಾರತದ ಪರ 92 ಟೆಸ್ಟ್ ಹಾಗೂ 200 ಏಕದಿನ ಪಂದ್ಯಗಳನ್ನಾಡಿರುವ ಜಹೀರ್ ಅವರು ಕ್ರಮವಾಗಿ 311 ಹಾಗೂ 282 ವಿಕೆಟ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುತ್ತಿದ್ದಾರೆ.

ಇನ್ನೊಂದೆಡೆ ಮೀರತ್‌ನಲ್ಲಿ ಭುವನೇಶ್ವರ್‌ ಕುಮಾರ್‌ ಹಾಗೂ ನೂಪುರ್‌ ನಾಗರ್ ಅವರ ಮದುವೆ ಕೂಡಾ ಇಂದು ಆಯೋಜನೆಯಾಗಿದೆ.

Story first published: Thursday, November 23, 2017, 15:08 [IST]
Other articles published on Nov 23, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ