ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2018: ಮನೆಯಂಗಣದಲ್ಲಿ ಮತ್ತೆ ಕೊಚ್ಚಿ ಹೋದ ಕೊಚ್ಚಿ!

By Isl Media
ISL 2018-19: Pune City beat Kerala Blasters in home

ಕೊಚ್ಚಿ, ಡಿಸೆಂಬರ್ 8: ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಸೋತ ಕೇರಳ ಬ್ಲಾಸ್ಟರ್ಸ್ ತಂಡ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ಹಂತದಿಂದ ಮತ್ತೆ ದೂರವಾಗತೊಡಗಿತು. ಮಾರ್ಸೆಲೋ ಪೆರೇರಾ (20ನೇ ನಿಮಿಷ ) ಗಳಿಸಿದ ಏಕೈಕ ಗೋಲಿನಿಂದ ಪುಣೆ ತಂಡ ಜಯ ಗಳಿಸಿತು.ಆದರೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೆ ಏರಿತು.

ಅಜರುದ್ದೀನ್‌ಗೆ ನಿಷೇಧ ತೆರವಾಗಿದೆ, ನನಗೇಕಿಲ್ಲ?: ಶ್ರೀಶಾಂತ್ ಅಳಲುಅಜರುದ್ದೀನ್‌ಗೆ ನಿಷೇಧ ತೆರವಾಗಿದೆ, ನನಗೇಕಿಲ್ಲ?: ಶ್ರೀಶಾಂತ್ ಅಳಲು

ಮೊದಲ 45 ನಿಮಿಷಗಳ ಆಟದಲ್ಲಿ ಕೇರಳ ಮೇಲುಗೈ ಸಾಧಿಸುವಲ್ಲಿ ವಿಲವಾಯಿತು. ಆತಿಥೇಯ ಪುಣೆ ತಂಡ ಎರಡು ಅವಕಾಶಗಳನ್ನು ಕೈ ಚೆಲ್ಲಿದರೂ 20ನೇ ನಿಮಿಷದಲ್ಲಿ ಮಾರ್ಸೆಲೋ ಪೆರೆರಾ ಗಳಿಸಿದ ಗೋಲಿನಿಂದ ಮುನ್ನಡೆ ಕಂಡಿತು. ಕುರುನಿಯಾನ್ ನೀಡಿದ ಪಾಸ್ ಮೂಲಕ ಈ ಗೋಲು ದಾಖಲಾಗಿತ್ತು.

ಔಟಾಗದೆ ಅಚ್ಚರಿ ರೀತಿಯಲ್ಲಿ ಬಚಾವಾಗಿದ್ದ ಪ್ಯಾಟ್ ಕಮಿನ್ಸ್: ವೈರಲ್ ವಿಡಿಯೋಔಟಾಗದೆ ಅಚ್ಚರಿ ರೀತಿಯಲ್ಲಿ ಬಚಾವಾಗಿದ್ದ ಪ್ಯಾಟ್ ಕಮಿನ್ಸ್: ವೈರಲ್ ವಿಡಿಯೋ

ಮಾರ್ಸೆಲೋ ಹಾಗೂ ಸ್ಟೊಜಾನೊವಿಕ್ ಅವರಿಗೆ ಇದಕ್ಕೂ ಮುನ್ನ ಸುಲಭವಾಗಿ ಸಿಕ್ಕಿದ ಅವಕಾಶದಲ್ಲಿ ಗೋಲು ದಾಖಲಾಗಿರಲಿಲ್ಲ. ಕೇರಳಕ್ಕೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಕೇರಳ ತನ್ನ ಆಟದಲ್ಲಿ ಯಾವುದೇ ಸುಧಾರಣೆ ಕಂಡುಕೊಂಡಿಲ್ಲ. ಪರಿಣಾಮ ಪ್ರವಾಸಿ ತಂಡಕ್ಕೆ ಮುನ್ನಡೆಯ ಅವಕಾಶ ಕಲ್ಪಿಸಿತು.

ಪುಣೆ ಮೇಲು ಗೈ

ಪುಣೆ ಮೇಲು ಗೈ

ಪಂದ್ಯ ಆರಂಭಗೊಂಡ 20ನೇ ನಿಮಿಷದಲ್ಲಿ ಮಾರ್ಸೆಲೋ ಪೆರೆರಾ ಗಳಿಸಿದ ಗೋಲಿನಿಂದ ಪುಣೆ ಸಿಟಿ ಮೇಲುಗೈ ಸಾಧಿಸಿತು. ಆತಿಥೇಯ ಕೇರಳ ತಂಡ ಮತ್ತೊಮ್ಮೆ ಮನೆಯಂಗಣದಲ್ಲಿ ನಡೆದ ಪಂದ್ಯದ ಮೊದಲ 45 ನಿಮಿಷಗಳಲ್ಲಿ ಗೋಲು ಗಳಿಸುವಲ್ಲಿ ವಿಲವಾಯಿತು. ತನಗೆ ಸಿಕ್ಕ ಪಾಸ್ ಅನ್ನು ಆಶಿಕ್ ಕುರುನಿಯಾನ್ ನಿಯಂತ್ರಿಸಿ ಎಡಭಾಗದಲ್ಲಿದ್ದ ಮಾರ್ಸೆಲೋ ಅವರಿಗೆ ನೀಡಿದರು. ಮಾರ್ಸೆಲೋ ಎಡಗಾಲಿನಿಂದ ಚೆಂಡನ್ನು ಗೋಲ್‌ಬಾಕ್ಸ್‌ಗೆ ಗುರಿ ಇಟ್ಟು ತುಳಿದರು. ಅನಾಸ್ ಎಡಥೋಡಿಕಾ ಅವರ ಮುಂಭಾಗದಲ್ಲೇ ಪುಟಿದ ಚೆಂಡು ನೇರವಾಗಿ ಗೋಲ್‌ಬಾಕ್ಸ್ ಸೇರಿತು. ಗೋಲ್‌ಕೀಪರ್‌ಗೆ ಯಾವುದೇ ರೀತಿಯಲ್ಲಿ ಚೆಂಡನ್ನು ತಡೆಯಲಾಗಲಿಲ್ಲ.

ಕೇರಳ ಬ್ಲಾಸ್ಟರ್ಸ್ ಏಳನೇ ಸ್ಥಾನ

ಕೇರಳ ಬ್ಲಾಸ್ಟರ್ಸ್ ಏಳನೇ ಸ್ಥಾನ

ಇಂಡಿಯನ್ ಸೂಪರ್ ಲೀಗ್‌ನ 51ನೇ ಪಂದ್ಯಕ್ಕಾಗಿ ಕೇರಳ ಬ್ಲಾಸ್ಟರ್ಸ್ ಹಾಗೂ ಎಫ್ ಸಿ ಪುಣೆ ಸಿಟಿ ತಂಡಗಳು ಕೊಚ್ಚಿಯಲ್ಲಿ ಮುಖಾಮುಖಿಯಾದವು. ಅಂಕಪಟ್ಟಿಯಲ್ಲಿ ಮಧ್ಯದ ಕೆಳಭಾಗದಲ್ಲಿರುವ ತಂಡಗಳ ಹೋರಾಟ ಇದಾಗಿತ್ತು. ಕೇರಳ ಬ್ಲಾಸ್ಟರ್ಸ್ ಏಳನೇ ಸ್ಥಾನದಲ್ಲಿದ್ದರೆ, ಪುಣೆ ಸಿಟಿ ತಂಡ ಒಂಬತ್ತನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಆಡಿರುವ ಹತ್ತುಪಂದ್ಯಗಳಲ್ಲಿ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ.

ಮನೆಯಂಗಳದಲ್ಲಿ ಗೆದ್ದಿಲ್ಲ

ಮನೆಯಂಗಳದಲ್ಲಿ ಗೆದ್ದಿಲ್ಲ

ಅಂಕಪಟ್ಟಿಯಲ್ಲಿ ಬ್ಲಾಸ್ಟರ್ಸ್ ಪುಣೆಗಿಂತ ಮೇಲಿದ್ದರೂ, ಆರು ಪಂದ್ಯದಲ್ಲಿ ಡ್ರಾಗೊಂಡಿದೆ ಹಾಗೂ ಮೂರು ಪಂದ್ಯಗಳಲ್ಲಿ ಸೋತಿದೆ. ಪುಣೆ ತಂಡ ಎರಡು ಡ್ರಾ ಹಾಗೂ ಏಳು ಸೋಲು ಅನುಭವಿಸಿದೆ. ಮನೆಯಂಗಣದಲ್ಲಿ ಕೊಚ್ಚಿ ತಂಡ ಇದುವರೆಗೂ ಖಾತೆ ತೆರೆಯಲಿಲ್ಲ. ಅಲ್ಲದೆ ಸತತ 9 ಪಂದ್ಯಗಳಲ್ಲಿ ಜಯ ಕಾಣದೆ ಕಂಗಾಲಾಗಿದೆ. ಎದುರಾಳಿ ತಂಡ ಈಗಾಗಲೇ 2-1 ಗೋಲುಗಳನ್ನು ನೀಡಿದೆ. ಕೇರಳ ತಂಡ ಇದುವರೆಗೂ ಪುಣೆ ವಿರುದ್ಧ ಮೇಲುಗೈ ಸಾಧಿಸಿದೆ. 5-1ರಲ್ಲಿ ಕೇರಳ ಮುಂದಿದ್ದರೆ, ಮೂರು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದೆ.

ಕುತೂಹಲದ ಕ್ಷಣಗಳು

ಕುತೂಹಲದ ಕ್ಷಣಗಳು

ಹಿಂದಿನ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಇಂದಿನ ಪಂದ್ಯದ ಬಗ್ಗೆ ಹೇಳುವುದು ಸೂಕ್ತವಲ್ಲ. ಪುಣೆ ತಂಡ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದೆ. ಎರಡೂ ತಂಡಗಳು ಜಯಕ್ಕಾಗಿ ಹಾತೊರೆಯುತ್ತಿರುವಾಗ ಅಲ್ಲಿ ಕುತೂಹಲದ ಕ್ಷಣ ಮನೆಮಾಡುವುದು ಸ್ಪಷ್ಟ.

Story first published: Saturday, December 8, 2018, 16:14 [IST]
Other articles published on Dec 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X