ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022: ಅರ್ಜೆಂಟೀನಾ ಸೋಲಿಸಿದ್ದ ಸೌದಿ ಅರೇಬಿಯಾವನ್ನು ಮಣಿಸಿದ ಪೋಲೆಂಡ್

Fifa World Cup 2022: Poland Beat Saudi Arabia By 2-0 Goal

ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ 2022ರಲ್ಲಿ ಅಜೆಂಟೀನಾವನ್ನು ಸೋಲಿಸಿ ಅಚ್ಚರಿಯ ಫಲಿತಾಂಶ ನೀಡಿದ್ದ ಸೌದಿ ಅರೇಬಿಯಾ ಮೊದಲ ಸೋಲು ಅನುಭವಿಸಿದೆ.

ಸೌದಿ ಅರೇಬಿಯಾ ವಿರುದ್ಧ ಪೋಲೆಂಡ್ 2-0 ಗೋಲುಗಳ ಜಯ ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ ದಾರಿಯನ್ನು ಸುಗಮವಾಗಿಸಿಕೊಂಡಿದೆ. ಅರ್ಜೆಂಟೀನಾವನ್ನು ಸೋಲಿಸುವ ಮೂಲಕ ಉತ್ತಮ ಆತ್ಮವಿಶ್ವಾಸದಲ್ಲಿದ್ದ ಸೌದಿ ಅರೇಬಿಯಾ ಎರಡನೇ ಪಂದ್ಯದಲ್ಲಿ ಅದೇ ಆಟ ಪ್ರದರ್ಶಿಸುವಲ್ಲಿ ವಿಫಲವಾಗಿದೆ.

ಪೋಲೆಂಡ್‌ನ ರಾಬರ್ಟ್ ಲೆವಾಂಡೋಸ್ಕಿ ತಮ್ಮ ವೃತ್ತಿಜೀವನದ ಮೊದಲ ವಿಶ್ವಕಪ್ ಗೋಲು ಗಳಿಸಿದರು. ಅರ್ಜೆಂಟೀನಾ ವಿರುದ್ಧದ ಗೆಲುವಿನಿಂದ ಬೀಗುತ್ತಿದ್ದ ಸೌದಿ ಅರೇಬಿಯಾಗೆ ಪೊಲೆಂಡ್ ಶಾಕ್ ನೀಡಿತು. ಪಂದ್ಯದ 39ನೇ ನಿಮಿಷದಲ್ಲಿ ಪಿಯೋಟರ್ ಝಿಲಿನ್ಸ್ಕಿ ಮೊದಲ ಗೋಲು ಬಾರಿಸುವ ಮೂಲಕ ಪೊಲೆಂಡ್‌ಗೆ 1-0 ಮುನ್ನಡೆ ತಂದುಕೊಟ್ಟರು.

ಗೋಲು ಬಾರಿಸಲು ಮತ್ತು ಪೋಲೆಂಡ್ ತಂಡ ಗೋಲು ಬಾರಿಸುವುದನ್ನು ತಡೆಯಲು ಸೌದಿ ಅರೇಬಿಯಾ ಮಾಡಿದ ಪ್ರಯತ್ನವೆಲ್ಲವೂ ವಿಫಲವಾದವು. ಸೌದಿ ಅರೇಬಿಯಾದ ಬಲಿಷ್ಠ ರಕ್ಷಣಾ ಕೋಟೆಯನ್ನು ಛಿದ್ರಗೊಳಿಸುವಲ್ಲಿ ಪೋಲೆಂಡ್ ಯಶಸ್ವಿಯಾಯಿತು.

ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದ ಸ್ಟಾರ್ ಆಲ್‌ರೌಂಡರ್, ಸೂರ್ಯಕುಮಾರ್ ಆಡುವ ಸಾಧ್ಯತೆಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದ ಸ್ಟಾರ್ ಆಲ್‌ರೌಂಡರ್, ಸೂರ್ಯಕುಮಾರ್ ಆಡುವ ಸಾಧ್ಯತೆ

ಸೇಲಂ ಅಲ್-ಡವ್ಸಾರಿ ಅವರ ಪೆನಾಲ್ಟಿಯ ನಂತರ ಪಿಯೋಟರ್ ಝಿಲಿನ್ಸ್ಕಿಯ ಅದ್ಭುತ ಗೋಲು ಮತ್ತು ಗೋಲ್ ಕೀಪರ್ ವೊಜ್ಸಿಕ್ ಸ್ಜೆಸ್ನಿಯವರ ಎರಡು ಅದ್ಭುತ ಸೇವ್‌ ಮುಖಾಂತರ ಪೋಲೆಂಡ್ ಮೊದಲಾರ್ಧದಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತು.

Fifa World Cup 2022: Poland Beat Saudi Arabia By 2-0 Goal

ರಾಬರ್ಟ್ ಲೆವಾಂಡೋಸ್ಕಿ ಗೋಲು

ದ್ವಿತೀಯಾರ್ಧದಲ್ಲಿ ಕೂಡ ಪೋಲೆಂಡ್ ಆಕ್ರಮಣಕಾರಿ ಆಟವನ್ನಾಡಿತು. ಸೌದಿ ಅರೇಬಿಯಾ ಗೋಲು ಗಳಿಸಲು ಮಾಡಿದ ಯತ್ನಗಳೆಲ್ಲವನ್ನೂ ಪೊಲೆಂಡ್ ಆಟಗಾರರು ವಿಫಲಗೊಳಿಸಿದರು. ಸೌದಿ ಅರೇಬಿಯಾ ತಮ್ಮ ಆಕ್ರಮಣಕಾರಿ ಆಟವನ್ನು ಪ್ರದರ್ಶಿಸಲು ಹೆಣಗಾಡಿತು. ಪೋಲೆಂಡ್‌ಗೆ ಮೂರು ಆರಂಭಿಕ ಹಳದಿ ಕಾರ್ಡ್‌ಗಳನ್ನು ತೋರಿಸಲಾಯಿತು.

ಆಟದ 82ನೇ ನಿಮಿಷದಲ್ಲಿ ರಾಬರ್ಟ್ ಲೆವಾಂಡೋಸ್ಕಿ ತಮ್ಮ ವೃತ್ತಿಜೀವನದ ಮೊದಲ ವಿಶ್ವಕಪ್ ಗೋಲು ಗಳಿಸುವ ಮೂಲಕ ಸೌದಿ ಅರೇಬಿಯಾ ತಂಡದ ಸೋಲನ್ನು ಖಚಿತಪಡಿಸಿದರು.

ಮೊದಲನೇ ಪಂದ್ಯದಲ್ಲಿ ಮೆಕ್ಸಿಕೋ ವಿರುದ್ಧ ಡ್ರಾ ಮಾಡಿಕೊಂಡಿದ್ದ ಪೋಲೆಂಡ್ ಎರಡನೇ ಪಂದ್ಯದಲ್ಲಿ ವಿಜಯ ಸಾಧಿಸುವ ಮೂಲಕ 4 ಅಂಕಗಳೊಂದಿಗೆ ಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಪೊಲೆಂಡ್ ಗೆಲುವಿನ ಮೂಲಕ ಅರ್ಜೆಂಟೀನಾದ ಕ್ವಾರ್ಟರ್ ಫೈನಲ್ ಹಾದಿ ಇನ್ನಷ್ಟು ಕಠಿಣವಾಗಲಿದೆ.

ಪೋಲೆಂಡ್ ತನ್ನ ಮುಂದಿನ ಪಂದ್ಯವನ್ನು ಅರ್ಜೆಂಟೀನಾ ವಿರುದ್ಧ ಆಡಬೇಕಿದೆ. ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಮಾಡಿಕೊಂಡರು ಪೊಲೆಂಡ್ ಕ್ವಾರ್ಟರ್ ಫೈನಲ್ ಪ್ರವೇಶಿಸುವುದು ಖಚಿತವಾಗಲಿದೆ.

Story first published: Saturday, November 26, 2022, 23:50 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X