ಗೋವಾವನ್ನು ಮಣಿಸಿದ ಚೆನ್ನೈಯನ್, ಫೈನಲ್‌ನಲ್ಲಿ ಬಿಎಫ್‌ಸಿಗೆ ಸವಾಲು

Posted By:
Chennai FC will face Bengaluru football club in ISL final

ಚೆನ್ನೈ, ಮಾರ್ಚ್ 14: ಐಎಸ್‌ಎಲ್‌ (ಇಂಡಿಯನ್ ಸೂಪರ್ ಲೀಗ್) ನ ಸೆಮಿಫೈನಲ್‌ ಪಂದ್ಯದಲ್ಲಿ ಗೋವಾ ತಂಡವನ್ನು ಮಣಿಸಿರುವ ಚೆನ್ನೈಯನ್ ಎಫ್‌ಸಿ ತಂಡವು ಫೈನಲ್‌ನಲ್ಲಿ ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವನ್ನು ಎದುರಿಸಲಿದೆ.

ಚೆನ್ನೈನ ಜವಾಹರ್‌ ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೋವಾ ಎಪ್‌ಸಿ ತಂಡವನ್ನು 3-0 ಅಂತರದಿಂದ ಸೋಲಿಸಿದ ಚೆನ್ನೈಯನ್ ತಂಡವು ಮೂರು ವರ್ಷದಲ್ಲಿ ಎರಡನೇ ಬಾರಿ ಫೈನಲ್ ಪ್ರವೇಶಿಸಿರುವ ಸಾಧನೆ ಮಾಡಿದೆ.

ಜೆಜೆ ಲಾಲ್‌ಪೆಖ್ಲುವಾ 26 ಮತ್ತು 90ನೇ ನಿಮಿಷಗಳಲ್ಲಿ ಗೋಲು ಗಳಿಸಿ ಮಿಂಚಿದರು. 29ನೇ ನಿಮಿಷದಲ್ಲಿ ಧನಪಾಲ್ ಗಣೇಶ್ ಅವರು ಚೆನ್ನೈಯಿನ್ ತಂಡದ ಪರ ಮತ್ತೊಂದು ಗೋಲು ಗಳಿಸಿದರು.
ಮಾರ್ಚ್‌ 17ರಂದು ಬೆಂಗಳೂರಿನ ಕಂಠೀರವ ಕ್ರಿಡಾಂಗಣದಲ್ಲಿ ಫೈನಲ್‌ ಪಂದ್ಯ ನಡೆಯಲಿದ್ದು ಅಂದು ಚೆನ್ನೈಯನ್ ಎಫ್‌ಸಿ ಮತ್ತು ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ನಡುವೆ ಬಿರುಸಿನ ಹಣಾಹಣಿ ನಡೆಯುವ ಸಂಭವ ಇದೆ.

Story first published: Wednesday, March 14, 2018, 9:55 [IST]
Other articles published on Mar 14, 2018
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ