ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಚಾಂಪಿಯನ್ ಲೀಗ್ ಪಂದ್ಯಕ್ಕೂ ಮುನ್ನ ಬಾಂಬ್ ಸ್ಫೋಟ!

ಮೊನಾಕೋ ವಿರುದ್ಧದ ಮೊದಲ ಹಂತದ ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ ಪಂದ್ಯವಾದಲು ತೆರಳುತ್ತಿದ್ದ ಜರ್ಮನಿ ತಂಡ ಬೊರುಸ್ಸಿಯಾ ಡೊರ್ಟ್ ಮಂಡ್ ಆಟಗಾರರಿದ್ದ ಬಸ್ ಬಳಿ ಮೂರು ಸ್ಫೋಟ ಸಂಭವಿಸಿದೆ.

By Mahesh

ಡೊರ್ಟ್ ಮಂಡ್, ಏಪ್ರಿಲ್ 12: ಮೊನಾಕೋ ವಿರುದ್ಧದ ಮೊದಲ ಹಂತದ ಚಾಂಪಿಯನ್ಸ್ ಲೀಗ್ ಕ್ವಾರ್ಟರ್ ಫೈನಲ್ ಪಂದ್ಯವಾದಲು ತೆರಳುತ್ತಿದ್ದ ಜರ್ಮನಿ ತಂಡ ಬೊರುಸ್ಸಿಯಾ ಡೊರ್ಟ್ ಮಂಡ್ ಆಟಗಾರರಿದ್ದ ಬಸ್ ಬಳಿ ಮೂರು ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಸ್ಪೇನ್ ಮೂಲದ ಡಿಫೆಂಡರ್ ಮಾರ್ಕ್ ಬರ್ತಾಗೆ ಗಾಯವಾಗಿದೆ.

ಎಎಸ್ ಮೊನಾಕೋ ವಿರುದ್ಧ ಮಂಗಳವಾರ ನಡೆಯಬೇಕಿದ್ದ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿದೆ ಎಂದು ಯುಇಎಫ್ಎ ಪ್ರಕಟಿಸಿದೆ. ಗಾಯಗೊಂಡಿರುವ ಆಟಗಾರ ಮಾರ್ಕ್ ಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಆಟಗಾರರು ಸ್ಟೇಡಿಯಂಗೆ ತೆರಳುವ ಮುನ್ನ ಮೂರು ಬಾರಿ ಬಾಂಬ್ ಸ್ಫೋಟಿಸಿದೆ. ಆಟಗಾರರಿದ್ದ ಬಸ್ ನ ಗಾಜುಗಳು ಪುಡಿಪುಡಿಯಾಗಿವೆ.

BVB player Mark Bartra


ಆಟಗಾರರೆಲ್ಲ ಸುರಕ್ಷಿತವಾಗಿದ್ದು, ಸಿಗ್ನಲ್ ಇಡುನಾ ಪಾರ್ಕ್ ಸ್ಟೇಡಿಯಂನಲ್ಲಿ ನೆಲೆಸಿದ್ದಾರೆ. ಈ ಘಟನೆಯಿಂದ ಸಹಜವಾಗಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. [ಜರ್ಮನಿ ಕ್ಲಬ್ ಪರ 'ರೆಡ್ ಡೆವಿಲ್ಸ್' ಫ್ಯಾನ್ ಬೋಲ್ಟ್ ಓಟ!]

ಬುಧವಾರದಂದು ಎಎಸ್ ಮೊನಾಕೋ ವಿರುದ್ಧ 1645 GMT ಗೆ ಪಂದ್ಯ ಆರಂಭವಾಗಲಿದೆ. ಟಿಕೆಟ್ ಪಡೆದ ಅಭಿಮಾನಿಗಳು ತಪ್ಪದೇ ಬರಬಹುದು ಎಂದು ಡಾರ್ಟ್ ಮಂಡ್ ತಂಡ ಟ್ವೀಟ್ ಮಾಡಿದೆ.[ಚಾಂಪಿಯನ್ಸ್ ಲೀಗ್ ವೇಳಾಪಟ್ಟಿ: ಬಾರ್ಸಿಲೋನಾ, ಮ್ಯಾಡ್ರಿಡ್ ಪಂದ್ಯ ಯಾವಾಗ]

ಮಾರ್ಕ್ ಬರ್ತ್ರಾ -26 ವರ್ಷ ವಯಸ್ಸಿನ ಡಿಫೆಂಡರ್, 11ವರ್ಷ ವಯಸ್ಸಿನಲ್ಲೇ ಸ್ಪೇನಿನ ಬಾರ್ಸಿಲೋನಾ ಕ್ಲಬ್ ಸೇರಿದ ಆಟಗಾರ. 2016ರಿಂದ 2020ರ ತನಕ ಜರ್ಮನಿ ಬೊರುಸ್ಸಿಯಾ ಡೊರ್ಟ್ ಮಂಡ್ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.

ಚಾಂಪಿಯನ್ಸ್ ಲೀಗ್, ಸ್ಪಾನೀಷ್ ಕಪ್, 5 ಬಾರಿ ಸ್ಪಾನೀಷ್ ಚಾಂಪಿಯನ್ ಶಿಪ್, ಸ್ಪೇನ್ ಅಂತಾರಾಷ್ಟ್ರೀಯ ತಂಡಲ್ಲಿ ಆರು ಬಾರಿ ಆಡುವ ಅವಕಾಶ ಪಡೆದ ಪ್ರತಿಭಾವಂತ ಆಟಗಾರರಾಗಿದ್ದಾರೆ.

Story first published: Wednesday, January 3, 2018, 10:06 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X