ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಛೆಟ್ರಿ ಹ್ಯಾಟ್ರಿಕ್ ಗೋಲು: ಚೈನೀಸ್‌ ತೈಪೆ ವಿರುದ್ಧ ಭಾರತ ಭರ್ಜರಿ ಜಯ

ಛೆಟ್ರಿ ಹೆಸರಿಗೆ ಮತ್ತೊಂದು ಘರಿಷ್ಟ ಸಾಧನೆ | Oneindia Kannada
Chhetri scores a hat-trick as India run riot in opener over Chinese Taipei

ಮುಂಬೈ, ಜೂ. 2: ರಷ್ಯಾದಲ್ಲಿ ನಡೆಯಲಿರುವ 2018ರ ಫೀಫಾ ವಿಶ್ವಕಪ್ ಫುಟ್ಬಾಲ್ ಪಂದ್ಯದತ್ತ ಎಲ್ಲರ ಗಮನ ಹರಿಯುತ್ತಿರುವ ಬೆನ್ನಲ್ಲೇ ನಾಯಕ ಸುನಿಲ್ ಛೆಟ್ರಿ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತದ ಫುಟ್ಬಾಲ್ ತಂಡ ಇಂಟರ್ ಕಾಂಟಿನೆಂಟಲ್ ಕಪ್‌ ಟೂರ್ನಿಯಲ್ಲಿ ಚೈನೀಸ್ ತೈಪೆ ವಿರುದ್ಧ 5-0ರ ಭರ್ಜರಿ ಗೆಲುವು ದಾಖಲಿಸಿದೆ.

ನಾಲ್ಕು ರಾಷ್ಟ್ರಗಳು ಪಾಲ್ಗೊಳ್ಳುತ್ತಿರುವ ಈ ಟೂರ್ನಿಯಲ್ಲಿ ಭಾರತದ ಗೆಲುವು ಗಮನಾರ್ಹವಾಗಿದೆಯಲ್ಲದೆ ಛೆಟ್ರಿ ಸಾಧನೆಯ ಯಾದಿಯಲ್ಲೂ 'ಹ್ಯಾಟ್ರಿಕ್' ಗೋಲಿನ ಹೊಸ ಮೈಲುಗಲ್ಲು ಸ್ಥಾಪಿಸಿದಂತಾಗಿದೆ.

ಸದ್ಯ ಉತ್ತಮ ಫಾರ್ಮ್ ನಲ್ಲಿ ಇರುವ ಛೆಟ್ರಿ ಅವರು ಆಡಿರುವ 99ನೇ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆಯೊಂದಿಗೆ ತಂಡದ ಭರ್ಜರಿ ಗೆಲುವಿಗೆ ಕಾರಣವಾಗಿದ್ದು ಭಾರತೀಯ ಕ್ರೀಡಾಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.

ಭಾರತೀಯ ಫುಟ್ಬಾಲ್ ಇತಿಹಾಸದಲ್ಲಿ ಗಮನ ಸೆಳೆಯುತ್ತಿರುವ ಛೆಟ್ರಿ ಮೂಲತಃ ಹೈದರಾಬಾದ್ ನವರಾಗಿದ್ದು, ಬೆಂಗಳೂರು ಎಫ್.ಸಿ.ಯಲ್ಲಿ ಮುಂಚೂಣಿಯಲ್ಲಿರುವ ಆಟಗಾರರು. ಚೈನೀಸ್ ತೈಪೆ ವಿರುದ್ಧ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ಬಳಿಕ ಒಟ್ಟು 59 ಗೋಲುಗಳ ಸಾಧನೆ ಛೆಟ್ರಿ ಅವರಿಂದಾಗಿದೆ.

ಈ ಸಾಧನೆಯೊಂದಿಗೆ ಭಾರತದ ಪರ ಹೆಚ್ಚು ಗೋಲು ದಾಖಲಿಸಿದ ಸಾಧನೆಗೂ ಛೆಟ್ರಿ ಪಾತ್ರರಾಗಿದ್ದಾರೆ.

Story first published: Saturday, June 2, 2018, 13:58 [IST]
Other articles published on Jun 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X