ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಬಲಿಷ್ಠ ಬ್ರೆಜಿಲ್ ತಂಡವನ್ನು ಸ್ವಿಟ್ಜರ್ಲೆಂಡ್ ತಡೆದಿದ್ದು ಹೇಗೆ?

By Mahesh

ಬೆಂಗಳೂರು, ಜೂನ್ 18: ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಾಜಿ ಚಾಂಪಿಯನ್, ಬಲಿಷ್ಠ ಬ್ರೆಜಿಲ್ ತಂಡ ತನ್ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ರಷ್ಯಾದಲ್ಲಿ ನಡೆದಿರುವ ಫೀಫಾ ವಿಶ್ವಕಪ್ 2018ರ 'ಈ' ಗುಂಪಿನ ಕಾದಾಟದಲ್ಲಿ ಭಾನುವಾರದಂದು ಬ್ರೆಜಿಲ್ ಹಾಗೂ ಸ್ವಿಟ್ಜರ್ಲೆಂಡ್ ನಡುವೆ ರೋಚಕ ಹಣಾಹಣಿ ಕಂಡು ಬಂದಿತು.

ಆದರೆ, ಬ್ರೆಜಿಲ್ ನ ಪ್ರಮುಖ ಆಟಗಾರರನ್ನು ಕಟ್ಟಿ ಹಾಕುವಲ್ಲಿ ಸ್ವಿಟ್ಜರ್ಲೆಂಡ್ ಯಶಸ್ವಿಯಾಯಿತು. ವಿಶ್ವಕಪ್ ಪಂದ್ಯಗಳಲ್ಲದೆ, ಪ್ರಮುಖ ಟೂರ್ನಮೆಂಟ್ ಗಳ ಇತಿಹಾಸ ಅವಲೋಕಿಸಿದರೆ, ಇಲ್ಲಿ ತನಕ ಬ್ರೆಜಿಲ್ ತಂಡವು ಹೆಣಗಾಡಿದ್ದು ಮಾತ್ರ ಯುರೋಪ್ ತಂಡಗಳ ವಿರುದ್ಧ ಮಾತ್ರ.

ಫೀಫಾ ವಿಶ್ವಕಪ್ 2018 ವಿಶೇಷ ಪುಟ : ವೇಳಾಪಟ್ಟಿ | ತಂಡಗಳು

ಭಾನುವಾರದಂದು ಸ್ವಿಟ್ಜರ್ಲೆಂಡ್ ತಂಡವು ಬ್ರೆಜಿಲ್ ವಿರುದ್ಧ ಗೋಲು ಗಳಿಸಿ, 1-1 ಡ್ರಾ ಸಾಧಿಸಿತು. ಬ್ರೆಜಿಲ್ ತಂಡವು ಗೆಲುವು ಸಾಧಿಸದಂತೆ ತಡೆದು ಸ್ವಿಟ್ಜರ್ಲೆಂಡ್ ಎಲ್ಲರ ಗಮನ ಸೆಳೆದಿದೆ.

'ಈ' ಗುಂಪಿನಲ್ಲಿ ಬ್ರೆಜಿಲ್ ಹಾಗೂ ಸ್ವಿಟ್ಜರ್ಲೆಂಡ್ ಅಲ್ಲದೆ, ಸೆರ್ಬಿಯಾ ಹಾಗೂ ಕೋಸ್ಟರಿಕಾ ತಂಡಗಳಿವೆ. ಕೋಸ್ಟರಿಕಾ ವಿರುದ್ಧ ಸೆರ್ಬಿಯಾ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ರೆಜಿಲ್ ಗೆಲುವು ಸಾಧಿಸದಿರಲು ಏನು ಕಾರಣ ಮುಂದೆ ಓದಿ...

ನೇಮಾರ್ ಹಾಗೂ ಜೀಸಸ್

ನೇಮಾರ್ ಹಾಗೂ ಜೀಸಸ್

ಬ್ರೆಜಿಲ್ ನ ಪ್ರಮುಖ ಆಟಗಾರರಾದ ನೇಮಾರ್ ಹಾಗೂ ಜೀಸಸ್ ಅವರನ್ನು ಕಟ್ಟಿ ಹಾಕುವುದು ಸ್ವಿಟ್ಜರ್ಲೆಂಡ್ ನ ಪ್ರಮುಖ ಗುರಿಯಾಗಿತ್ತು. ಪ್ಯಾರೀಸ್ ಸೈಂಟ್ ಜರ್ಮನ್ ಪರ ಆಡುತ್ತಾ ಪಾದಕ್ಕೆ ಗಾಯ ಮಾಡಿಕೊಂಡಿರುವ ನೇಮಾರ್, ಅವರು ಮೈದಾನದಲ್ಲಿ ತ್ವರಿತಗತಿ ಓಡಿದ್ದಕ್ಕಿಂತ ಕೆಳಗೆ ಬಿದ್ದಿದ್ದೇ ಎದ್ದು ಕಾಣುತ್ತಿತ್ತು. ಒಂದೆರಡು ಬಾರಿ ಗುರಿಯೆಡೆಗೆ ದಾಳಿ ಮಾಡಿದರೂ, ಸ್ವೀಸ್ ರಕ್ಷಣಾ ಕೋಟೆ ದಾಟಲು ಆಗಲಿಲ್ಲ.

ಇದೇ ರೀತಿ, ರಾಬರ್ಟೋ ಫರ್ಮಿನೋ ಬದಲಿಗೆ ಮೈದಾನಕ್ಕಿಳಿದಿದ್ದ ಜೀಸಸ್ ಕೂಡಾ ಸ್ವೀಸ್ ರಣತಂತ್ರ ಅರಿಯಲು ಆಗಲಿಲ್ಲ, ಫರ್ಮಿನೊ ಕಣಕ್ಕಿಳಿಯುವ ಹೊತ್ತಿಗೆ ಆಟದ ಮೇಲೆ ಬ್ರೆಜಿಲ್ ಹಿಡಿತ ತಪ್ಪಿತ್ತು.

ಮೊದಲ ಗೋಲಿನ ನಂತರ ನಿಧಾನಗತಿ ಆಟ

ಪಂದ್ಯದ 20ನೇ ನಿಮಿಷದ ನಂತರ ಬ್ರೆಜಿಲ್ ತನ್ನ ಆಟದ ಗತಿಯನ್ನು ತೀವ್ರಗೊಳಿಸಬಹುದಿತ್ತು. ಆದರೆ, ಫಿಲಿಫೆ ಕೌಟಿನ್ಹೋ ಮೊದಲ ಗೋಲು ಗಳಿಸಿದ ಬಳಿಕ, ಬ್ರೆಜಿಲ್ ಸ್ವಲ್ಪ ರಿಲ್ಯಾಕ್ಸ್ ಮೂಡ್ ನಲ್ಲಿದ್ದಂತೆ ಕಂಡು ಬಂದಿತು. ಹೀಗಾಗಿ, ಸ್ವಿಟ್ಜರ್ಲೆಂಡ್ ಸುಲಭವಾಗಿ ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು. ಬ್ರೆಜಿಲ್ ಡಿಫೆಂಡರ್ ಗಳ ವೈಫಲ್ಯದಿಂದ ಸ್ವಿಟ್ಜರ್ಲೆಂಡ್ ಗೋಲು ಗಳಿಸಲು ಸಾಧ್ಯವಾಯಿತು.

ನೇಮಾರ್ ಹಾಗೂ ಜೀಸಸ್

ಬ್ರೆಜಿಲ್ ನ ಪ್ರಮುಖ ಆಟಗಾರರಾದ ನೇಮಾರ್ ಹಾಗೂ ಜೀಸಸ್ ಅವರನ್ನು ಕಟ್ಟಿ ಹಾಕುವುದು ಸ್ವಿಟ್ಜರ್ಲೆಂಡ್ ನ ಪ್ರಮುಖ ಗುರಿಯಾಗಿತ್ತು. ಪ್ಯಾರೀಸ್ ಸೈಂಟ್ ಜರ್ಮನ್ ಪರ ಆಡುತ್ತಾ ಪಾದಕ್ಕೆ ಗಾಯ ಮಾಡಿಕೊಂಡಿರುವ ನೇಮಾರ್, ಅವರು ಮೈದಾನದಲ್ಲಿ ತ್ವರಿತಗತಿ ಓಡಿದ್ದಕ್ಕಿಂತ ಕೆಳಗೆ ಬಿದ್ದಿದ್ದೇ ಎದ್ದು ಕಾಣುತ್ತಿತ್ತು. ಒಂದೆರಡು ಬಾರಿ ಗುರಿಯೆಡೆಗೆ ದಾಳಿ ಮಾಡಿದರೂ, ಸ್ವೀಸ್ ರಕ್ಷಣಾ ಕೋಟೆ ದಾಟಲು ಆಗಲಿಲ್ಲ.

ಇದೇ ರೀತಿ, ರಾಬರ್ಟೋ ಫರ್ಮಿನೋ ಬದಲಿಗೆ ಮೈದಾನಕ್ಕಿಳಿದಿದ್ದ ಜೀಸಸ್ ಕೂಡಾ ಸ್ವೀಸ್ ರಣತಂತ್ರ ಅರಿಯಲು ಆಗಲಿಲ್ಲ, ಫರ್ಮಿನೊ ಕಣಕ್ಕಿಳಿಯುವ ಹೊತ್ತಿಗೆ ಆಟದ ಮೇಲೆ ಬ್ರೆಜಿ ಹಿಡಿತ ತಪ್ಪಿತ್ತು.

ಪಂದ್ಯ ಮುಗಿಸಲು ಇಲ್ಲದ ಉತ್ಸಾಹ

ನೇಮಾರ್, ಜೀಸಸ್, ಕೌಂಟಿನ್ಹೋರಂಥ ಪ್ರತಿಭಾವಂತರನ್ನು ಹೊಂದಿದ್ದ ಬ್ರೆಜಿಲ್ ತಂಡದ ದಾಳಿಯಲ್ಲಿ ಹೆಚ್ಚಿನ ಬಲ ಕಂಡು ಬಂದಿಲ್ಲ. ಪೌಲಿನ್ಹೋ, ಫರ್ಮಿನೋ, ಮಿರಾಂಡಾ, ಫರ್ನಾಂಡಿನ್ಹೋ ಅವರು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಗೋಲ್ ಪೋಸ್ಟ್ ಕಡೆ ಬಾರಿಸಿದ ಗುರಿಯಾಗಿಸಿದ ಕಿಕ್ ಗಳು ಶೇ21ರಷ್ಟು ಮಾತ್ರ ಎಂದರೆ ಬ್ರೆಜಿಲ್ ತಂಡದ ಆಟದ ವೈಖರಿ ಅರ್ಥವಾಗುತ್ತದೆ.

ಸಂಘಟಿತ ಹೋರಾಟದ ಕೊರತೆ

ಸಂಘಟಿತ ಹೋರಾಟದ ಕೊರತೆ

ಕೌಟಿನ್ಹೋ ಬಿಟ್ಟರೆ, ಬ್ರೆಜಿಲ್ ಪರ ಗೋಲು ಬಾರಿಸಬಲ್ಲ ಆಟಗಾರರು ಯಾರೂ ಕಾಣಿಸಲಿಲ್ಲ. ಆದರೆ, ಮಿಕ್ಕ ಫಾರ್ವಡ್ ಆಟಗಾರರು ಯಾವುದೇ ತ್ವರಿತಗತಿ ಆಟ ತೋರಲಿಲ್ಲ. ಸ್ವಿಸ್ ರಕ್ಷಣಾ ಕೋಟೆಯ ನಾಲ್ಕು ಆಟಗಾರರು ಫಾರ್ವಡ್ ಆಟಗಾರರನ್ನು ಕಟ್ಟಿ ಹಾಕುತ್ತಿರುವುದು ಗಮನಕ್ಕೆ ಬಂದರೂ, ಇದಕ್ಕೆ ಪ್ರತಿತಂತ್ರ ರೂಪಿಸುವಲ್ಲಿ ಬ್ರೆಜಿಲ್ ವಿಫಲವಾಯಿತು.

ಸ್ವಿಸ್ ರಕ್ಷಣಾ ಕೋಟೆ ಬಗ್ಗೆ ಮೆಚ್ಚುಗೆ

ಸ್ವಿಸ್ ತನ್ನ ಮೂಲ ರಣತಂತ್ರಕ್ಕೆ ತಕ್ಕಂತೆ ಆಟವಾಡಿತು. ನೇಮಾರ್ ಆಟವನ್ನು ನಿಯಂತ್ರಿಸುತ್ತಿದ್ದಂತೆ, ಬ್ರೆಜಿಲ್ ಪ್ಲ್ಯಾನ್ ಬಿ ಕಂಡುಕೊಳ್ಳಲು ಹೆಣಗಾಡಿತು. ಜೀಸಸ್ ಕೂಡಾ ಅಗತ್ಯಕ್ಕೆ ತಕ್ಕಂತೆ ಆಡಲಿಲ್ಲ. ಹೀಗಾಗಿ, ಬ್ರೆಜಿಲ್ ಗಿಂತ ಶೇ10ರಷ್ಟು ಹೆಚ್ಚು ಕಾಲ ಚೆಂಡನ್ನು ತನ್ನ ಬಳಿ ಇರಿಸಿಕೊಳ್ಳುವಲ್ಲಿ ಸಫಲವಾದ ಸ್ವಿಸ್ ಪಡೆ, ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು.

Story first published: Monday, June 18, 2018, 21:00 [IST]
Other articles published on Jun 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X