Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ : ಇಂಗ್ಲೆಂಡ್ ನಾಯಕ ಕೇನ್ ಗೆ ಒಲಿದ ಚಿನ್ನದ ಬೂಟು

FIFA World Cup 2018 : All golden boot winners from 1930-2018

ಬೆಂಗಳೂರು, ಜುಲೈ 15: 'ಬ್ಯೂಟಿಫುಲ್ ಗೇಮ್' ಫುಟ್ಬಾಲ್ ನ ಜಾಗತಿಕ ಹಬ್ಬವು ರಷ್ಯಾದಲ್ಲಿ ಉತ್ತಮ ರೀತಿಯಲ್ಲಿ ಅಂತ್ಯ ಕಂಡಿದೆ. ಎಲ್ಲಾ ಸ್ತರದ ಜನರು ಮೆಚ್ಚಿ ಆಡುವ ಫುಟ್ಬಾಲ್ ಆಟದ ವಿಶ್ವಕಪ್- ಫೀಫಾ ವಿಶ್ವಕಪ್ ಟೂರ್ನಮೆಂಟ್ ನಂತರ ಅನೇಕ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿದೆ. ಚಿನ್ನದ ಬೂಟು ವಿಜೇತರ ಪಟ್ಟಿ ಇಲ್ಲಿದೆ. ಈ ಬಾರಿ ಕಪ್ ಗೆಲ್ಲಲು ಸಾಧ್ಯವಾಗದಿದ್ದರೂ, ಇಂಗ್ಲೆಂಡ್ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ತಂಡದ ನಾಯಕ ಹ್ಯಾರಿ ಕೇನ್ 6 ಗೋಲು ಗಳಿಸಿದ್ದು, ತಂಡವನ್ನು ಸೆಮಿಫೈನಲ್ ತನಕ ತರುವಲ್ಲಿ ಯಶಸ್ವಿಯಾಗಿದ್ದರು. ಎರಡನೇ ಸ್ಥಾನದಲ್ಲಿ ಪೋರ್ಚುಗಲ್ ನಾಯಕ ಕ್ರಿಸ್ಚಿಯಾನೋ ರೊನಾಲ್ಡೊ 4, ಬೆಲ್ಜಿಯಂನ ಲುಕಾಕು, ರಷ್ಯಾದ ಚೆರಿಶೆವ್ ಇದ್ದರು.

ಫೈನಲ್ ಪಂದ್ಯವಾಡಿದ ಫ್ರಾನ್ಸ್ ಹಾಗೂ ಕ್ರೋವೇಷಿಯಾದ ಆಟಗಾರರು ಟಾಪ್ 10 ಪಟ್ಟಿಯಲ್ಲಿ ಹೆಚ್ಚಾಗಿ ಇಲ್ಲ. ಫ್ರಾನ್ಸಿನ ಯುವ ಆಟಗಾರ ಎಂಬಾಪೆ, ಅಂಟೋನಿ ಗ್ರೀಜ್ಮಾನ್ ತಲಾ 4 ಗೋಲು ಗಳಿಸಿದ್ದಾರೆ.

ವಿಶ್ವಕಪ್ ಪ್ರಶಸ್ತಿಗಳ ಪೈಕಿ ಗೋಲ್ಡನ್ ಬೂಟ್ ಅತ್ಯಂತ ಮುಖ್ಯವಾದದ್ದು, ಇದಲ್ಲದೆ, ಗೋಲ್ಡನ್ ಚೆಂಡು, ಗ್ಲೋವ್, ಯಂಗ್ ಪ್ಲೇಯರ್, ಫೇರ್ ಪ್ಲೇ, ಮ್ಯಾನ್ ಆಫ್ ದಿ ಮ್ಯಾಚ್, ಮನರಂಜನಾ ತಂಡ, ಆಲ್ ಸ್ಟಾರ್ ಟೀಮ್ ಪ್ರಶಸ್ತಿ ನೀಡಲಾಗುತ್ತದೆ.

1
958085

ಗೋಲ್ಡನ್ ಬೂಟ್ ಅಡಿಡಾಸ್ ಗೋಲ್ಡನ್ ಶೂ ಎಂದು ಕರೆಯಲಾಗುತ್ತಿತ್ತು. 2006ರ ನಂತರ ಗೋಲ್ಡನ್ ಬೂಟ್ ಎಂದೇ ಕರೆಯುತ್ತಾರೆ. ಟೂರ್ನಮೆಂಟ್ ನಲ್ಲಿ ಅತಿ ಹೆಚ್ಚು ಗೋಲು ದಾಖಲಿಸುವ ಆಟಗಾರನಿಗೆ ಈ ಪ್ರಶಸ್ತಿ ಸಿಗಲಿದೆ. 1982ರ ನಂತರ ಸಿಲ್ವರ್ ಹಾಗೂ ಕಂಚಿನ ಬೂಟು ಕೂಡಾ ನೀಡಲಾಗುತ್ತಿದೆ.

ಇಲ್ಲಿ ತನಕ ಚಿನ್ನದ ಬೂಟು ಗಳಿಸಿದವರ ಪಟ್ಟಿ ಇಲ್ಲಿದೆ:
1. 1930 > ಗುಲ್ಲಿರ್ಮೋ ಸ್ಟಾಬಿಲ್ > ಅರ್ಜೆಂಟಿನಾ > 8 ಗೋಲು
2. 1934 > ಒಲ್ದರಿಚ್ ನೆಜೆಡ್ಲೆ > ಚೆಕೊಸ್ಲೋವಾಕಿಯಾ > 5 ಗೋಲು
3. 1938 > ಲಿಯೋನಿಡಾಸ್ ಡ ಸಿಲ್ವಾ > ಬ್ರೆಜಿಲ್ > 7 ಗೋಲು
4. 1950 > ಅಡೆಮಿರ್ ಮರ್ಕೂಸ್ ಡಿ ಮೆಂಜಿಸ್ > ಬ್ರೆಜಿಲ್ > 9 ಗೋಲು
5. 1954 > ಸ್ಯಾ ನ್ಡೊರ್ ಕೊಸಿಸ್ > ಹಂಗೇರಿ > 11 ಗೋಲು
6 . 1958 > ಜಸ್ಟ್ ಫಾನ್ ಟೆನ್ > ಫ್ರಾನ್ಸ್ - 13 ಗೋಲು (ಇಲ್ಲಿ ತನಕ ದಾಖಲೆ ಮುರಿದಿಲ್ಲ)
7 . 1962 > ಫ್ಲೋರಿಯನ್ ಆಲ್ಬರ್ಟ್ (ಹಂಗೇರಿ), ವಾಲೆಂಟಿನ್ ಇವನಾವ್ ( ಸೋವಿಯತ್ ಒಕ್ಕೂಟ), ಗರಿಂಚಾ ಮತ್ತು ವಾವಾ ( ಬ್ರೆಜಿಲ್), ಡ್ರೆಜನ್ ಜೆರ್ಕೊವಿಕ್ (ಯುಗೋಸ್ಲಾವಿಯಾ), ಲಿಯೋನೆಲ್ ಸಾಂಚೆಸ್ (ಚಿಲಿ) - ತಲಾ 4 ಗೋಲುಗಳು
8. 1966 > ಯೂಸೆಬಿಯೋ ಸಿಲ್ವಾ ಫೆರಿರಾ > ಪೋರ್ಚುಗಲ್ > 9 ಗೋಲು
9. 1970 > ಗೆರ್ಡ್ ಮುಲ್ಲರ್ > ಜರ್ಮನಿ > 10 ಗೋಲು
10. 1974 > ಗ್ರೆಗೊರ್ಜ್ ಲ್ಯಾಟೋ > ಪೋಲಂಡ್ > 7 ಗೋಲು
11. 1978 > ಮಾರಿಯೋ ಕೆಂಪ್ಸ್ > ಅರ್ಜೆಂಟಿನಾ > 6 ಗೋಲು
12. 1982 > ಪಾಲೋ ರೋಸಿ > ಇಟಲಿ > 6 ಗೋಲು
13. 1986 > ಗ್ಯಾರಿ ಲಿನೆಕೆರ್ > ಇಂಗ್ಲೆಂಡ್ > 6 ಗೋಲು
14. 1990 > ಸಾಲ್ವಟಾರ್ ಸ್ಕಿಲಾಚಿ > ಇಟಲಿ > 6 ಗೋಲು
15. 1994 > ಒಲೆಗ್ ಸಲೆಂಕೋ ( ರಷ್ಯಾ), ಹ್ರಿಸ್ಟೋ ಸ್ಟಾಚಿಕೊವ್ ( ಬಲ್ಗೇರಿಯಾ) > ತಲಾ 6 ಗೋಲು
16. 1998 > ಡೆವರ್ ಸುಕರ್ > ಕ್ರೋಸಿಯಾ > 6 ಗೋಲು
17. 2002 > ರೋನಾಲ್ಡೋ ಡಿ ನಿಮಾ > ಬ್ರೆಜಿಲ್ > 8 ಗೋಲು
18. 2006 > ಮಿರೊಸ್ಲಾವ್ ಕ್ಲೋಸ್ > ಜರ್ಮನಿ > 5 ಗೋಲು
19. 2010> ಥಾಮಸ್ ಮುಲ್ಲರ್ > ಜರ್ಮನಿ> 5 ಗೋಲು
20. 2014> ಜೇಮ್ಸ್ ರೋಡ್ರಿಗೇಜ್> ಕೊಲಂಬಿಯಾ>6 ಗೋಲು
21. 2018>> ಹ್ಯಾರಿ ಕೇನ್>ಇಂಗ್ಲೆಂಡ್>6 ಗೋಲು

Story first published: Monday, July 16, 2018, 1:08 [IST]
Other articles published on Jul 16, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+