ಫೀಫಾ ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊಗೆ ಕೊರೊನಾವೈರಸ್ ಸೋಂಕು

ನವದೆಹಲಿ: ಫೆಡರೇಶನ್ ಇಂಟರ್ ನ್ಯಾಷನಲ್ ಡೆ ಫುಟ್ಬಾಲ್ ಅಸೋಸಿಯೇಶನ್ (ಫೀಫಾ) ಅಧ್ಯಕ್ಷ ಗಿಯಾನಿ ಇನ್‌ಫ್ಯಾಂಟಿನೊಗೆ ಕೊರೊನಾವೈರಸ್ ಸೋಂಕು ತಗುಲಿದೆ. ವಿಶ್ವ ಫುಟ್ಬಾಲ್ ಆಡಳಿತ ಮಂಡಳಿ ಈ ವಿಚಾರವನ್ನು ಮಂಗಳವಾರ (ಅಕ್ಟೋಬರ್ 27) ತಿಳಿಸಿದೆ (ಚಿತ್ರದಲ್ಲಿ ಮಧ್ಯದಲ್ಲಿರುವವರು ಗಿಯಾನಿ).

ಭಾರತ vs ಆಸೀಸ್: ಬಾಕ್ಸಿಂಗ್‌ ಡೇ ಟೆಸ್ಟ್‌ಗೆ 25,000 ವೀಕ್ಷಕರಿಗೆ ಅವಕಾಶ

50ರ ಹರೆಯದ ಗಿಯಾನಿ ಇನ್‌ಫ್ಯಾಂಟಿನೊಗೆ ಸಣ್ಣಗೆ ಕೊರೊನಾ ಗುಣಲಕ್ಷಣಗಳು ಕಾಣಿಸಿಕೊಂಡಿವೆ. ಇನ್ನುಳಿದಂತೆ 10 ದಿನಗಳಿಂದ ಅವರು ಐಸೊಲೇಶನ್‌ನಲ್ಲಿದ್ದಾರೆ. 'ಅಧ್ಯಕ್ಷ ಇನ್‌ಫ್ಯಾಂಟಿನೊ ಶೀಘ್ರ ಗುಣಮುಖರಾಗಲಿ ಎಂದು ಫೀಫಾ ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತದೆ,' ಎಂದು ಫೀಫಾ ಹೇಳಿದೆ.

'ಕಳೆದ ಕೆಲ ದಿನಗಳಿಂದ ಫೀಫಾ ಅದ್ಯಕ್ಷ ಗಿಯಾನಿ ಜೊತೆಗೆ ಯಾರೆಲ್ಲ ಸಂಪರ್ಕದಲ್ಲಿದ್ದಿರೋ ಅವರೆಲ್ಲ ಕೋವಿಡ್-19 ಕುರಿತಾಗಿ ಮುನ್ನೆಚ್ಚರಿಕೆಯಾಗಿ ಅಗತ್ಯ ಕ್ರಮ ಕೈಗೊಳ್ಳಲು ವಿನಂತಿಸಿಕೊಳ್ಳುತ್ತಿದ್ದೇವೆ,' ಎಂದೂ ಫೀಫಾ ಮಾಹಿತಿ ನೀಡಿದೆ.

ಭಾರತ vs ಆಸ್ಟ್ರೇಲಿಯಾ: ಟೆಸ್ಟ್, ಟಿ20, ಏಕದಿನ ಪಂದ್ಯಗಳ ಸಮಯ ಪ್ರಕಟ

ಅಕ್ಟೋಬರ್ 16ರಂದು ಫೀಫಾಗೆ ಸಂಬಂಧಿಸಿದ ಕಾರ್ಯಕ್ರಮವೊಂದರ ಸಲುವಾಗಿ ಇನ್‌ಫ್ಯಾಂಟಿನೋ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ವಿಡಿಯೋ ಕಾರ್ಯಕ್ರದಲ್ಲಿ ಎಲ್ಲರೂ ಕಾಣಸಿಕೊಳ್ಳಬೇಕು ಎಂದು ತಿಳಿಸಲಾಗಿದ್ದರಿಂದ ಗಿಯಾನಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದದರು.

For Quick Alerts
ALLOW NOTIFICATIONS
For Daily Alerts
Story first published: Wednesday, October 28, 2020, 15:46 [IST]
Other articles published on Oct 28, 2020
  • Nov 26 2020, Thu - 01:30 AM (IST)
  • Nov 26 2020, Thu - 01:30 AM (IST)
  • Nov 26 2020, Thu - 01:30 AM (IST)
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X