ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವರ್ಲ್ಡ್ ಕಪ್ 2018: ಅರ್ಜೆಂಟೀನಾ ತಂಡದ ವಿಶೇಷತೆಗಳಿವು

FIFA world cup 2018 : ಅರ್ಜೆಂಟೀನಾ ತಂಡದ ವಿಶೇಷತೆಗಳಿವು | Oneindia Kannada
Argentina World Cup Fixtures, Squad, Group, Guide

ಬ್ಯೂನಸ್ ಏರ್ಸ್, ಜೂ. 3: ರಷ್ಯಾದಲ್ಲಿ 2018ರ ಫೀಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾಟ ಜೂನ್ 14ರಂದು ಚಾಲನೆಗೊಳ್ಳಲಿದೆ. ಬಲಿಷ್ಟ ತಂಡಗಳ ನಡುವಿನ ಕಾಲ್ಚೆಂಡಿನಾಟ ಆರಂಭಕ್ಕೆ ಇನ್ನಿರುವುದು ಕೆಲವೇ ದಿನಗಳು ಮಾತ್ರ. ಪ್ರತಿಷ್ಠಿತ ಈ ಪಂದ್ಯಾಟಕ್ಕೆ ವಿಶ್ವದಾದ್ಯಂತ 32 ತಂಡಗಳು ತಯಾರಿ ನಡೆಸುತ್ತಿವೆ.

ಫುಟ್ಬಾಲ್ ಆಟಕ್ಕೆ ಹೆಚ್ಚು ಖ್ಯಾತಿಯಾದ ತಂಡಗಳಲ್ಲಿ ಅರ್ಜೆಂಟೀನಾ ಕೂಡ ಒಂದು. ಫುಟ್ಬಾಲ್ ಹುಚ್ಚು ಅಭಿಮಾನಿಗಳಿರುವ ರಾಷ್ಟ್ರವಾಗಿ ಅರ್ಜೆಂಟೀನಾ ಗುರುತಿಸಿಕೊಂಡಿದೆ. ತನ್ನದೇ ಕೆಲವಾರು ವಿಶೇಷತೆಗಳನ್ನು ಅರ್ಜೆಂಟೀನಾ ಹೊಂದಿದೆ. ಇದೇ ಕಾರಣಕ್ಕಾಗಿ ಅದು ಫುಟ್ಬಾಲ್ ಲೋಕದಲ್ಲಿ ಬಲಿಷ್ಟ ತಂಡವಾಗಿ ಗುರುತಿಸಿಕೊಂಡಿದೆ.

ಫುಟ್ಬಾಲ್ ದಂತಕತೆ ಡಿಗೋ ಮರಡೋನಾ ಬೆಂಬಲ, ಮಾರ್ಗದರ್ಶನವಿರುವ ಅರ್ಜೆಂಟೀನಾ ಈ ಬಾರಿಯ ಫೀಫಾ ವಿಶ್ವಕಪ್ ನಲ್ಲಿ ಪ್ರಬಲ ತಂಡವಾಗಿದೆ. ಜೊತೆಗೆ ಅಧಿಕ ಗೋಲ್ ಸಾಧಕರಲ್ಲಿ ವಿಶ್ವದ ಎರಡನೇ ಆಟಗಾರರಾಗಿ ಗುರುತಿಸಿಕೊಂಡಿರುವ ಲಿಯೋನೆಲ್ ಮೆಸ್ಸಿಯ ಬಲವೂ ಅರ್ಜೆಂಟೀನಾಕ್ಕಿದೆ.

ಜಾರ್ಜ್ ಸ್ಯಾಂಪೊಲಿ ತರಬೇತಿಯಲ್ಲಿರುವ ಅರ್ಜೆಂಟೀನಾ ಈವರೆಗೆ ಒಟ್ಟು ಎರಡು ಬಾರಿ (1978, 1986) ವಿಶ್ವ ಕಪ್ ಚಾಂಪಿಯನ್ ಎನಿಸಿಕೊಂಡಿದೆ. ಅಲ್ಲದೆ 1930, 1990 ಮತ್ತು 2014ರಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಸಾಧನೆ ಮಾಡಿದೆ.

ಈ ಬಾರಿ ಮೊದಲ ಪಂದ್ಯದಲ್ಲಿ ಅರ್ಜೆಂಟೀನಾ ಜೂನ್ 16ರಂದು ಐಸ್ ಲ್ಯಾಂಡ್ ತಂಡದ ಸವಾಲು ಸ್ವೀಕರಿಸಲಿದೆ. ಜೂನ್ 21ರಂದು ಕ್ರೋಷಿಯಾ ಮತ್ತು ಜೂನ್ 26ರಂದು ನೈಜೀರಿಯಾ ವಿರುದ್ಧ ಅರ್ಜೆಂಟೀನಾ ಮೈದಾನಕ್ಕಿಳಿಯಲಿದೆ.

ತಂಡದ ವಿವರ
ಗೋಲ್ ಕೀಪರ್ಸ್: ಸೆರ್ಗಿಯೋ ರೊಮೆರೊ (ಮ್ಯಾಂಚೆಸ್ಟರ್ ಯುನೈಟೆಡ್), ನಹುವೆಲ್ ಗುಜ್ಮನ್ (ಟೈಗರ್ಸ್), ಅಗಸ್ಟಿನ್ ಮಾರ್ಚೆಸಿನ್ (ಅಮೆರಿಕ).

ಡಿಫೆಂಡರ್ಸ್: ಜೇವಿಯರ್ ಮಸ್ಚೆರಾನೊ (ಬಾರ್ಸಿಲೋನಾ), ಫೆಡೆರಿಕೊ ಫ್ಯಾಜಿಯೊ (ರೋಮಾ), ನಿಕೋಲಾಸ್ ಓಟಮೆಂಡಿ (ಮ್ಯಾಂಚೆಸ್ಟರ್ ಸಿಟಿ), ಗೇಬ್ರಿಯಲ್ ಮರ್ಕಾಡೋ (ಸೆವಿಲ್ಲಾ), ಇಮ್ಯಾನ್ಯುಯಲ್ ಮಾಮಮಾನ (ಜೆನಿಟ್ ಸೇಂಟ್ ಪೀಟರ್ಸ್ಬರ್ಗ್), ಜರ್ಮನ್ ಪೆಜ್ಜೆಲ್ಲಾ (ಫಿಯೊರೆಂಟಿನಾ)

ಮಿಡ್ ಪೀಲ್ಡರ್ಸ್: ಎವರ್ ಬನೆಗ (ಸೆವಿಲ್ಲಾ), ಲ್ಯೂಕಾಸ್ ಬಿಗ್ಲಿಯಾ (ಎಸಿ ಮಿಲನ್), ಲಿಂಡ್ರೊ ಪರೆಡೆಸ್ (ಝೆನಿಟ್ ಸೇಂಟ್ ಪೀಟರ್ಸ್ಬರ್ಗ್), ಏಂಜೆಲ್ ಡಿ ಮಾರಿಯಾ (ಪ್ಯಾರಿಸ್ ಸೇಂಟ್-ಜರ್ಮೈನ್), ಮಾರ್ಕೊಸ್ ಅಕ್ಯುನಾ (ಸ್ಪೋರ್ಟಿಂಗ್ ಲಿಸ್ಬನ್), ಎಡ್ವಾರ್ಡೊ ಸಾಲ್ವಿಯೋ (ಬೆನ್ಫಿಕಾ), ಎಮಿಲಿಯೊ ರಿಗೋನಿ ಸೇಂಟ್ ಪೀಟರ್ಸ್ಬರ್ಗ್), ಅಲೆಜಾಂಡ್ರೊ ಗೊಮೆಜ್ (ಅಟ್ಲಾಂಟಾ)

ಫಾರ್ವರ್ಡ್ಸ್: ಲಿಯೋನೆಲ್ ಮೆಸ್ಸಿ (ಬಾರ್ಸಿಲೋನಾ), ಪೌಲೊ ಡೈಬಾಲಾ (ಜುವೆಂಟಸ್), ಮೌರೊ ಐಕಾರ್ಡಿ (ಇಂಟರ್ ಮಿಲನ್), ಸೆರ್ಗಿಯೋ ಅಗುರೊ (ಮ್ಯಾಂಚೆಸ್ಟರ್ ಸಿಟಿ)

Story first published: Friday, June 8, 2018, 18:16 [IST]
Other articles published on Jun 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X