ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022 Final: ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಮುರಿಯಬಹುದಾದ ದಾಖಲೆಗಳ ಪಟ್ಟಿ

FIFA World Cup 2022: List of Records Lionel Messi Can Break In the FIFA World Cup Final

ಕತಾರ್‌ನಲ್ಲಿ ನಡೆಯುತ್ತಿರುವ 2022ರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿ ಅಂತಿಮ ಘಟ್ಟ ತಲುಪಿದ್ದು, ಭಾನುವಾರ, ಡಿಸೆಂಬರ್ 18ರಂದು ನಡೆಯುವ ಫೈನಲ್ ಪಂದ್ಯದ ಮೂಲಕ ದೊಡ್ಡ ಟೂರ್ನಿಗೆ ತೆರೆಬೀಳಲಿದೆ.

ಕತಾರ್‌ನ ಫಿಫಾ ವಿಶ್ವಕಪ್ ವಿಜೇತ ಯಾರೆಂಬುದನ್ನು ತಿಳಿಯಲು ಕೇವಲ ಒಂದು ಪಂದ್ಯದ ದೂರದಲ್ಲಿದೆ. ಫೈನಲಿಸ್ಟ್‌ಗಳಾದ ಅರ್ಜೆಂಟೀನಾ ಮತ್ತು ಫ್ರಾನ್ಸ್ ತಮ್ಮ ಮೂರನೇ ಪ್ರಶಸ್ತಿಗಾಗಿ ಲುಸೈಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ.

ಇದೇ ವೇಳೆ ಅರ್ಜೆಂಟೀನಾ ನಾಯಕ ಮತ್ತು ಇತಿಹಾಸದ ಅತ್ಯುತ್ತಮ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಫೈನಲ್‌ ಪಂದ್ಯ ಮುಗಿಯುತ್ತಿದ್ದಂತೆ "ಫುಟ್ಬಾಲ್ ಆಟಕ್ಕೆ ಪೂರ್ಣವಿರಾಮ ನೀಡಲು' ತುದಿಗಾಲಲ್ಲಿದ್ದಾರೆ.

FIFA World Cup 2022: ಈವರೆಗಿನ ಗೋಲ್ಡನ್ ಬೂಟ್ ವಿಜೇತರ ಪಟ್ಟಿ; ಈ ಬಾರಿ ಮೆಸ್ಸಿಗಿದೆ ಚಾನ್ಸ್!FIFA World Cup 2022: ಈವರೆಗಿನ ಗೋಲ್ಡನ್ ಬೂಟ್ ವಿಜೇತರ ಪಟ್ಟಿ; ಈ ಬಾರಿ ಮೆಸ್ಸಿಗಿದೆ ಚಾನ್ಸ್!

7 ಬಾರಿ ಬ್ಯಾಲನ್ ಡಿ'ಓರ್ ವಿಜೇತ ಕಿರೀಟವನ್ನು ಅಲಂಕರಿಸಿದ ಲಿಯೋನೆಲ್ ಮೆಸ್ಸಿ ಫಿಫಾ ವಿಶ್ವಕಪ್ ಪ್ರಶಸ್ತಿಯನ್ನು ಹೊರತುಪಡಿಸಿ ಫುಟ್ಬಾಲ್ ಆಟದಲ್ಲಿ ನೀಡುವ ಎಲ್ಲ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದೀಗ ಫಿಫಾ ವಿಶ್ವಕಪ್ ಟ್ರೋಫಿ ಬರವನ್ನು ನೀಗಿಸಿಕೊಳ್ಳುವ ತವಕದಲ್ಲಿದ್ದಾರೆ.

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು (5)

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು (5)

ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಭಾನುವಾರದ ಫೈನಲ್ ಪಂದ್ಯದ ಸೆಣಸಾಟದಲ್ಲಿ ಫ್ರಾನ್ಸ್ ತಂಡವನ್ನು ಎದುರಿಸುವಾಗ, ಮೆಸ್ಸಿ ಫಿಫಾ ವಿಶ್ವಕಪ್ ಟ್ರೋಫಿಯ ಜೊತೆಗೆ ಹಲವಾರು ವೈಯಕ್ತಿಕ ದಾಖಲೆಗಳನ್ನು ಮುರಿಯಲು ಎದುರು ನೋಡುತ್ತಿದ್ದಾರೆ.

ಲಿಯೋನೆಲ್ ಮೆಸ್ಸಿ ಈಗಾಗಲೇ ಕತಾರ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು (5), ಹೆಚ್ಚು ಅಸಿಸ್ಟ್‌ಗಳು (3), ಹೆಚ್ಚಿನ ಶಾಟ್ಸ್ (27) ಮತ್ತು ಹೆಚ್ಚಿನ ಅವಕಾಶಗಳನ್ನು (18) ಸೃಷ್ಟಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಇನ್ನೂ ಕೆಲವು ಮೈಲಿಗಲ್ಲುಗಳನ್ನು ಸೃಷ್ಟಿಸಲು ಕಾಯುತ್ತಿದ್ದಾರೆ.

ಫ್ರಾನ್ಸ್ ವಿರುದ್ಧ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ಮುರಿಯಬಹುದಾದ ದಾಖಲೆಗಳ ಪಟ್ಟಿ ಇಲ್ಲಿದೆ.

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಹೆಚ್ಚಿನ ಗೋಲುಗಳು ಮತ್ತು ಅಸಿಸ್ಟ್‌ಗಳು

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಹೆಚ್ಚಿನ ಗೋಲುಗಳು ಮತ್ತು ಅಸಿಸ್ಟ್‌ಗಳು

Squawka 1966ರಲ್ಲಿ ಡೇಟಾ ಸಂಗ್ರಹಣೆಯನ್ನು ಪ್ರಾರಂಭಿಸಿದ ನಂತರ ಅರ್ಜೆಂಟೀನಾದ ಸ್ಟಾರ್ ಅಟಗಾರ ಲಿಯೋನೆಲ್ ಮೆಸ್ಸಿ ಒಟ್ಟು 19 ನೇರ ಗೋಲು ಕೊಡುಗೆಗಳನ್ನು ನೀಡಿದ್ದಾರೆ. ಜರ್ಮನಿಯ ಮಿರೊಸ್ಲಾವ್ ಕ್ಲೋಸ್ ಮತ್ತು ಬ್ರೆಜಿಲ್‌ನ ರೊನಾಲ್ಡೊ ಅವರೊಂದಿಗೆ ಪ್ರಸ್ತುತ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

ಒಟ್ಟಾರೆಯಾಗಿ, ಲಿಯೋನೆಲ್ ಮೆಸ್ಸಿ 20 ನೇರ ಗೋಲು ಕೊಡುಗೆಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ, ಆದರೆ ಬ್ರೆಜಿಲ್ ದಂತಕಥೆ ಪೀಲೆ 22 ಗೋಲುಗಳನ್ನು ಹೊಂದಿದ್ದಾರೆ.

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಆಟಗಾರನಿಗೆ ಹೆಚ್ಚಿನ ಗೆಲುವುಗಳು

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಆಟಗಾರನಿಗೆ ಹೆಚ್ಚಿನ ಗೆಲುವುಗಳು

35 ವರ್ಷ ವಯಸ್ಸಿನ ಲಿಯೋನೆಲ್ ಮೆಸ್ಸಿ ತನ್ನ 5ನೇ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 16 ಪಂದ್ಯಗಳನ್ನು ಗೆದ್ದಿದ್ದಾರೆ. ಇನ್ನು ಒಂದು ಗೆಲುವು ಅವರನ್ನು ನಂ.1 ಸ್ಥಾನಕ್ಕೆ ಕರೆದೊಯ್ಯುತ್ತದೆ. ಪ್ರಸ್ತುತ ಜರ್ಮನಿಯ ಮಿರೊಸ್ಲಾವ್ ಕ್ಲೋಸ್ ಅವರು ಫಿಫಾ ವಿಶ್ವಕಪ್ ಪಂದ್ಯಾವಳಿಯ ಇತಿಹಾಸದಲ್ಲಿ ಒಟ್ಟು 17 ಪಂದ್ಯಗಳನ್ನು ಗೆದ್ದಿದ್ದಾರೆ.

ಹೆಚ್ಚಿನ ಫಿಫಾ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡ ಆಟಗಾರ

ಹೆಚ್ಚಿನ ಫಿಫಾ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡ ಆಟಗಾರ

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಈಗಾಗಲೇ 25 ಪಂದ್ಯಗಳಲ್ಲಿ ಜರ್ಮನಿಯ ಲೋಥರ್ ಮ್ಯಾಥೌಸ್ ಅವರೊಂದಿಗೆ ಜಂಟಿ ಅಗ್ರಸ್ಥಾನದಲ್ಲಿರುವ ಲಿಯೋನೆಲ್ ಮೆಸ್ಸಿ, ಫ್ರಾನ್ಸ್ ವಿರುದ್ಧದ ಫೈನಲ್‌ನಲ್ಲಿ ಕಾಣಿಸಿಕೊಳ್ಳುವುದುರಿಂದ ಖಂಡಿತವಾಗಿಯೂ ಈ ದಾಖಲೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಇದು ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಅವರ ದಾಖಲೆಯ 26ನೇ ಪ್ರದರ್ಶನವಾಗಿರಲಿದೆ.

ಫಿಫಾ ವಿಶ್ವಕಪ್‌ನಲ್ಲಿ ಹೆಚ್ಚಿನ ಅಸಿಸ್ಟ್‌ಗಳು
ಲೆಜೆಂಡರಿ ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ ಪೀಲೆ ಅವರನ್ನು ಹಿಂದೆ ಹಾಕಲು ಮೆಸ್ಸಿಗೆ ಕೇವಲ ಎರಡು ಅಸಿಸ್ಟ್ ಅವಶ್ಯಕತೆ ಇದೆ. ಮೆಸ್ಸಿ ಫಿಫಾ ಪಂದ್ಯಾವಳಿಯಲ್ಲಿ ಒಟ್ಟು 9 ಅಸಿಸ್ಟ್‌ಗಳನ್ನು ದಾಖಲಿಸಿದ್ದಾರೆ. ಇನ್ನು ಪೀಲೆ ಅವರು ಈ ಹಿಂದೆ 10 ಅಸಿಸ್ಟ್ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಫಿಫಾ ವಿಶ್ವಕಪ್‌ನಲ್ಲಿ ಹೆಚ್ಚಿನ ಗೋಲ್ಡನ್ ಬಾಲ್ ಪ್ರಶಸ್ತಿಗಳು

ಫಿಫಾ ವಿಶ್ವಕಪ್‌ನಲ್ಲಿ ಹೆಚ್ಚಿನ ಗೋಲ್ಡನ್ ಬಾಲ್ ಪ್ರಶಸ್ತಿಗಳು

ಮೆಸ್ಸಿ 2014ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ತಂಡದ ಪರ ಕಾಣಿಸಿಕೊಂಡರು. ಆದರೆ ಅವರ ತಂಡವನ್ನು ಜರ್ಮನಿಯು ಪ್ರಶಸ್ತಿ ಹಣಾಹಣಿಯಲ್ಲಿ ಸೋಲಿಸಿತು. ಆದರೂ, ಪ್ರತಿಷ್ಠಿತ ಗೋಲ್ಡನ್ ಬಾಲ್ ಗೆದ್ದ ಲಿಯೋನೆಲ್ ಮೆಸ್ಸಿ, ಪಂದ್ಯಾವಳಿಯ ಅತ್ಯುತ್ತಮ ಆಟಗಾರ ಎಂದು ಹೆಸರಿಸಲ್ಪಟ್ಟರು. ಆದರೆ, ಇತಿಹಾಸದಲ್ಲಿ ಯಾವುದೇ ಆಟಗಾರನು ಎರಡು ಗೋಲ್ಡನ್ ಬಾಲ್‌ಗಳನ್ನು ಗೆದ್ದಿಲ್ಲ. ಅರ್ಜೆಂಟೀನಾದ ಸ್ಟಾರ್‌ಗೆ ಕತಾರ್‌ನಲ್ಲಿ ಇದು ಒಲಿದು ಬರಬಹುದು.

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಹೆಚ್ಚಿನ ನಿಮಿಷಗಳು

ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಹೆಚ್ಚಿನ ನಿಮಿಷಗಳು

ಲಿಯೋನೆಲ್ ಮೆಸ್ಸಿ ಈಗಾಗಲೇ ಫಿಫಾ ವಿಶ್ವಕಪ್ ಇತಿಹಾಸದಲ್ಲಿ 2,194 ನಿಮಿಷಗಳ ಕಾಲ ಕಾಣಿಸಿಕೊಂಡಿದ್ದಾರೆ. ಇದಕ್ಕೂ ಮೊದಲು 2,217 ನಿಮಿಷಗಳನ್ನು ಹೊಂದಿರುವ ಪಾವೊಲೊ ಮಾಲ್ದಿನಿ ಅವರ ಹಿಂದೆ ಹಾಕಲು 24 ನಿಮಿಷಗಳು ಮೈದಾನದಲ್ಲಿರಬೇಕಿದೆ.

ಲಿಯೋನೆಲ್ ಮೆಸ್ಸಿ ಈಗಾಗಲೇ ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಗೋಲು ಗಳಿಸಿದ ಮತ್ತು ಸಹಾಯ ಮಾಡಿದ "ಕಿರಿಯ ಮತ್ತು ಹಿರಿಯ' ಆಟಗಾರನಾಗಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.

ಮೆಸ್ಸಿ 2006ರಲ್ಲಿ 18 ವರ್ಷ ಮತ್ತು 357 ದಿನಗಳ ವಯಸ್ಸಿನಲ್ಲಿ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಗೋಲು ಗಳಿಸಿದರು. ಇದೀಗ 35 ವರ್ಷ ಮತ್ತು 168 ದಿನಗಳ ವಯಸ್ಸಿನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೋಲು ಮತ್ತು ಸಹಾಯ ಮಾಡಿದ ಅತ್ಯಂತ ಹಿರಿಯ ಆಟಗಾರರೆನಿಸಿಕೊಂಡರು.

Story first published: Sunday, December 18, 2022, 17:27 [IST]
Other articles published on Dec 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X