ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

Flashback 2022: ಫಿಫಾ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಟಾಪ್ 10 ಆಟಗಾರರು

Flashback 2022: Top 10 Highest Goal Scorers in FIFA World Cup 2022

ಡಿಸೆಂಬರ್ 18ರ ಭಾನುವಾರದಂದು ನಡೆದ 2022ರ ಫಿಫಾ ಫುಟ್ಬಾಲ್ ವಿಶ್ವಕಪ್‌ ಫೈನಲ್‌ನಲ್ಲಿ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಕಳೆದ ಬಾರಿಯ ಚಾಂಪಿಯನ್ ಫ್ರಾನ್ಸ್ ತಂಡವನ್ನು ಪೆನಾಲ್ಟಿಯಲ್ಲಿ 4-2ರಿಂದ ಸೋಲಿಸಿ ನೂತನ ಚಾಂಪಿಯನ್ ಪಟ್ಟ ಅಲಂಕರಿಸಿತು.

ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲರ್ ಲಿಯೋನೆಲ್ ಮೆಸ್ಸಿ ತನ್ನ ವೃತ್ತಿಜೀವನದ ಮೊದಲ ಫಿಫಾ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟರು. ಇದಕ್ಕೂ ಮುನ್ನ ಹೆಚ್ಚುವರಿ ಸಮಯದ ನಂತರ ಫ್ರಾನ್ಸ್‌ನ ಕೈಲಿಯನ್ ಎಂಬಪ್ಪೆ ಅವರ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಪಂದ್ಯವು ಸಮಬಲ ಸಾಧಿಸಿತ್ತು. ನಂತರ ಪೆನಾಲ್ಟಿ ಶೂಟೌಟ್‌ನಲ್ಲಿ 4-2ರಿಂದ ಅರ್ಜೆಂಟೀನಾ ವಿಜಯಶಾಲಿಯಾಯಿತು.

FIFA World Cup 2022: ಸೌದಿ ವಿರುದ್ಧದ ಸೋಲಿನಿಂದ ಟ್ರೋಫಿವರೆಗೆ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಹಾದಿFIFA World Cup 2022: ಸೌದಿ ವಿರುದ್ಧದ ಸೋಲಿನಿಂದ ಟ್ರೋಫಿವರೆಗೆ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಹಾದಿ

ಈ ಬಾರಿಯ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕೈಲಿಯನ್ ಎಂಬಪ್ಪೆ ಮೊದಲ ಸ್ಥಾನದಲ್ಲಿದ್ದರೆ, ಲಿಯೋನೆಲ್ ಮೆಸ್ಸಿ ಎರಡನೇ ಸ್ಥಾನದಲ್ಲಿದ್ದಾರೆ. ಯಾವ ಆಟಗಾರನೂ 9 ಅಥವಾ ಅದಕ್ಕಿಂತ ಹೆಚ್ಚಿನ ಗೋಲು ಗಳಿಸಿಲ್ಲ.

ಕೈಲಿಯನ್ ಎಂಬಪ್ಪೆ ಫಿಫಾ ವಿಶ್ವಕಪ್ 2022ರ ಟಾಪ್ ಗೋಲು ಸ್ಕೋರರ್

ಕೈಲಿಯನ್ ಎಂಬಪ್ಪೆ ಫಿಫಾ ವಿಶ್ವಕಪ್ 2022ರ ಟಾಪ್ ಗೋಲು ಸ್ಕೋರರ್

ಫ್ರಾನ್ಸ್‌ ಯುವ ಆಟಗಾರ ಕೈಲಿಯನ್ ಎಂಬಪ್ಪೆ ಫಿಫಾ ವಿಶ್ವಕಪ್ 2022ರ ಟಾಪ್ ಗೋಲು ಸ್ಕೋರರ್ ಆಗಿದ್ದು, ಫೈನಲ್‌ನಲ್ಲಿ ಅದ್ಭುತ ಪ್ರದರ್ಶನದ ನಂತರ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಕೈಲಿಯನ್ ಎಂಬಪ್ಪೆ ಮತ್ತು ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಇಬ್ಬರೂ ಐದು ಗೋಲುಗಳೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದರು. ಲಿಯೋನೆಲ್ ಮೆಸ್ಸಿ ಎರಡು ಗೋಲುಗಳನ್ನು ಬಾರಿಸಿದ ನಂತರ, ಕೈಲಿಯನ್ ಎಂಬಪ್ಪೆ 1966ರ ನಂತರ ಫೈನಲ್‌ನಲ್ಲಿ ಮೊದಲ ಹ್ಯಾಟ್ರಿಕ್ ಗೋಲು ಗಳಿಸಿ ಗೋಲ್ಡನ್ ಬೂಟ್ ಗೆದ್ದರು.

ಫಿಫಾ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಅತ್ಯಂತ ಪ್ರತಿಷ್ಠಿತ

ಫಿಫಾ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಅತ್ಯಂತ ಪ್ರತಿಷ್ಠಿತ

ಕೈಲಿಯನ್ ಎಂಬಪ್ಪೆ ಪ್ರತಿ ವಿಶ್ವಕಪ್‌ನ ಟಾಪ್ ಸ್ಕೋರರ್‌ಗಳ ಪಟ್ಟಿಯಲ್ಲಿರುತ್ತಾರೆ ಮತ್ತು ವಿಶ್ವಕಪ್‌ನ ಅಗ್ರ ಸಾರ್ವಕಾಲಿಕ ಸ್ಕೋರರ್‌ಗಳ ಪಟ್ಟಿಗೆ ಸೇರಲು ಇನ್ನೂ ಅನೇಕ ವಿಶ್ವಕಪ್ ಆಡಲು ಎದುರು ನೋಡುತ್ತಿದ್ದಾರೆ.

ಗೋಲ್ಡನ್ ಬೂಟ್ ಪ್ರಶಸ್ತಿಯು ಫಿಫಾ ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಅತ್ಯಂತ ಪ್ರತಿಷ್ಠಿತವಾಗಿದೆ ಮತ್ತು ಇದುವರೆಗೆ ಫುಟ್ಬಾಲ್ ಮೈದಾನದಲ್ಲಿ ಆಡಿದ ಕೆಲವು ಶ್ರೇಷ್ಠ ಆಟಗಾರರು ಇದನ್ನು ಗೆದ್ದಿದ್ದಾರೆ.

1930ರಲ್ಲಿ ನಡೆದ ಮೊದಲ ಫಿಪಾ ವಿಶ್ವಕಪ್‌ನಲ್ಲಿ ಉರುಗ್ವೆ ಪ್ರಶಸ್ತಿ ಗೆಲ್ಲಲು ಕಾರಣರಾದ ಗಿಲ್ಲೆರ್ಮೊ ಸ್ಟೆಬೈಲ್ ಮೊದಲ ಬಾರಿಗೆ ಗೋಲ್ಡನ್ ಬೂಟ್ ಸ್ವೀಕರಿಸಿದ್ದರು. ಇತರ ಗಮನಾರ್ಹ ವಿಜೇತರಲ್ಲಿ 1970ರಲ್ಲಿ ಗೆರ್ಡ್ ಮುಲ್ಲರ್, 1990ರಲ್ಲಿ ಇಟಲಿಯ ಸಾಲ್ವಟೋರ್ ಶಿಲಾಸಿ ಮತ್ತು 2010ರಲ್ಲಿ ಥಾಮಸ್ ಮುಲ್ಲರ್ ಗೋಲ್ಡನ್ ಬೂಟ್ ವಿಜೇತರಾಗಿದ್ದಾರೆ.

2022ರ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಟಾಪ್ ಆಟಗಾರರ ಪಟ್ಟಿ

2022ರ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಟಾಪ್ ಆಟಗಾರರ ಪಟ್ಟಿ

1986ರಲ್ಲಿ ಮೆಕ್ಸಿಕೊ ವಿರುದ್ಧ ಇಂಗ್ಲೆಂಡ್‌ ಕ್ವಾರ್ಟರ್-ಫೈನಲ್‌ನಲ್ಲಿ ನಿರ್ಗಮನದ ಹೊರತಾಗಿಯೂ ಗ್ಯಾರಿ ಲಿನೆಕರ್ ಅವರ ಆರು ಗೋಲುಗಳ ಮೂಲಕ ಈ ಹಿಂದೆ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2022ರ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಟಾಪ್ ಆಟಗಾರರ ಪಟ್ಟಿ ಇಲ್ಲಿದೆ.

1) ಕೈಲಿಯನ್ ಎಂಬಪ್ಪೆ (ಫ್ರಾನ್ಸ್) - 8 ಗೋಲುಗಳು

2) ಲಿಯೋನೆಲ್ ಮೆಸ್ಸಿ (ಅರ್ಜೆಂಟೀನಾ) - 7 ಗೋಲುಗಳು

3) ಒಲಿವಿಯರ್ ಗಿರೌಡ್ (ಫ್ರಾನ್ಸ್) - 4 ಗೋಲುಗಳು

4) ಜೂಲಿಯನ್ ಅಲ್ವಾರೆಜ್ (ಅರ್ಜೆಂಟೀನಾ) - 4 ಗೋಲುಗಳು

5) ಎನ್ನರ್ ವೇಲೆನ್ಸಿಯಾ (ಈಕ್ವೆಡಾರ್) - 3 ಗೋಲುಗಳು

6) ಕೋಡಿ ಗಕ್ಪೋ (ನೆದರ್ಲ್ಯಾಂಡ್ಸ್) - 3 ಗೋಲುಗಳು

7) ಮಾರ್ಕಸ್ ರಾಶ್‌ಫೋರ್ಡ್ (ಇಂಗ್ಲೆಂಡ್) - 3 ಗೋಲುಗಳು

8) ಅಲ್ವಾರೊ ಮೊರಾಟಾ (ಸ್ಪೇನ್) - 3 ಗೋಲುಗಳು

9) ರಿಚಾರ್ಲಿಸನ್ (ಬ್ರೆಜಿಲ್) - 3 ಗೋಲುಗಳು

10) ಗೊನ್ಕಾಲೊ ರಾಮೋಸ್ (ಪೋರ್ಚುಗಲ್) - 3 ಗೋಲುಗಳು

11) ಬುಕಾಯೊ ಸಾಕಾ (ಇಂಗ್ಲೆಂಡ್) - 3 ಗೋಲುಗಳು

Story first published: Monday, December 19, 2022, 13:17 [IST]
Other articles published on Dec 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X