ಫುಟ್‌ಬಾಲ್‌: ಗೆಲ್ಲುವ ವಿಶ್ವಾಸದಲ್ಲಿ ಬಿಎಫ್‌ಸಿ, ಸುನಿಲ್ ಚೆಟ್ರಿಗೆ ವಿಶ್ರಾಂತಿ

Posted By:
BFC team facing Dhaka Abahani team today

ಬೆಂಗಳೂರು, ಮಾರ್ಚ್ 14: ಐಎಸ್‌ಎಲ್‌ (ಇಂಡಿಯನ್ ಸೂಪರ್ ಲೀಗ್‌) ಟೂರ್ನಿಯಲ್ಲಿ ಈ ವರೆಗೆ ಅತ್ಯುತ್ತಮ ಪ್ರದರ್ಶನ ತೋರಿರುವ ಬಿಎಫ್‌ಸಿ (ಬೆಂಗಳೂರು ಫುಟ್‌ಬಾಲ್ ಕ್ಲಬ್) ಇಂದು ಎಎಫ್‌ಸಿ (ಏಷಿಯನ್ ಫುಟ್‌ಬಾಲ್ ಕಾನ್‌ಪೆಡರೇಶನ್) ಕಪ್ ಟೂರ್ನಿಯ 'ಇ' ಗುಂಪಿನ ಪಂದ್ಯದಲ್ಲಿ ಡಾಕಾ ಅಬಹಾನಿ ತಂಡವನ್ನು ಎದುರಿಸಲಿದೆ.

ಸುನಿಲ್ ಚೆಟ್ರಿ ಸೇರಿದಂತೆ ತಂಡದ ಪ್ರಮುಖ ಆಟಗಾರರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ಆಡಲಾಗಿದೆ. ಆದರೆ ಯುವ ಮತ್ತು ಪ್ರತಿಭಾನ್ವಿತ ಆಟಗಾರರಿಗೆ ಆಡುವ ಅವಕಾಶ ನೀಡಲಾಗಿದೆ. ಐಎಸ್‌ಎಲ್‌ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿರುವ ಬಿಎಫ್‌ಸಿಗೆ ಹಿರಿಯ ಆಟಗಾರರು ಆ ಪಂದ್ಯಕ್ಕೆ ಬೇಕಿರುವ ಕಾರಣ ಇಂದು ನಡೆಯುತ್ತಿರುವ ಪಂದ್ಯಕ್ಕೆ ಕೆಲವರಿಗೆ ವಿಶ್ರಾಂತಿ ನೀಡಲಾಗಿದೆ.

ಸುನಿಲ್ ಪನೆಂಕಾ ಕಿಕ್ ಗೆ ಪುಣೆಯೂ ಫಿದಾ, ಫೈನಲ್ ಗೆ ಬೆಂಗಳೂರು

ಮಾಲ್ಡಿವ್ಸ್‌ನ ಟಿ.ಸಿ.ಸ್ಪೋರ್ಟ್ಸ್‌ ಕ್ಲಬ್‌ ವಿರುದ್ಧ 5-0 ಅಂತರದ ಗೆಲುವು ಸಾಧಿಸಿ ಬಿಎಫ್‌ಸಿ ಗುಂಪು ಹಂತಕ್ಕೆ ಲಗ್ಗೆ ಇಟ್ಟಿದೆ. ಆ ಪಂದ್ಯದಲ್ಲಿ ಟೋನಿ ಡೊವ್ಯಾಲ್‌ ಹ್ಯಾಟ್ರಿಕ್ ಗೋಲು ಬಾರಿಸಿದ್ದರು. ಎರಿಕ್ ಪಾರ್ಟಲು ಮತ್ತು ರಾಹುಲ್‌ ಭೆಕೆ ಕೂಡ ಮಿಂಚಿದ್ದರು. ಇನ್ನೊಂದೆಡೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನ ಚಾಂಪಿಯನ್‌ ಅಬಹಾನಿ ತಂಡ ಮಾಲ್ಡಿವ್ಸ್‌ನ ನ್ಯೂ ರೇಡಿಯಂಟ್‌ ಕ್ಲಬ್‌ ವಿರುದ್ಧ ಗೆದ್ದು ಈ ಹಂತಕ್ಕೆ ಬಂದಿಳಿದಿದೆ.

ಕಳೆದ ವರ್ಷ ಇದೇ ತಂಡದ ವಿರುದ್ಧ ಬಿಎಫ್‌ಸಿಯು 2-0 ಅಂತರದಲ್ಲಿ ಗೆಲುವು ಸಾಧಿಸಿತ್ತು.

ಐಎಸ್‌ಎಲ್‌ ಟೂರ್ನಿಯ ಫೈನಲ್‌ ನಮಗೆ ಅತ್ಯಂತ ಪ್ರಮುಖ ಹಾಗಾಗಿ ತಂಡದ ಹಲವು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ತಂಡದ ಕೋಚ್ ಅಲ್ಬರ್ಟ್ ರೋಕಾ ತಿಳಿಸಿದ್ದಾರೆ.

Story first published: Wednesday, March 14, 2018, 9:37 [IST]
Other articles published on Mar 14, 2018
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ