ಕೋಪಾ ಅಮೆರಿಕಾ 2021: ಅರ್ಜೆಂಟೀನಾ vs ಚಿಲಿ ರೋಚಕ ಪಂದ್ಯ ಡ್ರಾ

ಬ್ರಿಜಿಲ್: ಬ್ರಿಜಿಲ್‌ನಲ್ಲಿರುವ ಎಸ್ಟಾಡಿಯೋ ನಿಲ್ಟನ್ ಸ್ಯಾಂಟೋಸ್ ಸ್ಟೇಡಿಯಂನಲ್ಲಿ ಮಂಗಳವಾರ (ಜೂನ್ 15) ನಡೆದ ಕೋಪಾ ಅಮೆರಿಕಾ 2021 ಗ್ರೂಪ್ 'ಬಿ' ಅರ್ಜೆಂಟೀನಾ ಮತ್ತು ಚಿಲಿ ನಡುವಿನ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿದೆ. ಅರ್ಜೆಂಟೀನಾ ಸ್ಟಾರ್ ಲಿಯೋನೆಲ್ ಮೆಸ್ಸಿ ಮತ್ತು ಚಿಲಿ ಆಟಗಾರ ಎಡ್ವರ್ಡೊ ವರ್ಗಾಸ್ ತಲಾ ಒಂದೊಂದು ಗೋಲ್ ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು.

ಅವರು ಸುಲಭವಾಗಿ ಗೆಲ್ಲಬಲ್ಲರು: WTC ಫೈನಲ್‌ ವಿಜೇತರನ್ನು ಹೆಸರಿಸಿದ ಟಿಮ್ ಪೈನ್ಅವರು ಸುಲಭವಾಗಿ ಗೆಲ್ಲಬಲ್ಲರು: WTC ಫೈನಲ್‌ ವಿಜೇತರನ್ನು ಹೆಸರಿಸಿದ ಟಿಮ್ ಪೈನ್

ಪಂದ್ಯದ ಪ್ರಥಮಾರ್ಧದಲ್ಲಿ ಅರ್ಜೆಂಟೀನಾದಿಂದ ಲಿಯೋನೆಲ್ ಮೆಸ್ಸಿ ಗೋಲ್ ಬಾರಿಸಿದರು. 33ನೇ ನಿಮಿಷದಲ್ಲಿ ಮೆಸ್ಸಿ ಮೊದಲ ಗೋಲ್ ಬಾರಿಸಿ ತಂಡಕ್ಕೆ ಮುನ್ನಡೆ ಕೊಟ್ಟರು. ದ್ವಿತೀಯಾರ್ಧದಲ್ಲಿ ಅಂದರೆ 57ನೇ ನಿಮಿಷದಲ್ಲಿ ಚಿಲಿಯಿಂದ ಎಡ್ವರ್ಡೊ ವರ್ಗಾಸ್ ಒಂದು ಗೋಲ್ ಬಾರಿಸಿ ಫಲಿತಾಂಶವನ್ನು 1-1ಕ್ಕೆ ತಂದರು.

ಅದಾಗಿ ಎರಡೂ ತಂಡಗಳಿಂದ ಗೋಲ್‌ಗಾಗಿ ಯತ್ನಗಳು ನಡೆದರೂ ಗೋಲ್ ದಾಖಲಾಗದೆ 1-1ರಿಂದ ಪಂದ್ಯ ಕೊನೆಗೊಂಡಿತು. ಈ ಪಂದ್ಯದ ಬಳಿಕ ಗ್ರೂಪ್ ಬಿಯಲ್ಲಿರುವ ಅರ್ಜೆಂಟೀನಾ ಮತ್ತು ಚಿಲಿ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿವೆ.

WTC Finalಗೆ ಬಲಿಷ್ಠ ಭಾರತ ತಂಡ ಪ್ರಕಟಿಸಿದ ಆಕಾಶ್ ಚೋಪ್ರಾWTC Finalಗೆ ಬಲಿಷ್ಠ ಭಾರತ ತಂಡ ಪ್ರಕಟಿಸಿದ ಆಕಾಶ್ ಚೋಪ್ರಾ

ಸೋಮವಾರ ನಡೆದ ಪಂದ್ಯದಲ್ಲಿ ವೆನೆಜುವೆಲಾ ವಿರುದ್ಧ ಬ್ರಿಜಿಲ್ 3-0ಯ ಜಯ ಕಂಡಿತ್ತು. ಅಂಕಪಟ್ಟಿಯಲ್ಲಿ ಗ್ರೂಪ್‌ ಎಯಲ್ಲಿ ಬ್ರಿಜಿಲ್, ಕೊಲಂಬಿಯಾ, ಪೆರು ಮತ್ತು ಗ್ರೂಪ್‌ ಬಿಯಲ್ಲಿ ಪೆರಗ್ವೆ, ಅರ್ಜೆಂಟೀನಾ, ಚಿಲಿ ದೇಶಗಳು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
ಪೂರ್ವಭಾವಿಗಳು
VS
Story first published: Wednesday, June 16, 2021, 7:54 [IST]
Other articles published on Jun 16, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X