ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಥಾಯ್ಲೆಂಡ್: ಕಗ್ಗತ್ತಲ ಗುಹೆಯೊಳಗಿಂದ ನಾಲ್ವರು ಹುಡುಗರು ಬಚಾವ್

ಮಾಯ್ ಸೈ, ಜುಲೈ 9: ಥಾಯ್ಲೆಂಡ್‌ನ ಕಗ್ಗತ್ತಲ ಗುಹೆಯೊಂದರಲ್ಲಿ ಎರಡು ವಾರಗಳಿಂದ ಸಿಲುಕಿರುವ ಫುಟ್ಬಾಲ್ ಆಟಗಾರರಲ್ಲಿ ಹೊರಜಗತ್ತಿಗೆ ಮತ್ತೆ ಜೀವಂತವಾಗಿ ಬರುವ ಆಸೆ ಬಲವಾಗಿದೆ.

ಗುಹೆಯೊಳಗೆ ಸಿಲುಕಿರುವ 13 ಮಂದಿಯ ಪೈಕಿ ನಾಲ್ವರು ಬಾಲಕರನ್ನು ಭಾನುವಾರ ರಕ್ಷಿಸಲಾಗಿದೆ.

ಥಾಯ್ಲೆಂಡ್: ಸಾವನ್ನು ಗೆದ್ದು ಬಂದ ಫುಟ್ಬಾಲ್ ತಂಡದ ಬಾಲಕರುಥಾಯ್ಲೆಂಡ್: ಸಾವನ್ನು ಗೆದ್ದು ಬಂದ ಫುಟ್ಬಾಲ್ ತಂಡದ ಬಾಲಕರು

ಉಳಿದ ಬಾಲಕರು ಮತ್ತು ಅವರ ಫುಟ್ಬಾಲ್ ತಂಡದ ಕೋಚ್‌ಅನ್ನು ಗುಹೆಯಿಂದ ಹೊರಗೆ ಕರೆತಂದು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಮೃತಪಟ್ಟ ಸಮನ್ ಗುನನ್ ಈಗ ನ್ಯಾಷನಲ್ ಹೀರೋ

ಫುಟ್ಬಾಲ್ ತಂಡವೊಂದರ 11-16 ವಯಸ್ಸಿನ ಬಾಲಕರು ಮತ್ತು ಅವರ 25 ವರ್ಷದ ಕೋಚ್ ಪ್ರವಾಸಕ್ಕೆಂದು ತೆರಳಿದ್ದಾಗ ಇಲ್ಲಿನ ಬೃಹತ್ ಗುಹೆಯೊಳಗೆ ತೆರಳಿದ್ದರು. ಆದರೆ, ವಿಪರೀತ ಮಳೆಯಿಂದಾಗಿ ಉಂಟಾದ ಪ್ರವಾಹದಲ್ಲಿ ಅವರು ಸಿಲುಕಿದ್ದರು.

ಥೈಲ್ಯಾಂಡ್ ಗುಹೆಯೊಳಗೆ ಸಿಲುಕಿರುವ ಕೋಚ್ ಬರೆದ ಮನಮಿಡಿಯುವ ಪತ್ರ

ನೀರಿನ ಮಟ್ಟ ಅಪಾಯಕಾರಿ ಪ್ರಮಾಣದಲ್ಲಿ ಇರುವುದರಿಂದ ಅವರನ್ನು ಅಲ್ಲಿಂದ ಹೊರಕ್ಕೆ ಕರೆತರಲು ಸಾಕಷ್ಟು ಹರಸಾಹಸಪಡಬೇಕಾಗಿದೆ.

ಇನ್ನೂ ನಾಲ್ಕು ದಿನ ಬೇಕಾಗಬಹುದು

ಇನ್ನೂ ನಾಲ್ಕು ದಿನ ಬೇಕಾಗಬಹುದು

ಈಜು ಪರಿಣತರು ಗುಹೆಯ ಸಂಕೀರ್ಣ ಭಾಗದೊಳಗೆ ಪ್ರವೇಶಿಸಿದ್ದಾರೆ. ನೌಕಾ ಪಡೆಯ ರಕ್ಷಣಾ ತಂಡವು ನಾಲ್ವರು ಬಾಲಕರನ್ನು ರಕ್ಷಿಸಿದ್ದಾಗಿ ಫೇಸ್‌ಬುಕ್ ಪುಟದಲ್ಲಿ ಮಾಹಿತಿ ನೀಡಿದೆ.

ರಕ್ಷಿಸಲಾದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರೀಕ್ಷೆಗಿಂತಲೂ ಉತ್ತಮವಾಗಿ ಕಾರ್ಯಾಚರಣೆ ನಡೆದಿದೆ. ಹೆಚ್ಚು ಆರೋಗ್ಯವಂತಾಗಿರುವವರನ್ನು ಮೊದಲು ಹೊರಗೆ ಕರೆತರಲಾಗಿದೆ. ಮುಂದಿನ ಹಂತದ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ ಎಂದು ಚಿಯಾಂಗ್ ರೈನ ಹಂಗಾಮಿ ಗವರ್ನರ್ ನರೊಂಗ್ಸಕ್ ಒಸಟನಕೊರ್ನ್ ಹೇಳಿದ್ದಾರೆ.

ಒಟ್ಟು ಎಲ್ಲ 13 ಮಂದಿಯ ರಕ್ಷಣೆಗೆ ಇನ್ನೂ ಎರಡರಿಂದ ನಾಲ್ಕು ದಿನಗಳ ಕಾರ್ಯಾಚರಣೆ ನಡೆಸಬೇಕಾಗಲಿದೆ. ಇದು ಹವಾಮಾನ ಮತ್ತು ಪ್ರವಾಹ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿದೇಶಿ ಮುಳುಗುತಜ್ಞರ ಸಹಾಯ

ವಿದೇಶಿ ಮುಳುಗುತಜ್ಞರ ಸಹಾಯ

13 ವಿದೇಶಿ ಮತ್ತು 5 ಥಾಯ್ಲೆಂಡ್ ಮುಳುಗುತಜ್ಞರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರತಿ ಒಬ್ಬ ಬಾಲಕನಿಗೆ ಇಬ್ಬರಂತೆ ಮುಳುಗುತಜ್ಞರ ನೆರವು ನೀಡಲಾಗುತ್ತಿದೆ.

ಗುಹೆಯೊಳಗಿಂದ ಬಾಲಕರು ಮತ್ತು ಅವರ ಕೋಚ್ ಅನ್ನು ಹೊರಗೆ ಕರೆತರುವುದು ಸುಲಭವಾಗಿಲ್ಲ. ಗುಹೆಯ ಒಳಗೆ ಕಗ್ಗತ್ತಲೆ ಕವಿದಿದ್ದು, ಚಿಕ್ಕದಾದ ಕಿಂಡಿಯಲ್ಲಿ ಕೆಸರಿನ ನೀರಿನೊಳಗೆ ಸಾಗುವುದು ಅಪಾಯಕಾರಿಯಾಗಿದೆ. ಅಲ್ಲದೆ ಆಮ್ಲಜನಕದ ಕೊರತೆಯೂ ಇದೆ.

ಅಪಾಯಕಾರಿ ಸಾಹಸ

ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದ ನೌಕಾದಳದ ನಿವೃತ್ತ ಅಧಿಕಾರಿಯೊಬ್ಬರು ಶುಕ್ರವಾರ ಮೃತಪಟ್ಟಿದ್ದರು. ನೀರಿನಡಿಯಿಂದ ಮಕ್ಕಳನ್ನು ಹೊರಗೆ ಕರೆತರುವುದು ಬಲು ಅಪಾಯಕಾರಿಯಾಗಿದೆ. ಏಕೆಂದರೆ ಅವರಿನ್ನೂ ಬಾಲಕರಾಗಿರುವುದರಿಂದ ಮತ್ತು ಅವರಿಗೆ ಈಜಿನಲ್ಲಿ ಪರಿಣತಿ ಇಲ್ಲದಿರುವುದರಿಂದ ಇದು ದುಸ್ಸಾಹಸವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಮಕ್ಕಳಿಗೆ ನೀರಿನಲ್ಲಿ ಮುಳುಗಿ ಹೊರಗೆ ಬರುವ ತರಬೇತಿಯನ್ನು ನೀಡಲಾಗುತ್ತಿದೆ.

ಗುಹೆಯ ಒಳಭಾಗದ ಹಾದಿ ಸಾಕಷ್ಟು ತಿರುವುಗಳನ್ನು ಹೊಂದಿದ್ದು, ಕಿರಿದಾದ ಮಾರ್ಗದಲ್ಲಿ ನೆರೆ ಆವರಿಸಿದೆ. ಆದರೆ, ಇದಕ್ಕೂ ಮುಂದೆ ಇದ್ದ ಪ್ರತಿಕೂಲ ಹವಾಮಾನ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದು, ಮಳೆ ಪ್ರಮಾಣ ಕಡಿಮೆ ಆಗಿರುವುದರಿಂದ ನೀರಿನ ಮಟ್ಟ ಇಳಿಕೆಯಾಬಹುದು ಎಂದು ಅಧಿಕಾರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಸಬ್‌ಮೆರಿನ್

ಗುಹೆಯೊಳಗೆ ಸಿಲುಕಿ ಸಂಕಷ್ಟದಲ್ಲಿರುವ ಬಾಲಕರ ರಕ್ಷಣೆಗೆ 'ಮಕ್ಕಳ ಗಾತ್ರದ ಸಬ್‌ಮೆರಿನ್‌'ಗಳನ್ನು ಅಮೆರಿಕ ರವಾನಿಸಲಿದೆ.

ಲಾಸ್ ಏಂಜಲಿಸ್‌ನಲ್ಲಿರುವ ಸ್ಪೇಸ್ ಎಕ್ಸ್ ಮತ್ತು ಟೆಲ್ಸಾ ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ತಮ್ಮ ಬಳಿ ಇರುವ ಮಕ್ಕಳ ಗಾತ್ರದ ಸಬ್‌ಮೆರಿನ್‌ಗಳನ್ನು ಥಾಯ್ಲೆಂಡ್‌ಗೆ ರವಾನಿಸುವುದಾಗಿ ತಿಳಿಸಿದ್ದಾರೆ.

ತಮ್ಮ ಬಳಿ ಇರುವ ಸಬ್‌ಮೆರಿನ್‌ಗಳಿಂದ ಮಕ್ಕಳ ರಕ್ಷಣೆಗೆ ಸಹಾಯವಾಗಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

Story first published: Monday, July 9, 2018, 19:12 [IST]
Other articles published on Jul 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X