ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022: ಇರಾನ್ ವಿರುದ್ಧ 6-2 ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್

FIFA World Cup 2022: England Thrash Iran By 6-2 Goal, Started The Campaign With Huge Won

ದೋಹಾದ ಖಲೀಫಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫಿಫಾ ವಿಶ್ವಕಪ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇರಾನ್ ವಿರುದ್ಧ 6-2 ಗೋಲುಗಳ ಅಂತರದ ಭರ್ಜರಿ ಜಯ ಸಾಧಿಸಿದೆ. ತಮ್ಮ ಮೊದಲ ಪಂದ್ಯದಲ್ಲೇ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಇರಾನ್ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭದಿಂದಲೇ ಮೇಲುಗೈ ಸಾಧಿಸಿತು. ಬುಕಾಯೊ ಸಕಾ 43 ಮತ್ತು 62 ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಮಿಂಚಿದರು. ಪಂದ್ಯ ಆರಂಭವಾದ 35ನೇ ನಿಮಿಷದಲ್ಲಿ ಇಂಗ್ಲೆಂಡ್ ಮೊದಲ ಗೋಲು ಬಾರಿಸಿತು.

ಜೂಡ್ ಬೆಲ್ಲಿಂಗ್‌ಹ್ಯಾಮ್ 35ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸುವ ಮೂಲಕ ಇಂಗ್ಲೆಂಡ್‌ಗೆ 1-0 ಮುನ್ನಡೆ ಸಾಧಿಸಲು ಸಹಾಯ ಮಾಡಿದರು. ಬುಕಾಯೊ ಸಕಾ 43ನೇ ನಿಮಿಷದಲ್ಲಿ ಎರಡನೇ ಗೋಲು ಬಾರಿಸಿದರು. ರಹೀಮ್ ಸ್ಟರ್ಲಿಂಗ್ 45ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸಿ ಮುನ್ನಡೆಯನ್ನು ಹೆಚ್ಚಿಸಿದರು. ಮೊದಲಾರ್ಧದ ಅಂತ್ಯಕ್ಕೆ ಇಂಗ್ಲೆಂಡ್ 3-0 ಮುನ್ನಡೆ ಕಾಯ್ದುಕೊಂಡಿತ್ತು.

ಫಿಫಾ ವಿಶ್ವಕಪ್: ಸೆನೆಗಲ್ ವಿರುದ್ಧ ವಿರುದ್ಧ ಗೆದ್ದು ಬೀಗಿದ ನೆದರ್ಲೆಂಡ್ಸ್ಫಿಫಾ ವಿಶ್ವಕಪ್: ಸೆನೆಗಲ್ ವಿರುದ್ಧ ವಿರುದ್ಧ ಗೆದ್ದು ಬೀಗಿದ ನೆದರ್ಲೆಂಡ್ಸ್

ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ಆಕ್ರಮಣಕಾರಿ ಆಟವನ್ನು ಮುಂದುವರೆಸಿತು. 62ನೇ ನಿಮಿಷದಲ್ಲಿ ಬುಕಾಯೊ ಸಕಾ ತಮ್ಮ ಎರಡನೇ ಗೋಲು ಗಳಿಸುವ ಮೂಲಕ ಮುನ್ನಡೆಯನ್ನು 4-0 ಗೆ ಹೆಚ್ಚಿಸಿದರು. ಆದರೆ, 65ನೇ ನಿಮಿಷದಲ್ಲಿ ಮೆಹದಿ ತರೇಮಿ ಇರಾನ್ ಪರಾವಗಿ ಮೊದಲ ಗೋಲು ಗಳಿಸುವ ಮೂಲಕ ಅಂತರವನ್ನು 4-1ಕ್ಕೆ ಕಡಿಮೆ ಮಾಡಿದರು.

FIFA World Cup 2022: England Thrash Iran By 6-2 Goal, Started The Campaign With Huge Won

71ನೇ ನಿಮಿಷದಲ್ಲಿ ಇಂಗ್ಲೆಂಡ್‌ನ ಮಾರ್ಕಸ್ ರ್‍ಯಾಶ್‌ಫೋರ್ಡ್ ಗೋಲು ಗಳಿಸಿದರು. ಇದರೊಂದಿಗೆ ಇಂಗ್ಲೆಂಡ್ 5-1 ರಲ್ಲಿ ಮುನ್ನಡೆ ಸಾಧಿಸಿತು. ಪಂದ್ಯ ಮುಕ್ತಾಯವಾಗುವ ಅಂತಿಮ ಕ್ಷಣದಲ್ಲಿ ಜಾಕ್ ಗ್ರೀಲಿಶ್ ಗೋಲು ಗಳಿಸುವ ಮೂಲಕ ಇಂಗ್ಲೆಂಡ್‌ಗೆ 6-1 ಗೋಲುಗಳ ಮುನ್ನಡೆ ತಂದುಕೊಟ್ಟರು.

ಹೆಚ್ಚವರಿ ಅವಧಿಯಲ್ಲಿ ಇರಾನ್‌ನ ಮೆಹದಿ ತರೇಮಿ ಎರಡನೇ ಗೋಲು ಬಾರಿಸುವ ಮೂಲಕ ಸೋಲಿನ ಅಂತರವನ್ನು 2-6ಕ್ಕೆ ಕಡಿಮೆ ಮಾಡಿಕೊಂಡರು.

ಫಿಫಾ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಇದು ಎರಡನೇ ಬಾರಿಗೆ ಪಂದ್ಯವೊಂದರಲ್ಲಿ 5ಕ್ಕಿಂತ ಹೆಚ್ಚಿನ ಗೋಲು ಗಳಿಸಿದ ಸಾಧನೆ ಮಾಡಿದೆ. 2018ರ ವಿಶ್ವಕಪ್‌ನಲ್ಲಿ ಪನಾಮ ವಿರುದ್ಧ 6-1 ಗೋಲುಗಳ ಜಯ ಸಾಧಿಸಿತ್ತು.

ಉಭಯ ತಂಡಗಳ ಪ್ಲೇಯಿಂಗ್ XI

ಇರಾನ್: ಅಲಿರೆಜಾ ಬೈರನ್‌ವಾಂಡ್, ಸೆಯದ್ ಮಜಿದ್ ಹೊಸೆನಿ, ಚೆಶ್ಮಿ, ಮೊರ್ಟೆಜಾ ಪೌರಲಿಗಂಜಿ, ಮೊಹಮ್ಮದಿ, ಕರಿಮಿ, ಸದೇಗ್ ಮೊಹರಮಿ, ಎಹ್ಸಾನ್ ಹಜ್ಸಾಫಿ (‍ನಾಯಕ), ಅಹ್ಮದ್ ನೂರೊಲ್ಲಾಹಿ, ಮಹೇದಿ ತರೇಮಿ, ಜಹಾನ್‌ಬಕ್ಷ್

ಇಂಗ್ಲೆಂಡ್: ಜೋರ್ಡಾನ್ ಪಿಕ್‌ಫೋರ್ಡ್ (ಗೋಲ್ ಕೀಪರ್), ಕೀರನ್ ಟ್ರಿಪ್ಪಿಯರ್, ಜಾನ್ ಸ್ಟೋನ್ಸ್, ಹ್ಯಾರಿ ಮ್ಯಾಗೈರ್, ಲ್ಯೂಕ್ ಶಾ, ಡೆಕ್ಲಾನ್ ರೈಸ್, ಜೂಡ್ ಬೆಲ್ಲಿಂಗ್‌ಹ್ಯಾಮ್, ರಹೀಮ್ ಸ್ಟರ್ಲಿಂಗ್, ಮೇಸನ್ ಮೌಂಟ್, ಬುಕಯೊ ಸಾಕಾ, ಹ್ಯಾರಿ ಕೇನ್

Story first published: Tuesday, November 22, 2022, 10:52 [IST]
Other articles published on Nov 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X