ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವ ಕಪ್ 2018: ಹಾಲಿ ಚಾಂಪಿಯನ್ಸ್ ಜರ್ಮನಿ ಮತ್ತೆ ಗೆಲ್ಲುತ್ತಾ?

FIFA world cup 2018 : ಹಾಲಿ ಚಾಂಪಿಯನ್ಸ್ ಜರ್ಮನಿ ಮತ್ತೆ ಗೆಲ್ಲುತ್ತಾ? | Oneindia Kannada
FIFA World Cup 2018: Can defending champions Germany pull off a repeat show?

ನವದೆಹಲಿ, ಜೂ. 4: ರಷ್ಯಾದಲ್ಲಿ ನಡೆಯಲಿರುವ 2018ರ ಫೀಫಾ ವಿಶ್ವಕಪ್ ಫುಟ್ಬಾಲ್ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಒಟ್ಟು 32 ತಂಡಗಳು ಮಹಾನ್ ಕಾದಾಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ರಷ್ಯಾದಲ್ಲಿ ಜೂನ್ 14 ರಿಂದ ಜುಲೈ 15ರ ವರೆಗೆ ಈ ಫುಟ್ಬಾಲ್ ಹಬ್ಬ ರಂಜಿಸಲಿದೆ.

ಈ ಬಾರಿ ಫೀಫಾ ವರ್ಲ್ಡ್ ಕಪ್ ಪಂದ್ಯಾಟದಲ್ಲಿ ಪಾಲ್ಗೊಳ್ಳುತ್ತಿರುವ 32 ತಂಡಗಳಲ್ಲಿ ಜರ್ಮನಿ ಪ್ರಮುಖ ತಂಡವಾಗಿದೆ. 2014ರಲ್ಲಿ ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದಿದ್ದ ವಿಶ್ವಕಪ್ ಫುಟ್ಬಾಲ್ ಪಂದ್ಯಾಟದಲ್ಲಿ ಜರ್ಮನಿ ತಂಡ ಅರ್ಜೆಂಟೀನಾವನ್ನು 1-0 ಅಂತರದಿಂದ ಸೋಲಿಸಿ ಚಾಂಪಿಯನ್ ಎನಿಸಿಕೊಂಡಿತ್ತು.

ಜರ್ಮನಿ ಈ ಬಾರಿಯೂ ಗೆಲ್ಲುವ ಬಲಾಡ್ಯ ತಂಡವಾಗಿ ಗುರುತಿಸಿಕೊಂಡಿದೆ. ಥಾಮಸ್ ಮುಲ್ಲರ್, ಜೋಶುವಾ ಕಿಮ್ಮಿಚ್, ಮಾರ್ಕ್-ಆಂಡ್ರೆ ಟೆರ್ ಸ್ಟೀಗನ್ ಅವರಂತ ಸ್ಟಾರ್ ಆಟಗಾರರ ಬಲವಿರುವ ಜರ್ಮನಿ ಈ ಬಾರಿಯೂ ಗೆಲ್ಲುತ್ತಾ ಕಾದು ನೋಡಬೇಕಿದೆ.

ಜರ್ಮನಿ ಬಗ್ಗೆ ಇನ್ನೊಂದಿಷ್ಟು ಮಾಹಿತಿಗಳು ಇಲ್ಲಿವೆ.

ದೇಶ: ಜರ್ಮನಿ, ಗ್ರೂಫ್ ಎಫ್ ನಲ್ಲಿದೆ.
ಆಡಲಿರುವ ಪಂದ್ಯಗಳು: ಜೂನ್ 17, ರಾತ್ರಿ 8.30 ಕ್ಕೆ (ಮಾಸ್ಕೋ) ಜರ್ಮನಿ ವಿರುದ್ಧ ಸ್ವೀಡನ್, ಜೂನ್ 23, ರಾತ್ರಿ 11.30 ಕ್ಕೆ (ಸೋಚಿ) ಜರ್ಮನಿ ದಕ್ಷಿಣ ಕೊರಿಯಾ ವಿರುದ್ಧ ಜೂನ್ 27 ರಂದು 7.30 ಕ್ಕೆ (ಕಾಜನ್)
ಫೀಫಾ ಶ್ರೇಯಾಂಕ: 1
ಹಿಂದಿನ ವಿಶ್ವಕಪ್: ಚಾಂಪಿಯನ್, ಕೊನೆಯ ಪ್ರದರ್ಶನ: 2014 (ಚಾಂಪಿಯನ್)
ಅತ್ಯುತ್ತಮ ಮುಕ್ತಾಯ: ಚಾಂಪಿಯನ್ (1954, 1974, 1990, 2014)

ಸ್ಟಾರ್ ಆಟಗಾರರು: ಥಾಮಸ್ ಮುಲ್ಲರ್ (ಬೇಯರ್ನ್ ಮ್ಯೂನಿಚ್), ಜೋಶುವಾ ಕಿಮ್ಮಿಚ್ (ಬೇಯೆರ್ನ್ ಮುನಿಚ್), ಟೋನಿ ಕ್ರೂಸ್ (ರಿಯಲ್ ಮ್ಯಾಡ್ರಿಡ್), ಮೆಸಟ್ ಒಜಿಲ್ (ಆರ್ಸೆನಲ್), ಮಾರ್ಕ್-ಆಂಡ್ರೆ ಟೆರ್ ಸ್ಟೆಗನ್ (ಬಾರ್ಸಿಲೋನಾ), ಮ್ಯಾಟ್ಸ್ ಹಮ್ಮೆಲ್ (ಬೇಯರ್ನ್ ಮ್ಯೂನಿಚ್), ಜೆರೋಮ್ ಬೋಟೆಂಗ್ ಮ್ಯೂನಿಚ್), ಮ್ಯಾನುಯೆಲ್ ನೆಯುರ್ (ಬೇಯರ್ನ್ ಮ್ಯೂನಿಚ್), ಲೆರಾಯ್ ಸೇನ್ (ಮ್ಯಾಂಚೆಸ್ಟರ್ ಸಿಟಿ)
ಕೋಚ್: ಜೋಕಿಮ್ ಲೊವೆ

Story first published: Friday, June 8, 2018, 18:16 [IST]
Other articles published on Jun 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X