ಯುರೋಪಾ ಲೀಗ್ : 16ರ ಘಟ್ಟದಲ್ಲಿ ಯಾವ ತಂಡಗಳ ಸೆಣಸು?

Posted By:

ಬೆಂಗಳೂರು, ಫೆಬ್ರವರಿ 23 : ಯುರೋಪಾ ಲೀಗ್ ನ 16ರ ಘಟ್ಟದಲ್ಲಿ ಯಾರು ಯಾರು ಸ್ಪರ್ಧಿಸಲಿದ್ದಾರೆ ಎಂಬ ಕಾರ್ಯಕ್ರಮ ಪಟ್ಟಿ ನಿಗದಿಯಾಗಿದೆ. ಆರ್ಸೆನಲ್, ಅಟ್ಲೆಟಿಕೋ ಮ್ಯಾಡ್ರಿಡ್, ಎಸಿ ಮಿಲಾನ್ ಹಾಗೂ ಬೊರುಸಿಯಾ ಡೊರ್ಟ್ಮಂಟ್ ಮುಂತಾದ ತಂಡಗಳು ಈ ಹಂತ ತಲುಪಿವೆ.

ಈ ಪೈಕಿ ಎಸಿ ಮಿಲಾನ್ ಹಾಗೂ ಆರ್ಸೆನಲ್ ನಡುವಿನ ಪಂದ್ಯವನ್ನು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. ಮೊದಲ ಹಂತದ ಪಂದ್ಯಗಳು ಮಾರ್ಚ್ 08ರಿಂದ ನಡೆಯಲಿದ್ದು, ನಂತರ ಮಾರ್ಚ್ 15ರಿಂದ ಮುಂದಿನ ಹಂತದ ಪಂದ್ಯಗಳು ನಿಗದಿಯಾಗಿವೆ.

Europa League: Last-16 draw in full

ಯುರೋಪಾ ಲೀಗ್ 16ರ ಹಂತದ ಪಂದ್ಯಗಳ ನಿಗದಿ
* ಲಾಜಿಯೋ ವಿರುದ್ಧ ಡೈನಮೋ ಕೀವ್
* ಆರ್ ಬಿ ಲೈಪ್ಜಿಂಗ್ ವಿರುದ್ಧ ಜೆನಿಟ್
* ಆಟ್ಲೆಟಿಕೋ ಮ್ಯಾಡ್ರಿಡ್ ವಿರುದ್ಧ ಲೊಕೊಮೊಟಿವ್ ಮಾಸ್ಕೊ
* ಸಿಎಸ್ ಕೆಎ ಮಾಸ್ಕೋ ವಿರುದ್ಧ ಲಿಯಾನ್
* ಮಾರ್ಸೆಲೆ ವಿರುದ್ಧ ಅಥ್ಲೆಟಿಕ್ ಬಿಲ್ಬೋ
* ಸ್ಫೋರ್ಟಿಂಗ್ ಸಿಪಿ ವಿರುದ್ಧ ವಿಕ್ಟೋರಿಯಾ ಪ್ಲೆಜೆನ್
* ಬೊರೊಸಿಯಾ ಡೋರ್ಟ್ಮಂಡ್ ವಿರುದ್ಧ ಸಾಲ್ಜ್ ಬರ್ಗ್
* ಎಸಿ ಮಿಲಾನ್ ವಿರುದ್ಧ ಆರ್ಸೆನಲ್

Story first published: Friday, February 23, 2018, 20:20 [IST]
Other articles published on Feb 23, 2018
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ