ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

FIFA World Cup 2022 : ಬ್ರೆಜಿಲ್‌ ವಿರುದ್ಧ ಕ್ಯಾಮರೂನ್‌ಗೆ ಐತಿಹಾಸಿಕ ಗೆಲುವು: ಆದರೆ ವಿಶ್ವಕಪ್‌ನಿಂದ ಔಟ್!

FIFA World Cup: Cameroon Defeat Brazil by 1-0, bow out of world cup

ಮೊದಲ ಎರಡು ಪಂದ್ಯಗಳಲ್ಲಿ ಅದ್ಭುತ ಗೆಲುವು ಸಾಧಿಸಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿದ್ದ ಬ್ರೆಜಿಲ್ ತಂಡ ಗ್ರೂಪ್ ಹಂತದ ಅಂತಿಮ ಪಂದ್ಯದಲ್ಲಿ ಆಘಾತ ಅನುಭವಿಸಿದೆ. ಕ್ಯಾಮರೂನ್ ವಿರುದ್ಧ ನಡೆದ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಬ್ರೆಜಿಲ್‌ಗೆ ಚಳ್ಳೆ ಹಣ್ಣು ತಿನ್ನಿಸುವಲ್ಲಿ ಕ್ಯಾಮರೂನ್ ಯಶಸ್ವಿಯಾಗಿದೆ. ಆರಂಭದಿಂದಲೂ ಬ್ರೆಜಿಲ್ ವಿರುದ್ಧ ಬಿಗುವಿನ ಹೋರಾಟ ನಡೆಸಿದ ಕ್ಯಾಮರೂನ್ ಎದುರಾಳಿಗೆ ಒಂದೂ ಗೋಲು ಬಿಟ್ಟುಕೊಡದಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಈ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿತ್ತು.

ಸ್ಟಾರ್ ಆಟಗಾರ ನೇಮಾರ್ ಇಲ್ಲದೆ ಸತತ ಎರಡನೇ ಪಂದ್ಯದಲ್ಲಿ ಬ್ರೆಜಿಲ್ ಕಣಕ್ಕಿಳಿದಿತ್ತು. ಈಗಾಗಲೇ ಲೀಗ್ ಮೊದಲ ಎರಡು ಪಂದ್ಯಗಳನ್ನು ಗೆದ್ದು ನಾಕೌಟ್ ಹಂತವನ್ನು ಪ್ರವೇಶಿಸಿದ್ದ ಬ್ರೆಜಿಲ್ ಬಳಗಕ್ಕೆ ಈ ಪಂದ್ಯ ನಾಕೌಟ್ ಹಂತಕ್ಕೆ ಅಭ್ಯಾಸವೆಂದೇ ಪರಿಗಣಿಸಲಾಗಿತ್ತು. ಆದರೆ ಈ ಮುಖಾಮುಖಿಯಲ್ಲಿ ವಿಶ್ವಕಪ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ದಕ್ಷಿಣ ಅಮೆರಿಕಾದ ರಾಷ್ಟ್ರಕ್ಕೆ ಕ್ಯಾಮರೂನ್ ದೊಡ್ಡ ಆಘಾತವನ್ನು ನೀಡಿದೆ.

FIFA World Cup: ಪೋರ್ಚುಗಲ್ ವಿರುದ್ಧ 2-1 ಅಂತರದ ಜಯ ಸಾಧಿಸಿ 16ರ ಘಟ್ಟಕ್ಕೆ ಪ್ರವೇಶಿಸಿದ ದಕ್ಷಿಣ ಕೊರಿಯಾFIFA World Cup: ಪೋರ್ಚುಗಲ್ ವಿರುದ್ಧ 2-1 ಅಂತರದ ಜಯ ಸಾಧಿಸಿ 16ರ ಘಟ್ಟಕ್ಕೆ ಪ್ರವೇಶಿಸಿದ ದಕ್ಷಿಣ ಕೊರಿಯಾ

ಮೊದಲಾರ್ಧ ಯಾವುದೇ ಗೋಲುಗಳಿಲ್ಲದೆ ಸಾಗಿದ ಈ ಪಂದ್ಯ ತೀವ್ರ ಪೈಪೋಟಿಗೆ ಸಾಕ್ಷಿಯಾಗಿತ್ತು. ದ್ವಿತಿಯಾರ್ಧದಲ್ಲಿಯೂ ಇತ್ತಂಡಗಳ ಪೈಪೋಟಿ ಮುಂದುವರಿದಿತ್ತು. ಆದರೆ ಪಂದ್ಯದ ಅಂತಿಮ ಹಂತದಲ್ಲಿ ಕ್ಯಾಮರೂನ್ ಪರವಾಗಿ ವಿನ್ಸೆಂಟ್ ಅಬೂಬಕರ್ ಹೆಡ್ಡರ್ ಮೂಲಕ ಬ್ರೆಜಿಲ್ ರಕ್ಷಣಾ ವಿಭಾಗವನ್ನು ವಂಚಿಸಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾಯಿತು. ಜೆರೋಮ್ ಎನ್ಗೊಮ್ ಎಂಬೆಕೆಲಿ ಅವರಿಂದ ಪಡೆದ ಚೆಂಡನ್ನು ವಿನ್ಸೆಂಟ್ ಗೋಲ್ ಬಾಕ್ಸ್‌ಗೆ ಸೇರ್ಪಡೆ ಮಾಡುವ ಮೂಲಕ ಬ್ರೆಜಿಲ್ ಪಡೆಗೆ ಆಘಾತ ನೀಡಿದರು.

ಈ ಮೂಲಕ 1-0 ಮುನ್ನಡೆ ಪಡೆದ ಕ್ಯಾಮರೂನ್ ಬಳಿಕ ಬ್ರೆಜಿಲ್ ತಂಡಕ್ಕೆ ಯಾವುದೇ ಅವಕಾಶ ನೀಡಲಿಲ್ಲ. ಹೀಗಾಗಿ ಅಂತಿಮ ಪಂದ್ಯದಲ್ಲಿ ಸ್ಮರಣೀಯ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ ಬ್ರೆಜಿಲ್ ತಂಡವನ್ನು ವಿಶ್ವಕಪ್‌ನಲ್ಲಿ ಮಣಿಸಿದ ಮೊದಲ ಆಫ್ರಿಕನ್ ರಾಷ್ಟ್ರ ಎನಿಸಿಕೊಂಡಿದೆ ಕ್ಯಾಮರೂನ್.

ಇನ್ನು ಈ ರೋಚಕ ಗೆಲುವಿನ ಹೊರತಾಗಿಯೂ ಕ್ಯಾಮರೂನ್ ತಂಡ ಮುಂದಿನ ಹಂತಕ್ಕೇರಲು ವಿಫಲವಾಗಿದೆ. ಗ್ರೂಪ್ 'ಜಿ'ಯ ಮತ್ತೊಂದು ಪಂದ್ಯದಲ್ಲಿ ಸ್ವಿಜರ್ಲೆಂಟ್ ಹಾಗೂ ಸರ್ಬಿಯಾ ತಂಡಗಹಳು ಮುಖಾಮುಖಿಯಾಗಿದ್ದು ಈ ಪಂದ್ಯದಲ್ಲಿ ಸ್ವಿಸ್ ಪಡೆ ಸರ್ಬಿಯಾವನ್ನು 3-2 ಅಂತರದಿಂದ ಮಣಿಸಲು ಯಶಸ್ವಿಯಾಯಿತು. ಹೀಗಾಗಿ ಜಿ ಗುಂಪಿನಲ್ಲಿ ಬ್ರೆಜಿಲ್ ಹಾಗೂ ಸ್ವಿಜರ್ಲೆಂಡ್ ತಲಾ 6 ಅಂಕಗಳೊಂದಿಗೆ ಮೊದಲ ಎರಡು ಸ್ಥಾನವನ್ನು ಪಡೆದುಕೊಂಡರೆ ಕ್ಯಾಮರೂನ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು ಈ ಬಾರಿಯ ವಿಶ್ವಕಪ್‌ನಲ್ಲಿ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ.

ಇನ್ನು ಗ್ರೂಫ್ ಆಫ್ 16 ಹಂತದಲ್ಲಿ ಬ್ರೆಜಿಲ್ ಪಡೆಗೆ ಕೊರಿಯಾ ಎದುರಾಳಿಯಾಗಿ ಸವಾಲೊಡ್ಡಿದರೆ ಸ್ವಿಜರ್ಲೆಂಟ್ ತಂಡ ಪೋರ್ಜುಗಲ್ ತಂಡದ ಸವಾಲನ್ನು ಸ್ವೀಕರಿಸಲಿದೆ. ಮುಂದಿನ ಪ್ರತಿಯಿಂದು ಪಂದ್ಯಗಳು ಕುಡ ರೋಚಕವಾಗಿದ್ದು ಗೆದ್ದ ತಂಡಗಳು ಕ್ವಾರ್ಟರ್‌ಫೈನಲ್ ಹಂತಕ್ಕೇರಲು ತಮ್ಮ ಪ್ರಯತ್ನವನ್ನು ನಡೆಸಲಿದೆ. ಶನಿವಾರದಿಂದಲೇ ಈ ನಾಕೌಟ್ ಪಂದ್ಯಗಳು ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್‌ಗೆ ಯುಎಸ್‌ಎ ಮುಖಾಮುಖಿಯಾಗಲಿದೆ.

ಟೆಸ್ಟ್‌ನಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ ಅಬ್ಬರದ ಬ್ಯಾಟಿಂಗ್: ಮೆಚ್ಚುಗೆ ಸೂಚಿಸಿದ ಪಿಸಿಬಿ ಅಧ್ಯಕ್ಷಟೆಸ್ಟ್‌ನಲ್ಲಿ ಪಾಕ್ ವಿರುದ್ಧ ಇಂಗ್ಲೆಂಡ್ ಅಬ್ಬರದ ಬ್ಯಾಟಿಂಗ್: ಮೆಚ್ಚುಗೆ ಸೂಚಿಸಿದ ಪಿಸಿಬಿ ಅಧ್ಯಕ್ಷ

ಕ್ಯಾಮರೂನ್ XI: ದೇವಿಸ್ ಎಪಾಸಿ, ಕ್ರಿಸ್ಟೋಫರ್ ವೂಹ್, ಕಾಲಿನ್ಸ್ ಫೈ, ಎಂಝೋ ಎಬೋಸ್ಸೆ, ನೌಹೌ ಟೋಲೋ, ಆಂಡ್ರೆ-ಫ್ರಾಂಕ್ ಜಾಂಬೊ ಅಂಗುಯಿಸ್ಸಾ, ಪಿಯರ್ ಕುಂಡೆ, ಬ್ರಿಯಾನ್ ಎಂಬೆಮೊ, ಎರಿಕ್ ಮ್ಯಾಕ್ಸಿಮ್ ಚೌಪೊ-ಮೋಟಿಂಗ್, ವಿನ್ಸೆಂಟ್ ಅಬೌಬಕರ್, ನಿಕೋಲಸ್ ಎನ್‌ಗಮಾಲೆಯ್

ಬ್ರೆಜಿಲ್ XI: ಎಡರ್ಸನ್, ಅಲ್ವೆಸ್, ಮಿಲಿಟಾವೊ, ಬ್ರೆಮರ್, ಟೆಲ್ಲೆಸ್, ಫ್ಯಾಬಿನ್ಹೋ, ಫ್ರೆಡ್, ರೋಡ್ರಿಗೋ, ಮಾರ್ಟಿನೆಲ್ಲಿ, ಜೀಸಸ್, ಆಂಟೋನಿ.

Story first published: Saturday, December 3, 2022, 9:44 [IST]
Other articles published on Dec 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X