ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

2018 ಫೀಫಾ ಬೃಹತ್ ಪ್ರದರ್ಶನ ಪರದೆಗಳಿಗೆ ಫ್ರಾನ್ಸ್ ನಲ್ಲಿ ನಿಷೇಧ

France bans ‘big screen’ zones for tournament over terror fears

ಫ್ರಾನ್ಸ್, ಮೇ 30: ರಷ್ಯಾದಲ್ಲಿ ನಡೆಯಲಿರುವ 2018ರ ಫೀಫಾ ವಿಶ್ವಕಪ್ ಗೆ ಕ್ಷಣಗಣನೆ ನಡೆಯತ್ತಿರುವ ಬೆನ್ನಲ್ಲೇ ಸಾರ್ವಜನಿಕರಿಗೆ ಫುಟ್ಬಾಲ್ ಪಂದ್ಯ ವೀಕ್ಷಿಸಲು ಅನುಕೂಲವಾಗುವಂತೆ ಫ್ರಾನ್ಸ್ ನಲ್ಲಿ ಅಳವಡಿಸಲಿದ್ದ ಬೃಹತ್ ಪ್ರದರ್ಶನ ಪರದೆಗಳಿಗೆ ಫ್ರಾನ್ಸ್ ಸಚಿವಾಲಯ ನಿಷೇಧ ಹೇರಿದೆ. ಇದಕ್ಕೆ ಕಾರಣ ಭಯೋತ್ಪಾದನೆ ಬೆದರಿಕೆ ಎಂದು ಅದು ಹೇಳಿದೆ.

ಸಾರ್ವಜನಿಕ ಸ್ಥಳಗಳಲ್ಲಿ ದಾಳಿ ನಡೆಯುವ ಬಗ್ಗೆ ಭಯೋತ್ಪಾದಕರಿಂದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಹೀಗೆ ಸುರಕ್ಷಾ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಫ್ರಾನ್ಸ್ ಸಚಿವಾಲಯ ತಿಳಿಸಿದೆ. ಹಾಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬೃಹತ್ ಪರದೆಯಲ್ಲಿ ಫೀಫಾ ಪಂದ್ಯಗಳನ್ನು ವೀಕ್ಷಿಸುವ ಫ್ರಾನ್ಸಿಗರ ಆಸೆಗೆ ತಣ್ಣೀರು ಬಿದ್ದಂತಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಫ್ರಾನ್ಸ್ ನಲ್ಲಿ ಹಲವಾರು ಭಯೋತ್ಪಾದನಾ ದಾಳಿಗಳು ನಡೆದಿರುವುದರಿಂದ ಅಲ್ಲಿಸುರಕ್ಷಾ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ.

'ದಾಳಿ ಬೆದರಿಕೆಗಳು ಬರುತ್ತಿರುವ ಈಗಿನ ಪರಿಸ್ಥಿತಿಯಲ್ಲಿ 2016ರ ಯುರೋಪಿಯನ್ ಚಾಂಪಿಯನ್ ಶಿಪ್ ನಲ್ಲಿ ನೀಡಲಾದ ಸುರಕ್ಷಾ ಕ್ರಮಗಳು ಮರುಕಳಿಸಬೇಕಾದ ಅನಿವಾರ್ಯತೆಯಿದೆ. ಆಗ ಕೊಟ್ಟಿದ್ದ ಸುರಕ್ಷಾ ಕ್ರಮಗಳಷ್ಟೇ ವ್ಯವಸ್ಥಿತ ಸುರಕ್ಷೆ ಪಾಲನೆ ಆಗಬೇಕಿದೆ' ಎಂದು ಸಚಿವಾಲಯ ತಿಳಿಸಿದೆ.

ಫ್ರಾನ್ಸ್ ನಲ್ಲಿ ನಡೆದಿದ್ದ ಯೂರೋ 2016 ಫುಟ್ಬಾಲ್ ಚಾಂಪಿಯನ್ ವೇಳೆ ಪಂದ್ಯಗಳು ನಡೆಯುವ ತಾಣಗಳ ಆಯ್ದ ಸಾರ್ವಜನಿಕ ಸ್ಥಳಗಳಲ್ಲಿ 'ಫ್ಯಾನ್ ಜೋನ್ಸ್' ಹೆಸರಲ್ಲಿ ಬೃಹತ್ ಪ್ರದರ್ಶನ ಪರದೆಗಳನ್ನು ಅಳವಡಿಸಿ ಕ್ರೀಡಾಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿತ್ತು. ಆ ಸಂದರ್ಭ ಸುರಕ್ಷಾ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.

ಆದರೆ ಈ ಬಾರಿ ಸುರಕ್ಷತೆಯ ಉದ್ದೇಶದಿಂದ 2018ರ ಫೀಫಾ ವೇಳೆ ಬೃಹತ್ ಪ್ರದರ್ಶನ ಪರದೆಗಳಿಗೆ ನಿಷೇಧ ಹೇರುವತ್ತ ಫ್ರಾನ್ಸ್ ಯೋಚಿಸಿದೆ.

Story first published: Wednesday, May 30, 2018, 17:10 [IST]
Other articles published on May 30, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X