ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇದು ಸಾಕ್ಷಿ: ದಾಖಲೆ ಬರೆದ ರೊನಾಲ್ಡೋ ಪ್ರತಿಕ್ರಿಯೆ

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್‌ನಲ್ಲಿ ಪೋರ್ಚುಗಲ್‌ನ ಸ್ಟಾರ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಗುರುವಾರ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಘಾನಾ ವಿರುದ್ಧದ ಪಂದ್ಯದಲ್ಲಿ ಗೋಲು ಗಳಿಸುವ ಮೂಲಕ ರೊನಾಲ್ಡೋ ಐದು ವಿಶ್ವಕಪ್‌ನಲ್ಲಿ ಗೋಲು ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಐತಿಹಾಸಿಕ ದಾಖಲೆ ಬರೆದ ಬಳಿಕ ರೊನಾಲ್ಡೋ ಪ್ರತಿಕ್ರಿಯೆ ನೀಡಿದ್ದು ಈ ದಾಖಲೆಯ ಮೂಲಕ ಯಾವುದೂ ಅಸಾಧ್ಯವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ. ಈ ಮೂಲಕ ದಿಗ್ಗಜ ಆಟಗಾರ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 8ನೇ ಗೋಲು ಬಾರಿಸಿದಂತಾಗಿದೆ.

37ರ ಹರೆಯದ ರೊನಾಲ್ಡೋ ಘಾನಾ ವಿರುದ್ಧದ ಪಂದ್ಯದಲ್ಲಿ 65ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ರೊನಾಲ್ಡೊ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ದಿಗ್ಗಜ ಆಟಗಾರ ಫಿಫಾ ವಿಶ್ವಕಪ್‌ನಲ್ಲಿ ಒಟ್ಟು 8ನೇ ಗೋಲು ಬಾರಿಸಿದಂತಾಗಿದೆ. ರೊನಾಲ್ಡೋ ಹೊರತುಪಡಿಸಿ ಜೋವೊ ಫೆಲಿಕ್ಸ್ ಮತ್ತು ರಾಫೆಲ್ ಲಿಯೊ ಕೂಡ ಪೋರ್ಚುಗಲ್ ಪರವಾಗಿ ಗೋಲ್‌ ಬಾರಿಸಿದರು. ಇತ್ತ ಎದುರಾಳಿ ಘಾನಾ ತಂಡದ ಪರವಾಗಿ ಆಂಡ್ರೆ ಅಯೆವ್ ಮತ್ತು ಓಸ್ಮಾನ್ ಬುಕ್ಕರಿ ಗೋಲು ಗಳಿಸಿದರು. ಹೀಗಾಗಿ ಈ ಪಂದ್ಯದಲ್ಲಿ ಪೋರ್ಚುಗಲ್ 3-2 ಅಂತರದಿಂದ ಗೆಲುವು ಸಾಧಿಸಿದೆ.

ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?ಜಿಂಬಾಬ್ವೆ ವಿರುದ್ಧ ನಾಯಕತ್ವ ಕಿತ್ತುಕೊಂಡು ಕೆಎಲ್ ರಾಹುಲ್‌ಗೆ ನೀಡಿದ್ದಕ್ಕೆ ಶಿಖರ್ ಧವನ್ ಏನೆಂದರು?

ರೊನಾಲ್ಡೊ ತಮ್ಮ ಐತಿಹಾಸಿಕ ಸಾಧನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಇದು ತಾನು ಎಂದಿಗೂ ಕನಸು ಕಾಣದ ಸಾಧನೆಯನ್ನು ಸಾಧಿಸಿದಂತಾಗಿದೆ. ಅಲ್ಲದೆ ಯಾವುದು ಕೂಡ ಅಸಾಧ್ಯವಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಮುಂದುವರಿದು ಅವರು ತಮ್ಮ ದೇಶವನ್ನು ಪ್ರತಿನಿಧಿಸುವ ಬಗೆಗೆ ಇರುವ ಹೆಮ್ಮೆಯನ್ನು ಪ್ರತಿ ಗೋಲು ಗಳಿಸುವಾಗಲೂ ಅನುಭವಿಸುವ ಸಂಬ್ರಮಕ್ಕೆ ಹೋಲಿಸಬಹುದು ಎಂದಿರುವ ರೊನಾಲ್ಡೋ ಈ ಗೆಲುವನ್ನು ಜನತೆಗೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾರೆ. ಇದು ಕೇವಲ ಆರಂಭ ಎಂದು ರೊನಾಲ್ಡೋ ಬರೆದುಕೊಂಡಿದ್ದಾರೆ.

ಘಾನಾ ವಿರುದ್ಧದ ಪಂದ್ಯದಲ್ಲಿ 65ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ರೊನಾಲ್ಡೊ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಐದು ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಪುರುಷ ಆಟಗಾರ ಎನಿಸಿಕೊಂಡರು. ಅಲ್ಲದೆ ಘಾನಾ ವಿರುದ್ಧ ಪೋರ್ಚುಗಲ್‌ಗೆ 1-0 ಮುನ್ನಡೆ ಒದಗಿಸಿದರು.ಆದರೆ ಅದಾದ ಬಳಿಕ 974 ಸ್ಟೇಡಿಯಂನಲ್ಲಿ ಘಾನಾದ ಅಭಿಮಾನಿಗಳ ಬಳಗಕ್ಕೆ ಉತ್ತೇಜನ ನೀಡಲು ಆಂಡ್ರೆ ಅಯೆವ್ 73 ನೇ ನಿಮಿಷದಲ್ಲಿ ಗೋಲು ಬಾರಿಸಿ ಸಮಬಲಕ್ಕೆ ಕಾರಣವಾದರು.

ಚಾಮಿಕಾ ಕರುಣಾರತ್ನೆಗೆ ಒಂದು ವರ್ಷ ಅಮಾನತು ಶಿಕ್ಷೆ ನೀಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿಚಾಮಿಕಾ ಕರುಣಾರತ್ನೆಗೆ ಒಂದು ವರ್ಷ ಅಮಾನತು ಶಿಕ್ಷೆ ನೀಡಿದ ಶ್ರೀಲಂಕಾ ಕ್ರಿಕೆಟ್ ಮಂಡಳಿ

ಅದಾಗಿ ಐದು ನಿಮಿಷಗಳ ಬಳಿಕ ಜೋವೊ ಫೆಲಿಕ್ಸ್ ಗೋಲು ಸಿಡಿಸಿ ಪೋರ್ಚುಗಲ್‌ಗೆ ಮುನ್ನಡೆ ಒದಗಿಸಿದರು. ಅದಾದ ಬಳಿಕ ರೊನಾಲ್ಡೊ ತಮ್ಮಲ್ಲಿನ ಅದ್ಭುತ ಕೌಶಲ್ಯವನ್ನು ಬಳಸಿ ರಾಫೆಲ್ ಲಿಯೊಗೆ ಪಾಸ್ ನೀಡುವ ಮೂಲಕ ಘಾನಾಗೆ ಮತ್ತೊಂದು ಆಘಾತಕ್ಕೆ ಕಾರಣವಾದರು. ಇದಾದ ಬಳಿಕ ಒಸ್ಮಾನ್ ಬುಕಾರಿ ಘಾನಾ ತಂಡಕ್ಕೆ ಎರಡನೇ ಗೋಲು ಗಳಿಸಿದರು ಕೂಡ ಅದಾಗಲೇ ಸಮಯ ಮೀರಿಯಾಗಿತ್ತು. ಈ ಮೂಲಕ ಪೋರ್ಚುಗಲ್ ತಂಡ ಕಳೆದ ನಾಲ್ಕು ವಿಶ್ವಕಪ್‌ಗಳಲ್ಲಿ ಮೊದಲ ಬಾರಿಗೆ ಆರಂಭಿಕ ಪಂದ್ಯದಲ್ಲಿ ಗೆಲುವು ಸಾಧಿಸಿದಂತಾಗಿದೆ.

ಆತ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡಬೇಕೆಂದರೆ ಕೊಡುವಷ್ಟು ಹಣ ನಮ್ಮ ಬಳಿ ಇಲ್ಲ ಎಂದ ಮ್ಯಾಕ್ಸ್‌ವೆಲ್‌ಆತ ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ಆಡಬೇಕೆಂದರೆ ಕೊಡುವಷ್ಟು ಹಣ ನಮ್ಮ ಬಳಿ ಇಲ್ಲ ಎಂದ ಮ್ಯಾಕ್ಸ್‌ವೆಲ್‌

ಪೋರ್ಚುಗಲ್ XI: ಕೋಸ್ಟಾ, ಜೋವೊ ಕ್ಯಾನ್ಸೆಲೊ, ಡ್ಯಾನಿಲೊ, ಡಯಾಸ್, ಗೆರೆರೊ, ನೆವೆಸ್, ಒಟಾವಿಯೊ, ಸಿಲ್ವಾ, ಬ್ರೂನೋ ಫೆರ್ನಾಂಡಿಸ್, ಫೆಲಿಕ್ಸ್, ಕ್ರಿಸ್ಟಿಯಾನೊ ರೊನಾಲ್ಡೊ.
ಘಾನಾ XI: ಝಿಗಿ, ಅಮಾರ್ಟೆ, ಸೀದು, ಜಿಕು, ಸಲಿಸು, ರೆಹಮಾನ್, ಅಬ್ದುಲ್ ಸಮೇದ್, ಪಾರ್ಟಿ, ಕುಡುಸ್, ವಿಲಿಯಮ್ಸ್, ಎ ಆಯೆವ್.

For Quick Alerts
ALLOW NOTIFICATIONS
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS
Story first published: Friday, November 25, 2022, 23:53 [IST]
Other articles published on Nov 25, 2022
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X