ಐಎಸ್‌ಎಲ್‌: ಎಟಿಕೆ-ಗೋವಾ ರೋಚಕ ಕಾದಾಟ ಡ್ರಾದೊಂದಿಗೆ ಅಂತ್ಯ

By Isl Media

ಕೋಲ್ಕತ್ತಾ, ನವೆಂಬರ್ 29: ಇಂಡಿಯನ್ ಸೂಪರ್ ಲೀಗ್ ನ 42ನೇ ಪಂದ್ಯ ಗೋಲಿಲ್ಲದೆ ಡ್ರಾದಲ್ಲಿ ಕೊನೆಗೊಂಡಿತು. ಎಟಿಕೆ ಹಾಗೂ ಗೋವಾ ತಂಡಗಳ ನಡುವೆ ನಡೆದ ಪಂದ್ಯ ಗೋಲಿಲ್ಲದೆ ಸಮಬಲದಲ್ಲಿ ಕೊನೆಗೊಂಡ ಕಾರಣ ಅಂಕಪಟ್ಟಿಯಲ್ಲಿ ಗೋವಾ ಒಂದು ಅಂಕ ಗಳಿಸಿ ಎರಡನೇ ಸ್ಥಾನ ತಲುಪಿತು. ಎಟಿಕೆ ಆರನೇ ಸ್ಥಾನದಲ್ಲೇ ಉಳಿಯಿತು. ಗೋವಾ ತಂಡ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸಿತ್ತು. ಆದರೆ ಎಟಿಕೆಯ ಆಕ್ರಮಣಕಾರಿ ಆಟ ಹಾಗೂ ಡಿಫೆನ್ಸ್ ವಿಭಾಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಎದುರಾಳಿಗೆ ಗೋಲು ಗಳಿಸುವ ಅವಕಾಶ ನೀಡಲಿಲ್ಲ. ಇಲ್ಲಿ ಎಟಿಕೆಗೆ ಜಯದ ಅಗತ್ಯ ಇದ್ದಿತ್ತು.

ಪ್ರೊ ಕಬಡ್ಡಿ: ತೆಲುಗು ಟೈಟಾನ್ಸ್ ಎದುರು ರೋಚಕ ಪಂದ್ಯ ಗೆದ್ದ ಬೆಂಗಳೂರು

ಗೋವಾ ಹಾಗೂ ಕೋಲ್ಕೊತಾ ತಂಡಗಳ ನಡುವೆ ಬೂದಿ ಮುಚ್ಚಿದ ಕೆಂಡದಂಥ ದ್ವೇಷವಿದೆ. ಅದು ವೈಯಕ್ತಿಕವಾಗಿಲ್ಲ. ಬದಲಾಗಿ ಅಂಗಣದಲ್ಲಿ ಕಾಣುವ ಆವೇಶ. ಕೆಲವೊಮ್ಮೆ ಅದು ವೈಯಕ್ತಿಕವಾಗಿ ಬದಲಾಗುತ್ತದೆ. ಯುವ ಭಾರತೀ ಕ್ರೀಡಾಂಗಣದಲ್ಲಿ ಗೋವಾ ಪ್ರಥಮಾರ್ಧದಲ್ಲಿ ಗೋಲು ಗಳಿಸುತ್ತದೆ ಎಂಬ ನಿರೀಕ್ಷೆ ಇದ್ದಿತ್ತು. ಆದರೆ ಹಾಗಾಗಲಿಲ್ಲ. ಕೊರೊಮಿನಾಸ್ ಗರಿಷ್ಠ ಗೋಲು ಗಳಿಸಿರುವ ಆಟಗಾರರಾಗಿದ್ದರೂ ಎಟಿಕೆ ವಿರುದ್ಧ ಅವರ ಆಟ ನಡೆಯಲಿಲ್ಲ.

ಅವಕಾಶಗಳು ಇತ್ತಂಡಗಳಿಗೆ ಸಮಾನವಾಗಿ ಸಿಕ್ಕಿದ್ದರೂ ಗೋಲು ಗಳಿಸುವ ಉತ್ಕಟತೆ ಕಂಡುಬರಲಿಲ್ಲ. ಗೋವಾ ಆಕ್ರಮಣಕಾರಿ ಆಟವನ್ನೇ ಮುಂದುವರಿಸಿದರೂ ಎಟಿಕೆ ತನ್ನ ಹೊಂದಾಣಿಕೆಯ ಆಟದಲ್ಲೇ ನಿಯಂತ್ರಣ ಸಾಧಿಸಿತ್ತು. ಈಗಾಗಲೇ ಮೂವರು ಆಟಗಾರರಿಗೆ ರೆಡ್ ಕಾರ್ಡ್ ತೋರಿಸಿ ಅಂಗಣದಿಂದ ಹೊರಗಟ್ಟಿರುವ ರೆರಿ ಇಲ್ಲಿ ತಾಳ್ಮೆ ವಹಿಸಿರುವುದು ಸ್ಪಷ್ಟವಾಗಿತ್ತು.

ಗೋವಾ ಹಾಗೂ ಬಂಗಾಳ ನಡುವೆ ಫುಟ್ಬಾಲ್‌ನಲ್ಲಿ ಐತಿಹಾಸಿಕ ದ್ವೇಷವಿದೆ. 2014ರಲ್ಲಿ ಇಂಡಿಯನ್ ಸೂಪರ್ ಲೀಗ್ ಆರಂಭವಾದಾಗಿನಿಂದ ವೈರತ್ವದಲ್ಲಿ ಹೊಸ ಚಿಗುರು ಕಂಡು ಬಂತು. ಫಾಟೊರ್ಡಾದಲ್ಲಿ ನಡೆದ ಪಂದ್ಯದ ವೇಳೆ ಎಟಿಕೆ ಕೋಚ್ ಅಂಟೋನಿಯೊ ಲೊಪೊಜ್ ಹಬಾಸ್ ಗೋವಾ ತಂಡದ ಕೋಚ್ ರಾಬರ್ಟ್ ಪಿರಸ್ ಅವರನ್ನು ತಳ್ಳಿದಾಗ ಅದು ಹೊಸ ವೈರತ್ವಕ್ಕೆ ನಾಂದಿಯಾಯಿತು. ಅಲ್ಲಿಂದ ಗೋವಾ ಹಾಗೂ ಎಟಿಕೆ ತಂಡಗಳ ನೋಟ ವಿರುದ್ಧವಾಯಿತು. ಈಗ ಅದು ಮತ್ತಷ್ಟು ಕೆಟ್ಟ ಹಂತ ತಲುಪಿರಬಹುದು ಎಂಬ ಆತಂಕ ಇದ್ದಿತ್ತು. ಆದರೆ ಹಾಗೆ ಆಗಲಿಲ್ಲ.

ಇಂಡಿಯನ್ ಸೂಪರ್ ಲೀಗ್‌ನ 42ನೇ ಪಂದ್ಯದಲ್ಲಿ ಕೆಳ ಹಂತದಲ್ಲಿರುವ ಎಟಿಕೆ ಹಾಗೂ ಅಗ್ರ ಸ್ಥಾನದಲ್ಲಿರುವ ಗೋವಾ ತಂಡಗಳು ಮುಖಾಮುಖಿಯಾದವು. ಇದುವರೆಗೂ ಇತ್ತಂಡಗಳು 10 ಬಾರಿ ಮುಖಾಮುಖಿಯಾಗಿವೆ. ಎಟಿಕೆ 3 ಹಾಗೂ ಗೋವಾ 1 ಪಂದ್ಯವನ್ನು ಗೆದ್ದಿದ್ದರೆ, 6 ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.

ಗೋವಾ ವಿರುದ್ಧ ಕೇರಳ ತಂಡ ಈ ಹಿಂದಿನ ಮುಖಾಮುಖಿಯಲ್ಲಿ ಪ್ರಭುತ್ವ ಸಾಧಿಸಿರಬಹುದು, ಆದರೆ ಗೋವಾ ತಂಡ ಹಿಂದಿನಂತಿಲ್ಲ. ಎಂಟು ಗೋಲು ಗಳಿಸಿರುವ ಕೊರೊಮಿನಾಸ್ ಅವರು ಗೋವಾ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅಂಕಪಟ್ಟಿಯಲ್ಲೂ ಗೋವಾ ಮೂರನೇ ಸ್ಥಾನದಲ್ಲಿದ್ದರೆ, ಎಟಿಕೆ ಆರನೇ ಸ್ಥಾನದಲ್ಲಿದೆ. ಸ್ಟೀವ್ ಕೊಪ್ಪೆಲ್ ತಂಡದ ಕೋಚ್ ಆದಾಗಿನಿಂದ ಎಟಿಕೆ ಸುಧಾರಣೆಯ ಹೆಜ್ಜೆಯನ್ನಿಟ್ಟಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, November 29, 2018, 0:19 [IST]
Other articles published on Nov 29, 2018
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X