ಕೋಪಾ ಅಮೆರಿಕಾ ಫೈನಲ್: ಬ್ರೆಜಿಲ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಅರ್ಜೆಂಟಿನಾ

ರಿಯೋ ಡಿ ಜನೈರೋ, ಜುಲೈ 11: ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟಿನಾ ತಂಡ ಕೋಪಾ ಅಮೆರಿಕಾ ಕ್ರೀಡಾಕೂಟದ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಈ ಮೂಲಕ ಅರ್ಜೆಂಟಿನಾ ತಂಡ 28 ವರ್ಷಗಳ ನಂತರ ಮಹತ್ವದ ಅಂತಾರಾಷ್ಟ್ರೀಯ ಕ್ರೀಡಾಕೂಟದ ಚಾಂಪಿಯನ್ ಪಟ್ಟಕ್ಕೇರಿದೆ. ಫುಟ್ಬಾಲ್ ಸೂಪರ್ ಸ್ಟಾರ್ ಲಿಯೋನೆಲ್ ಮೆಸ್ಸಿ ಅವರಿಗೂ ಇದು ಪ್ರಥಮ ಮಹತ್ವದ ಅಂತಾರಾಷ್ಟ್ರೀಯ ಟ್ರೋಫಿಯಾಗಿದೆ.

ಈ ರೋಚಕ ಪಂದ್ಯವನ್ನು ಗೆಲ್ಲುತ್ತಿದ್ದಂತೆಯೇ ಸಂಭ್ರಮಾಚರಣೆಯಲ್ಲಿ ತೊಡಗಿದ ಅರ್ಜೆಂಟಿನಾ ತಂಡದ ಆಟಗಾರರು ಮೆಸ್ಸಿಯನ್ನು ಹಿಡಿದು ಮೇಲಕ್ಕೆ ಚಿಮ್ಮಿಸಿ ಸಂಭ್ರಮಿಸಿದರು. ಈ ಮೂಲಕ ಫುಟ್ಬಾಲ್ ಜಗತ್ತಿನಲ್ಲಿ ಅತ್ಯಂತ ಮಹತ್ವದ ಟ್ರೋಫಿಯನ್ನು ಲಿಯೋನೆಲ್ ಮೆಸ್ಸಿ ಹಾಗೂ ಅವರ ತಂಡ ಗೆದ್ದು ಬೀಗಿದೆ.

ಅರ್ಜೆಂಟಿನಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಈ ಒಂದು ಗೋಲು ಪಂದ್ಯ ಆರಂಭವಾದ 22ನೇ ನಿಮಿಷದಲ್ಲಿ ಬಂದಿತ್ತು. ರೋಡ್ರಿಗೋ ಡಿ ಪೌಲ್ ಅವರಿಂದ ಪಾಸ್ ಪಡೆದ ಡಿ ಮರಿಯಾ ಎದುರಾಳಿ ಗೋಲ್‌ಕೀಪರ್ ಎಡಿರ್ಸನ್ ಅವರನ್ನು ವಂಚಿಸಿ ಗೋಲ್ ಪಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದರು.

ಇದು ಬ್ರೆಜಿಲ್ ತಂಡ ಈ ಟೂರ್ನಿಯಲ್ಲಿ ಬಿಟ್ಟುಕೊಟ್ಟ ಕೇವಲ 3ನೇ ಗೋಲಾಗಿದೆ. ಅರ್ಜೆಂಟಿನಾ ಗಳಿಸಿದ ಮುನ್ನಡೆಯನ್ನು ಸಮಬಲಗೊಳಿಸಲು ಬ್ರೆಜಿಲ್ ತಂಡ ಸಾಕಷ್ಟು ಪ್ರಯತ್ನವನ್ನು ನಡೆಸಿತ್ತು. ಬ್ರೆಜಿಲ್ ನಾಯಕ ನೇಯ್ಮಾರ್ ಕೂಡ ಕಠಿಣ ಪ್ರತಯ್ನ ನಡೆಸಿದ್ದರು. ಆದರೆ ಅರ್ಜೆಂಟಿನಾ ಗೋಲ್‌ಕೀಪರ್ ಎಮಿಲಿಯಾನೋ ಮಾರ್ಟಿಜೆಜ್ ಬ್ರೆಜಿಲ್‌ನ ಎಲ್ಲಾ ಪ್ರಯತ್ನಗಳನ್ನು ವಿಫಲಗೊಳಿಸಿದರು.

ಆದರೆ ಹಿಂದಿನ ಪಂದ್ಯಗಳಿಗೆ ಹೋಲಿಸಿದರೆ ಅರ್ಜೆಂಟಿನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಪ್ರದರ್ಶನ ನಿರಾಶಾದಾಯಕವಾಗಿತ್ತು. ಇದಕ್ಕೂ ಮುನ್ನ ಮೆಸ್ಸಿ ಟೂರ್ನಿಯಲ್ಲಿ ನಾಲ್ಕು ಗೋಲ್ ಹಾಗೂ ಐದು ಅಸಿಸ್ಟ್‌ಗಳನ್ನು ಮಾಡಿದ್ದರು. ಆದರೆ ಫೈನಲ್ ಪಂದ್ಯದ 88ನೇ ನಿಮಿಷದಲ್ಲಿ ಮೆಸ್ಸಿಗೆ ಗೋಲ್ ಗಳಿಸುವ ಉತ್ತಮ ಅವಕಾಶವಿದ್ದರೂ ಅದನ್ನು ಬ್ರೆಜಿಲ್ ಗೋಲ್‌ಕೀಪರ್ ಎಡಿರ್ಸನ್ ತಡೆದಿದ್ದರು. ಆದರೆ ಇದರಿಂದ ತಂಡಕ್ಕೆ ಹೆಚ್ಚಿನ ಆಘಾತವೇನೂ ಆಗಲಿಲ್ಲ. ಅಂತಿಮವಾಗಿ ಮೆಸ್ಸಿ ನೇತೃತ್ವದ ತಂಡ 1-0 ಅಂತರದಿಂದ ಗೆದ್ದು ಬೀಗಿದೆ. ಈ ಮೂಲಕ ಸುದೀರ್ಘ ಕಾಲದಿಂದ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಟ್ರೋಫಿಗಾಗಿ ಹಾತೊರೆಯುತ್ತಿದ್ದ ಮೆಸ್ಸಿ ಕಡೆಗೂ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
ಪೂರ್ವಭಾವಿಗಳು
VS
Story first published: Sunday, July 11, 2021, 8:36 [IST]
Other articles published on Jul 11, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X