ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಇಂಡಿಯನ್ ಸೂಪರ್ ಲೀಗ್ ಫೈನಲ್ ತಲುಪಿದ ಬೆಂಗಳೂರು

Bengaluru leave it late to break NorthEast hearts

ಬೆಂಗಳೂರು, ಮಾರ್ಚ್ 12 : 72ನೇ ನಿಮಿಷದಲ್ಲಿ ಮಿಕು, 87ನೇ ನಿಮಿಷದಲ್ಲಿ ದಿಮಾಸ್ ಡೇಲ್ಗಾಡೋ ಹಾಗೂ 90ನೇ ನಿಮಿಷದಲ್ಲಿ ನಾಯಕ ಸುನಿಲ್ ಛೆಟ್ರಿ ಗಳಿಸಿದ ಗೋಲುಗಳ ನೆರವಿನಿಂದ, ನಾರ್ತ್ ಈಸ್ಟ್ ಯುನೈಟೆಡ್ ತಂಡವನ್ನು 3-0 (ಸರಾಸರಿ 4-2) ಗೋಲುಗಳ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್ ಸಿ, ಸತತ ಎರಡನೇ ಬಾರಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನ ಫೈನಲ್ ಪ್ರವೇಶಿಸಿದೆ. ಪ್ರಥಮಾರ್ಧದಲ್ಲಿ ಮೂರು ಅವಕಾಶಗಳು ಕೈ ತಪ್ಪಿದರೂ ದ್ವಿತೀಯಾರ್ಧದಲ್ಲಿ ಮೂರು ಗೋಲು ಗಳಿಸಿ ಫೈನಲ್ ಗೆ ಲಗ್ಗೆ ಇಟ್ಟಿತು.

ಐಎಸ್ಎಲ್ : ಬೆಂಗಳೂರಿಗೆ ಆಘಾತ ನೀಡಿದ ನಾರ್ತ್ ಈಸ್ಟ್ ಯುನೈಟೆಡ್ ಐಎಸ್ಎಲ್ : ಬೆಂಗಳೂರಿಗೆ ಆಘಾತ ನೀಡಿದ ನಾರ್ತ್ ಈಸ್ಟ್ ಯುನೈಟೆಡ್

ಕೈ ಚೆಲ್ಲಿದ ಅವಕಾಶ : ಪ್ರಥಮಾರ್ಧದಲ್ಲಿ ಬೆಂಗಳೂರು ಗೋಲು ಗಳಿಸದಿರುವುದು ಅಚ್ಚರಿಯ ಸಂಗತಿ. ಮಿಕು ಸೇರಿದಂತೆ ಇತರ ಆಟಗಾರರು ಸಿಕ್ಕ ಅವಕಾಶವನ್ನು ಗೋಲಾಗಿಸುವಲ್ಲಿ ವಿಲರಾಗಿರುವುದು ಬೆಂಗಳೂರಿನ ಪಾಲಿಗೆ ಆತಂಕವೇ ಎನ್ನಬಹುದು. ಮಿಕು ಮಿಂಚದಿದ್ದರಿಂದ ಪ್ರಥಮಾರ್ಧದಲ್ಲಿ ಬೆಂಗಳೂರು ಮುನ್ನಡೆ ಕಾಣುವಲ್ಲಿ ವಿಫಲವಾಯಿತು. ಮೊದಲ 45 ನಿಮಿಷಗಳ ಆಟದಲ್ಲಿ ಮಿಕು ಅವರಿಗೆ ಹ್ಯಾಟ್ರಿಕ್ ಗೋಲು ಗಳಿಸುವ ಅವಕಾಶವಿದ್ದಿತ್ತು. ಆದರೆ ಅದು ಹಾಗಾಗಲಿಲ್ಲ.

Bengaluru leave it late to break NorthEast hearts

ಜುವಾನ್ ಮಾಸ್ಕಿಯಾ ಅವರಿಗೆ ಗೋಲು ಗಳಿಸುವ ಅವಕಾಶ ಮೊದಲು ಸಿಕ್ಕಿತ್ತು. ನೇರವಾಗಿ ಗೋಲ್‌ ಕೀಪರ್ ಕೈಗೆ ತಲಪುವಂತೆ ಚೆಂಡನ್ನು ತಳ್ಳಿದ ಕಾರಣ ಆ ಅವಕಾಶ ಕೈ ಚೆಲ್ಲಿತು. ಆ ನಂತರ ಮಿಕು ಅವರಿಗೆ ಸತತ ಮೂರು ಬಾರಿ ಅವಕಾಶ ಸಿಕ್ಕಿತು. 23ನೇ ನಿಮಿಷದಲ್ಲಿ ಒದ್ದ ಚೆಂಡು ಗೋಲ್ ಬಾಕ್ಸ್‌ನಿಂದ ಹೊರಕ್ಕೆ ಚಿಮ್ಮಿತ್ತು. 25ನೇ ನಿಮಿಷದಲ್ಲಿ ತಳ್ಳಿದ ಚೆಂಡು ಗೋಲ್ ಬಾಕ್ಸ್‌ನ ಮೇಲಿಂದ ಸಾಗಿತ್ತು. 33ನೇ ನಿಮಿಷದಲ್ಲಿ ತಳ್ಳಿದ ಚೆಂಡು ಕೂಡ ಗೋಲ್‌ಕೀಪರ್ ಅವರ ಕೈ ಸೇರಿತ್ತು.

ಬೆಂಗಳೂರಿಗೆ ಒಂದು ಗೋಲಿನ ಅಗತ್ಯವಿತ್ತು, ಆದರೆ ನಾರ್ತ್ ಈಸ್ಟ್ ಅದಕ್ಕೆ ವಿರೋಧ ಒಡ್ಡುತ್ತಿತ್ತು. ಕೇವಲ ಒಂದು ಗೋಲಾಗಿರುವ ಕಾರಣ ಹೇಗಾದರೂ ಗಳಿಸಬಹುದು ಎಂಬ ಅತಿಯಾದ ಆತ್ಮವಿಶ್ವಾಸ ಬೆಂಗಳೂರು ತಂಡಕ್ಕೆ ಮುಳುವಾದರೆ ಅಚ್ಚರಿಪಡಬೇಕಾಗಿರಲಿಲ್ಲ. ನಾರ್ತ್ ಈಸ್ಟ್ ಸಾಗಿ ಬಂದ ಹಾದಿ ಅಷ್ಟು ಸುಲಭವಾಗಿಲ್ಲ. ಆ ತಂಡ ಸುಲಭವಾಗಿ ಬೆಂಗಳೂರಿಗೆ ಗೋಲು ನೀಡುವ ಸ್ಥಿತಿಯಲ್ಲಿಲ್ಲ ಎಂಬುದು ಸ್ಪಷ್ಟ. ಗೋಲ್‌ಕೀಪರ್ ಪವನ್ ಕುಮಾರ್ ಬೆಂಗಳೂರು ತಂಡದ ಗೋಲಿಗೆ ಹಲವು ಬಾರಿ ಅಡ್ಡಿಯಾಗಿರುವುದು ಸ್ಪಷ್ಟವಾಗಿತ್ತು.

Story first published: Tuesday, March 12, 2019, 11:06 [IST]
Other articles published on Mar 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X