ಚೆನ್ನಾಗಿ ಆಡಿ ಗೆದ್ದ ಚೆನ್ನೈಯಿನ್, ಸೆಮಿಫೈನಲ್ ಹಾದಿ ಸುಗಮ

By Isl Media

ಕೋಲ್ಕೊತಾ, ಫೆಬ್ರವರಿ, 16: ರಫಾಯಲ್ ಕ್ರೆವೆಲ್ಲರೊ (7ನೇ ನಿಮಿಷ), ಆಂಡ್ರ ಷೆಂಬ್ರಿ (39ನೇ ನಿಮಿಷ) ಹಾಗೂ ನಿರಿಜಸ್ ವಾಸ್ಕಿಸ್ (90ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಎಟಿಕೆ ತಂಡವನ್ನು 3-1 ಗೋಲುಗಳ ಅಂತರದಲ್ಲಿ ಸೋಲಿಸಿದ ಚೆನ್ನೈಯಿನ್ ಎಫ್ ಸಿ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ ಸೆಮಿಫೈನಲ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಚೆನ್ನೈಯಿನ್ ಗೆಲ್ಲುವ ಮೂಲಕ ಒಡಿಶಾದ ಹಾದಿ ಕಠಿಣವಾಗಿ, ಮುಂಬೈಗೂ ಕೂಡ ಆತಂಕದ ಕ್ಷಣ ನಿರ್ಮಾಣವಾಗಿದೆ.

ಮನೆಯಂಗಣದಲ್ಲಿ ಜಯ ಗಳಿಸಿದ ಕೇರಳ ಬ್ಲಾಸ್ಟರ್ಸ್
ಮುನ್ನಡೆ ಕಂಡ ಚೆನ್ನೈಯಿನ್
ಸೆಮಿಫೈನಲ್ ಗುರಿಯಾಗಿಸಿಕೊಂಡು ಅಂಗಣಕ್ಕಿಳಿದ ಚೆನ್ನೈಯಿನ್ ಅಷ್ಟೇ ಆತ್ಮವಿಶ್ವಾಸದಲ್ಲಿ ಆಡಿ 2-1 ಗೋಲುಗಳ ಅಂತರದಲ್ಲಿ ಪ್ರಥಮಾರ್ಧದಲ್ಲಿ ಮೇಲುಗೈ ಕಂಡಿತು. ಪಂದ್ಯ ಆರಂಭಗೊಂಡ 7ನೇ ನಿಮಿಷದಲ್ಲಿ ರಫಾಯಲ್ ಕ್ರಿವೆಲ್ಲರೊ ಗಳಿಸಿದ ಗೋಲಿನಿಂದ ಪ್ರವಾಸಿ ತಂಡ ಅಚ್ಚರಿ ಮೂಡಿಸಿತು. ಉತ್ತಮ ಪೈಪೋಟಿಯಲ್ಲಿ ಸಾಗಿದ ಪಂದ್ಯದಲ್ಲಿ 39ನೇ ನಿಮಿಷದಲ್ಲಿ ಚೆನ್ನೈಯಿನ್ ತಂಡದ ಪರ ಆಂಡ್ರೆ ಷೆಂಬ್ರಿ ಗಳಿಸಿದ ಗೋಲು 2-0 ಮುನ್ನಡೆ ತಂದುಕೊಟ್ಟಿತು. ತನ್ನ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಎಟಿಕೆ ತಂಡಕ್ಕೆ ಮುಂದಿನ ಒಂದು ನಿಮಿಷದಲ್ಲೇ ಯಶಸ್ಸು. ಅದು ನಿರೀಕ್ಷೆಯಂತೆ ರಾಯ್ ಕೃಷ್ಣ 40ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಪ್ರಥಮಾರ್ಧ 2-1ರಲ್ಲಿ ಕೊನೆಗೊಂಡಿತು.

ರಾಯ್ ಕೃಷ್ಣ ಪ್ರಸಕ್ತ ಲೀಗ್ ನಲ್ಲಿ 13ನೇ ಗೋಲು ಗಳಿಸಿದರು. ಪ್ರಥಮಾರ್ಧದ ಕೊನೆಯ ಕ್ಷಣದಲ್ಲೂ ಕೃಷ್ಣ ಅವರಿಗೆ ಗೋಲು ಗಳಿಸುವ ಅವಕಾಶವಿದ್ದಿತ್ತು, ಆದರೆ ಕೃಷ್ಣ ಅವರು ಅವಕಾಶದಿಂದ ವಂಚಿತರಾದರು. ಮೊದಲಾರ್ಧದಲ್ಲಿ ಮುನ್ನಡೆ ಕಂಡ ಚೆನ್ನೈಯಿನ್ ತಂಡ ದ್ವಿತಿಯಾರ್ಧದಲ್ಲಿ ಯಶಸ್ಸಿನ ಹೆಜ್ಜೆ ಇಡಲಿದಿಯೇ, ಅಥವಾ ಎಟಿಕೆ ತಕ್ಕ ತಿರುಗೇಟು ನೀಡಲಿದೆಯೇ ಕಾದು ನೋಡಬೇಕು.

ಮಾಜಿ ಚಾಂಪಿಯನ್ನರ ಫೈಟ್
ಸೆಮಿಫೈನಲ್ ನ ಕೊನೆಯ ಸ್ಥಾನಕ್ಕಾಗಿ ತ್ರಿಕೋನ ಸರಣಿಯ ಹೋರಾಟ ಮುಂದುವರಿದಿದೆ, ಮುಂಬೈ ಸಿಟಿ, ಒಡಿಶಾ ಮತ್ತು ಚೆನ್ನೈಯಿನ್ ತಂಡಗಳ ಹೋರಾಟ ಮುಂದುವರಿದಿದೆ, ಎಟಿಕೆ ವಿರುದ್ಧ ಜಯ ಗಳಿಸುವುದಕ್ಕಾಗಿ ಚೆನ್ನೈಯಿನ್ ತಂಡ ಕೋಲ್ಕೊತದಲ್ಲಿ ಅಂಗಣಕ್ಕಿಳಿಯಿತು, ಸತತ ನಾಲ್ಕು ಪಂದ್ಯಗಳಲ್ಲಿ ಜಯ ಗಳಿಸಿದ ಚೆನ್ನೈಯಿನ್ ತಂಡಕ್ಕೆ ಬೆಂಗಳೂರು ವಿರುದ್ಧ ಡ್ರಾಗೆ ತೃಪ್ತಿ ಪಡಬೇಕಾಯಿತು. ಇದರ ಹುರತಾಗಿಯೂ ಚೆನ್ನೈಯಿನ್ ತಂಡ ಸೆಮಿಫೈನಲ್ ಹಂತ ತಲಪುವಲ್ಲಿ ಉತ್ತಮ ಹೋರಾಟ ನೀಡುತ್ತಿದೆ. ಆದರೆ ಈ ಹಂತದಲ್ಲಿ ಯಾವುದೇ ರೀತಿಯಲ್ಲೂ ಅಂಕ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾಗಿದೆ. ಲಿಥುಯೇನಿಯದ ಸ್ರೈಕರ್ ನಿರಿಜಸ್ ವಾಸ್ಕಿಸ್ ಇದುವರೆಗೂ 12 ಗೋಲುಗಳನ್ನು ಗಳಿಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಅಲ್ಲದೆ ಗೋಲ್ಡನ್ ಶೂ ಗಳಿಕೆಯ ಸ್ಪರ್ಧೆಯಲ್ಲಿದ್ದಾರೆ, ಕೋಲ್ಕತಾದ ಕ್ಲಬ್ ಈಗಾಗಲೇ ಸೆಮುಫೈನಲ್ ತಲುಪಿದೆ.

ಆದರೆ ಮನೆಯಂಗಣದಲ್ಲಿ ನಡೆಯುತ್ತಿರುವ ಕೊನೆಯ ಪಂದ್ಯವನ್ನು ಗೆಲ್ಲಬೇಕೆಂಬ ಹಂಬಲದೊಂದಿಗೆ ಅಂಗಣಕ್ಕಿಳಿಯಿತು. ರಾಯ್ ಕೃಷ್ಣ ಮತ್ತು ಡೇವಿಡ್ ವಿಲಿಯಮ್ಸ್ ಅವರ ಸಾಧನೆಯ ಮೂಲಕ ಎಟಿಕೆ ಯಶಸ್ಸು ಕಂಡಿತ್ತು. ಎರಡು ಬಾರಿ ಚಾಂಪಿಯನ್ ತಂಡಕ್ಕೆ ಹಿಂದಿನ ಪಂದ್ಯದಲ್ಲಿ ರಾಯ್ ಕೃಷ್ಣ ಗಳಿಸಿದ ಹ್ಯಾಟ್ರಿಕ್ ಅದ್ಭುತ ಜಯ ತಂದುಕೊಟ್ಟಿತ್ತು. ಪ್ರಬಿರ್ ದಾಸ್ ಮತ್ತು ಮೈಕಲ್ ಸೂಸೈರಾಜ್ ಆವರ ಸಂಘಟಿತ ಶ್ರಮ ತಂಡದ ಯಶಸ್ಸಿಗೆ ಮತ್ತೊಂದು ಕಾರಣ.

For Quick Alerts
ALLOW NOTIFICATIONS
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS
Story first published: Monday, February 17, 2020, 10:17 [IST]
Other articles published on Feb 17, 2020
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X