ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್: ಎಟಿಕೆ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಎಫ್‌ಸಿ ಗೋವಾ?

By Isl Media
ISL 2018: ATK, Goa rivalry could get bitter with Lanza in the spotlight

ಕೋಲ್ಕೊತಾ, ನವೆಂಬರ್ 28: ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಕೆಲವು ತಂಡಗಳ ನಡುವಿನ ವೈರತ್ವ ಕುತೂಹಲದಿಂದ ಕೂಡಿದೆ. ದಕ್ಷಿಣದ ಡರ್ಬಿಯಲ್ಲಿ ಬೆಂಗಳೂರು ಹಾಗೂ ಕೇರಳ ಬ್ಲಾಸ್ಟರ್ಸ್ ನಡುವೆ ವೈರತ್ವ ಇದ್ದರೆ ಅದು ಸಹಜ ಎನ್ನಬಹುದು, ಮಹಾರಾಷ್ಟ್ರ ಡರ್ಬಿಯಲ್ಲಿ ಪುಣೆ ಹಾಗೂ ಮುಂಬೈ ತಂಡಗಳ ನಡುವಿನ ಹೋರಾಟ ಸಹಜ. ಆದರೆ ಗೋವಾ ಹಾಗೂ ಕೋಲ್ಕೊತಾ ನಡುವಿನ ಹೋರಾಟದಲ್ಲಿ ವೈರತ್ವ ಇದೆ ಎಂದಾಗ ಅದು ಅಚ್ಚರಿಯಾಗುತ್ತದೆ.

ಪಂದ್ಯದ Live Score ಇಲ್ಲಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022341

ಭಾರತ ಮಣಿಸಲು ಆಸ್ಟ್ರೇಲಿಯಾ ಬೌಲರ್‌ಗಳಿಗೆ ಸ್ಮಿತ್, ವಾರ್ನರ್ ಕೋಚಿಂಗ್?!ಭಾರತ ಮಣಿಸಲು ಆಸ್ಟ್ರೇಲಿಯಾ ಬೌಲರ್‌ಗಳಿಗೆ ಸ್ಮಿತ್, ವಾರ್ನರ್ ಕೋಚಿಂಗ್?!

ಗೋವಾ ಹಾಗೂ ಬಂಗಾಳ ನಡುವೆ ಫುಟ್ಬಾಲ್‌ನಲ್ಲಿ ಐತಿಹಾಸಿಕ ದ್ವೇಷವಿದೆ. 2014ರಲ್ಲಿ ಇಂಡಿಯನ್ ಸೂಪರ್ ಲೀಗ್ ಆರಂಭವಾದಾಗಿನಿಂದ ವೈರತ್ವದಲ್ಲಿ ಹೊಸ ಚಿಗುರು ಕಂಡು ಬಂತು. ಫಾಟೊರ್ಡಾದಲ್ಲಿ ನಡೆದ ಪಂದ್ಯದ ವೇಳೆ ಎಟಿಕೆ ಕೋಚ್ ಅಂಟೋನಿಯೊ ಲೊಪೊಜ್ ಹಬಾಸ್ ಗೋವಾ ತಂಡದ ಕೋಚ್ ರಾಬರ್ಟ್ ಪಿರಸ್ ಅವರನ್ನು ತಳ್ಳಿದಾಗ ಅದು ಹೊಸ ವೈರತ್ವಕ್ಕೆ ನಾಂದಿಯಾಯಿತು. ಅಲ್ಲಿಂದ ಗೋವಾ ಹಾಗೂ ಎಟಿಕೆ ತಂಡಗಳ ನೋಟ ವಿರುದ್ಧವಾಯಿತು. ಈಗ ಅದು ಮತ್ತಷ್ಟು ಕೆಟ್ಟ ಹಂತ ತಲುಪಿರಬಹುದು.

ಐಎಸ್‌ಎಲ್: ಎಫ್‌ಸಿ ಪುಣೆ ವಿರುದ್ಧ ನಾರ್ತ್ ಈಸ್ಟ್ ತಂಡಕ್ಕೆ ಭರ್ಜರಿ ಜಯಐಎಸ್‌ಎಲ್: ಎಫ್‌ಸಿ ಪುಣೆ ವಿರುದ್ಧ ನಾರ್ತ್ ಈಸ್ಟ್ ತಂಡಕ್ಕೆ ಭರ್ಜರಿ ಜಯ

ಸರ್ಗಿಯೋ ಲೊಬೆರಾ ಅವರ ಪಾಲಿಗೆ ಫೇವರಿಟ್ ಎನಿಸದ ಗೋವಾದ ಮಾಜಿ ಸ್ಟಾರ್ ಆಟಗಾರ ಮೆನ್ವೆಲ್ ಲಾನ್ಜರೋಟ್ ಈಗ ಎಟಿಕೆ ತಂಡದಲ್ಲಿದ್ದಾರೆ. ಈ ಇಬ್ಬರೂ ಪರಸ್ಪರ ಮುಖಾಮುಖಿಯಾದಾಗ ಯಾವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದು ಕುತೂಹಲ. ಲಾನ್ಜೆರೋಟ್ ಎಟಿಕೆ ಸೇರಿದ ನಂತರ ಇದೇ ಮೊದಲ ಬಾರಿಗೆ ಇತ್ತಂಡಗಳು ಮುಖಾಮುಖಿಯಾಗುತ್ತಿವೆ.

ಲಾನ್ಜೆರೋಟ್ ಉತ್ತಮ ಆಟ

ಲಾನ್ಜೆರೋಟ್ ಉತ್ತಮ ಆಟ

ಕಳೆದ ಋತುವಿನಲ್ಲಿ ಗೋವಾ ತಂಡದ ಪರ ಲಾನ್ಜೆರೋಟ್ ಉತ್ತಮವಾಗಿ ಆಡಿದ್ದಾರೆ. ಅಲ್ಲದೆ ತಂಡದ ಪ್ರಮುಖ ಆಟಗಾರನಾಗಿ ಮೆರಿದ್ದಾರೆ. ಆಡಿರುವ 19 ಪಂದ್ಯಗಳಲ್ಲಿ 13 ಗೋಲು ಗಳಿಸಿರುವುದಲ್ಲದೆ 6 ಗೋಲು ಗಳಿಸಲು ನೆರವಾಗಿದ್ದಾರೆ. ಆದರೆ 34 ವರ್ಷದ ಆಟಗಾರ ತನ್ನ ಗುತ್ತಿಗೆಯನ್ನು ರದ್ದುಗೊಳಿಸಿ ಎಟಿಕೆ ಸೇರಿಕೊಂಡರು.

ಉತ್ತಮ ಹೊಂದಾಣಿಕೆ

ಉತ್ತಮ ಹೊಂದಾಣಿಕೆ

ಈಗ ಎಟಿಕೆಯಲ್ಲಿರುವ ಸ್ಪೇನ್ ಮೂಲದ ಆಟಗಾರ ಗೋವಾದಲ್ಲಿ ತೋರಿದ ಪ್ರದರ್ಶನವನ್ನು ತೋರುವಲ್ಲಿ ವಿಲರಾಗಿದ್ದಾರೆ. ಕೊರೊಮಿನಾಸ್ ಹಾಗೂ ಲಾನ್ಜೆರೋಟ್ ನಡುವೆ ಉತ್ತಮ ಹೊಂದಾಣಿಕೆ ಇದ್ದ ಕಾರಣ ಗೋವಾ ಗೋಲು ಗಳಿಕೆಯಲ್ಲಿ ಪ್ರಭುತ್ವ ಸಾಧಿಸಿತ್ತು. ಕೊರೊ ಈಗ ಎಂಟು ಗೋಲುಗಳನ್ನು ಗಲಿಸಿರುವುದಲ್ಲದೆ ನಾಲ್ಕು ಗೋಲು ಗಳಿಸಲು ನೆರವಾಗಿದ್ದಾರೆ.

ಅದ್ಭುತ ಆಟಗಾರ

ಅದ್ಭುತ ಆಟಗಾರ

'ಇತರ ಕ್ಲಬ್‌ಗಳಿಂದ ಸಾಕಷ್ಟು ಬೇಡಿಕೆ ಬಂದಿದ್ದರೂ ನಾವು ಕೊರೊ ಅವರನ್ನು ಉಳಿಸಿಕೊಂಡಿರುವುದಕ್ಕೆ ಅದೃಷ್ಟವಂತರು. ಅವರೊಬ್ಬ ಅದ್ಭುತ ಆಟಗಾರ. ಅಂಗಣದಲ್ಲಿ ಅವರು ತೋರಿರುವ ಸಾಧನೆ ಇತರ ಆಟಗಾರರಿಗೆ ಸ್ಫೂರ್ತಿಯಾಗಿದೆ' ಎಂದು ಲೊಬೆರಾ ಹೇಳಿದ್ದಾರೆ.

ಸಾಕಷ್ಟು ಬದಲಾವಣೆಗೆ ಮುಂದಾಗಿದೆ

ಸಾಕಷ್ಟು ಬದಲಾವಣೆಗೆ ಮುಂದಾಗಿದೆ

ಕಳೆದ ವಾರ ಬೆಂಗಳೂರು ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸೋಲನುಭವಿಸಿದ ನಂತರ ಗೋವಾ ತಂಡ ಸಾಕಷ್ಟು ಬದಲಾವಣೆಗೆ ಮುಂದಾಗಿದೆ. ಇದು ಗೋವಾ ಅನುಭವಿಸಿದ ಎರಡನೇ ಸೋಲಾಗಿದೆ. ಎದುರಾಳಿ ತಂಡಕ್ಕೆ ಗೋವಾ ಇದುವರೆಗೂ 14 ಗೋಲುಗಳನ್ನು ನೀಡಿದೆ. ಇದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಡೆಲ್ಲಿ ತಂಡದಷ್ಟೇ ಆಗಿದೆ.

Story first published: Wednesday, November 28, 2018, 0:36 [IST]
Other articles published on Nov 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X