ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಫೀಫಾ ವಿಶ್ವಕಪ್ 2018: ಐಸ್ ಲ್ಯಾಂಡೂ ಗೆಲ್ಬೋದು ಬಲ್ಲೋರ್ಯಾರು?

FIFA world cup 2018 : ಐಸ್ ಲ್ಯಾಂಡೂ ಗೆಲ್ಬೋದು ಬಲ್ಲೋರ್ಯಾರು?
Iceland World Cup Fixtures, Squad, Group, Guide

ನವದೆಹಲಿ, ಜೂ. 5: ರಷ್ಯದಲ್ಲಿ ನಡೆಯಲಿರುವ ಪ್ರತಿಷ್ಠಿತ ಫೀಫಾ ವಿಶ್ವಕಪ್ ಪಂದ್ಯಾವಳಿಯತ್ತ ನಡೆಯುತ್ತಿದ್ದೇವೆ. ಈ ಬಾರಿ ಗೆಲ್ಲುವ ತಂಡ ಯಾವುದು ಎನ್ನುವ ಕುತೂಹಲಕ್ಕೆ ಈಗಾಗಲೇ ಕ್ರೀಡಾವಲಯದಲ್ಲಿ ಚಾಲೂ ದೊರೆತಾಗಿದೆ. ಇನ್ನು ಕೊಂಚ ದಿನ ಕಳೆದರೆ ಪಂದ್ಯವನ್ನು ಕಣ್ತುಂಬಿಕೊಳ್ಳಲಿದ್ದೇವೆ.

ಮಹಾನ್ ಫುಟ್ಬಾಲ್ ಹಬ್ಬದಲ್ಲಿ ಸೆಣಸಾಟಕ್ಕೆ ಸಜ್ಜಾಗಿರುವ ವಿಶ್ವದ 32 ತಂಡಗಳಲ್ಲಿ ಐಸ್ ಲ್ಯಾಂಡ್ ಕೂಡ ಒಂದು. ಸದ್ಯದ ಫೀಫಾ ಕೋಕಾ ಕೋಲಾ ವರ್ಲ್ಡ್ ರ್ಯಾಂಕಿಂಗ್ ನಲ್ಲಿ 22ನೇ ಸ್ಥಾನದಲ್ಲಿ ಐಸ್ ಲ್ಯಾಂಡ್ ಇರುವುದರಿಂದ ಸ್ಪರ್ಧೆಗಿಳಿದಿರುವ ತಂಡಗಳಲ್ಲಿ ಐಸ್ ಲ್ಯಾಂಡ್ ಪ್ರಬಲವೆನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು.

ಜಾಗತಿಕ ಫುಟ್ಬಾಲ್ ಸಮರ ಫೀಫಾ ವಿಶ್ವಕಪ್ ವಿಜೇತರ ಪಟ್ಟಿಜಾಗತಿಕ ಫುಟ್ಬಾಲ್ ಸಮರ ಫೀಫಾ ವಿಶ್ವಕಪ್ ವಿಜೇತರ ಪಟ್ಟಿ

ಸ್ಟಾರ್ ಆಟಗಾರ ಗಿಲ್ಫಿ ಸಿಗಾರ್ಡ್ಸನ್ ಮತ್ತು ತರಬೇತುದಾರ ಹೀಮ್ರ್ ಹಾಲ್ಗ್ರಿಮ್ಸನ್ ಮುಂದಾಳತ್ವದ ಐಸ್ ಲ್ಯಾಂಡ್ ತಂಡ ಜೂನ್ 16ರಂದು ಮೊದಲ ಸ್ಪರ್ಧೆಯಾಗಿ ಅರ್ಜೆಂಟೀನಾವನ್ನು ಎದುರುಗೊಳ್ಳಲಿದೆ. ಪ್ರತೀ ಸಾರಿ ರ್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನದಲ್ಲಿರುವ ತಂಡಗಳೇ ಗೆಲ್ಲಬೇಕೆಂದೇನಿಲ್ಲ. ಬಲ್ಲೋರ್ಯಾರು; ಈ ಸಾರಿ ಐಸ್ ಲ್ಯಾಂಡೂ ಗೆಲ್ಲಬಹುದಲ್ಲವೆ?

ಐಸ್ ಲ್ಯಾಂಡ್ ತಂಡದ ಕುರಿತ ಸಂಕ್ಷಿಪ್ತ ಮಾಹಿತಿಗಳಿವು..
ವರ್ಲ್ಡ್ ಕಪ್ ಗ್ರೂಪ್: ಅರ್ಜಂಟೀನಾ, ಕ್ರೊಯೇಷಿಯಾ ಮತ್ತು ನೈಜೀರಿಯಾದೊಂದಿಗೆ ಇರುವ ಐಸ್ ಲ್ಯಾಂಡ್ ಗ್ರೂಪ್ ಡಿ ಯಲ್ಲಿದೆ.
ಆಡಲಿರುವ ಪಂದ್ಯಗಳು: 16 ನೇ ಜೂನ್ - ಅರ್ಜೆಂಟಿನಾ ಎದುರು, 22 ನೇ ಜೂನ್ - ನೈಜೀರಿಯಾ ಎದುರು, 26 ಜೂನ್ - ಕ್ರೊಯೇಷಿಯಾ ಎದುರು.
ಕೋಚ್: ಹೇಮಿರ್ ಹಾಲ್ಗ್ರಿಮ್ಸನ್, ವಯಸ್ಸು 50 (10.06.67)
ಸ್ಟಾರ್ ಆಟಗಾರ: ಗಿಲ್ಫಿ ಸಿಗಾರ್ಡ್ಸನ್.

ಆಟಗಾರರ ವಿವರ
ಗೋಲ್ಕೀಪರ್ಸ್: ಹ್ಯಾನೆಸ್ ಥೋರ್ ಹಾಲ್ಡೋರ್ಸನ್ (ರಾಂಡರ್ಸ್ ಎಫ್ಸಿ), ರನಾರ್ ಅಲೆಕ್ಸ್ ರನಾರ್ಸನ್ (ಎಫ್ಸಿ ನಾರ್ಡ್ಸ್ಜೆಲ್ಲ್ಯಾಂಡ್), ಫ್ರೆಡೆರಿಕ್ ಸ್ಕ್ರಾಮ್ (ಎಫ್ಸಿ ರೋಸ್ಕಿಲ್ಡ್).
ಡೆಫೆಂಡರ್ಸ್: ಕರಿ ಅರ್ನಾಸನ್ (ಅಬರ್ಡೀನ್), ಆರಿ ಫ್ರೈರ್ ಸ್ಕುಲಾಸನ್ (ಕೆ.ಎಸ್.ಸಿ ಲೋಕರೆನ್ ಓಸ್ಟ್-ವಲಾಂಡೆರೆನ್), ಬಿರ್ಕಿರ್ ಮಾರ್ ಸೀಯರ್ಸನ್ಸನ್ (ಹಮ್ಮಾರ್ಬಿ), ಸ್ವೆರ್ರಿರ್ ಇನ್ಗಿ ಇಂಗಾಸನ್ (ಎಫ್ಸಿ ರಾಸ್ಟೊವ್), ಹಾರ್ದೂರ್ ಮ್ಯಾಗ್ನುಸ್ಸನ್ (ಬ್ರಿಸ್ಟಲ್ ಸಿಟಿ), ಹೊಲ್ಮರ್ ಓನ್ ಐಜಾಲ್ಸನ್ (ಮ್ಯಾಕಬಿ ಹೈಫಾ), ರಾಗ್ನರ್ ಸಿಗೂರ್ಸ್ಸನ್ (ಎಫ್ಸಿ ರಾಸ್ಟೊವ್).

ಮಿಡ್ ಫೀಲ್ಡರ್ಸ್: ಜೋಹಾನ್ ಬರ್ಗ್ ಗುಡ್ಮುಂಡ್ಸನ್ (ಬರ್ನ್ಲಿ), ಬರ್ಕಿರ್ ಜಾರ್ಜಾಸನ್ (ಆಸ್ಟನ್ ವಿಲ್ಲಾ), ಅರ್ನರ್ ಇರ್ವಿ ಟ್ರಾಸ್ಟಾಸನ್ (ಮಾಲ್ಮೋ ಎಫ್ಎಫ್), ಎಮಿಲ್ ಹಾಲ್ಫ್ರೆಡ್ಸನ್ (ಉಡಿನೀಸ್), ಗಿಲ್ಫಿ ಸಿಗ್ರಡ್ಸನ್ (ಎವರ್ಟನ್), ಒಲಫೂರ್ ಇನ್ನಿ ಸ್ಕುಲಸನ್ (ಕಾರ್ಡೆಮಿರ್ ಕರಬುಕ್ಸ್ಪೊರ್), ರುರಿಕ್ ಗಿಸ್ಸಾಸನ್ (ಎಫ್ಸಿ ನರ್ನ್ಬರ್ಗ್) , ಸ್ಯಾಮ್ಯುಯೆಲ್ ಫ್ರಿಜ್ಜನ್ಸನ್ (ವಲೆರೆಂಗ), ಅರೋನ್ ಗುನ್ನಾರ್ಸನ್ (ಕಾರ್ಡಿಫ್ ನಗರ).
ಫಾರ್ವರ್ಡ್ಸ್: ಆಲ್ಫ್ರೆಡ್ ಫಿನ್ಬೊಗಸನ್ (ಎಫ್ಸಿ ಆಗ್ಸ್ಬರ್ಗ್), ಜಾರ್ನ್ ಬರ್ಗ್ಮನ್ ಸಿಗುಡರ್ಸನ್ (ಎಫ್ಸಿ ರಾಸ್ಟಾವ್), ಜೋನ್ ಡಾದಿ ಬೊಡ್ವರ್ಸನ್ (ಓದುವಿಕೆ), ಆಲ್ಬರ್ಟ್ ಗುಡ್ಮಂಡ್ಸನ್ (ಪಿಎಸ್ವಿ ಐಂಡ್ಹೋವನ್).

Story first published: Friday, June 8, 2018, 18:12 [IST]
Other articles published on Jun 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X