ಸುನಿಲ್ ಪನೆಂಕಾ ಕಿಕ್ ಗೆ ಪುಣೆಯೂ ಫಿದಾ, ಫೈನಲ್ ಗೆ ಬೆಂಗಳೂರು

Posted By:
ISL 2018, Bengaluru FC vs FC Pune City: Sunil Chhetri books final with hat-trick involving a panenka

ಬೆಂಗಳೂರು, ಮಾರ್ಚ್ 11: ಶ್ರೇಷ್ಠ ಆಟಗಾರರು ಹಾಗೆ, ಮಾಡು ಇಲ್ಲವೇ ಮಡಿ ಎಂಬ ಪಂದ್ಯಗಳಲ್ಲಿ ನಿರೀಕ್ಷೆ ಮೀರಿ ಪ್ರದರ್ಶನ ನೀಡುತ್ತಾರೆ. ಅದರಲ್ಲೂ ತಮ್ಮ ಬತ್ತಳಿಕೆಯಿಂದ ಯಾವಾಗ ಬಾಣ ಹೊರ ಬಿಡುತ್ತಾರೆ ಹೇಳಲು ಬರುವುದಿಲ್ಲ.

ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ ಸಿ) ನಾಯಕ ಸುನೀಲ್ ಛೆಟ್ರಿ ಕೂಡಾ ಈ ಹೊಗಳಿಕೆಯಿಂದ ಹೊರತಾಗಿಲ್ಲ. ಪುಣೆ ವಿರುದ್ಧದ ಮಹತ್ವದ ಪಂದ್ಯದಲ್ಲಿ ಪನೆಂಕಾ ಪೆನಾಲ್ಟಿ ಕಿಕ್ ತೆಗೆದುಕೊಂಡು ಎಲ್ಲರಲ್ಲೂ ಅಚ್ಚರಿಗೆ ದೂಡಿದರು. ಬೆಂಗಳೂರು ಎಫ್ ಸಿ 3-1 ಅಂತರದಲ್ಲಿ ಎಫ್ ಸಿ ಪುಣೆ ಸಿಟಿಯನ್ನು ಬಗ್ಗು ಬಡಿದು ಐಎಸ್ಎಲ್ ಫೈನಲ್ ಗೇರಿತು.

ಮಾರ್ಚ್ 17ರಂದು ಶ್ರೀಕಂಠೀರವ ಸ್ಟೇಡಿಯಂನಲ್ಲಿ ತವರು ನೆಲದ ಅಭಿಮಾನಿಗಳ ಸಮ್ಮುಖದಲ್ಲಿ ಚೆನ್ನೈಯಿನ್ ಎಫ್ ಸಿ ಅಥವಾ ಎಫ್ ಸಿ ಗೋವಾ ವಿರುದ್ಧ ಸೆಣಸಲಿದೆ.

ಹ್ಯಾಟ್ರಿಕ್ ಗೋಲು ಸೇರಿದಂತೆ ಐಎಸ್ ಎಲ್ ಸೀಸನ್ ನಲ್ಲಿ ಸುನೀಲ್ 13 ಗೋಲು ಬಾರಿಸಿದ್ದಾರೆ.

ಫಲಿತಾಂಶ: ಬೆಂಗಳೂರು ಎಫ್ ಸಿ 3(ಸುನೀಲ್ ಛೆಟ್ರಿ 15, 65 ಪೆನಾಲ್ಟಿ, 89) ಗೆಲುವು, ಎಫ್ ಸಿ ಪುಣೆ ಸಿಟಿ 1 (ಜೊನಾಥನ್ ಲುಕಾ 82)

ಏನಿದು ಪನೆಂಕಾ ಕಿಕ್: ಪೆನಾಲ್ಟಿ ಕಿಕ್ ತೆಗೆದುಕೊಳ್ಳುವಾಗ ಹೇಗೆ ಬೇಕಾದರೂ ಓಡಿ ಬರಬಹುದು, ಆದರೆ, ಕಿಕ್ ಮಾತ್ರ ಒಂದೇ ಸಲ ಒದೆಯಬೇಕು. ಸಾಮಾನ್ಯವಾಗಿ ಗೋಲ್ ಪೋಸ್ಟ್ ನ ಎಡಗಡೆ ಅಥವಾ ಬಲಗಡೆಗೆ ಚೆಂಡನ್ನು ಕಿಕ್ ಮಾಡಿ ಗೋಲ್ ಕೀಪರ್ ವಂಚಿಸಿ ಗೋಲು ಗಳಿಸುವುದು ಮಾಮೂಲಿ.

ಆದರೆ, ನೇರವಾಗಿ ಚೆಂಡನ್ನು ಚಿಮ್ಮಿಸಿ, ಚೆಂಡು ಒಂದು ಬಾರಿ ಪುಟಿದೇಳುವ ಮುನ್ನವೇ ಗೋಲು ಪೋಸ್ಟ್ ಸೇರುತ್ತದೆ. ಈ ರೀತಿಯ ಪೆನಾಲ್ಟಿಯನ್ನು ಮೊದಲಿಗೆ 1976ರಲ್ಲಿ ಜೆಕ್ ದೇಶದ ಮಿಡ್ ಫೀಲ್ಡರ್ ಅಂಟೋನಿನ್ ಪೆನೆಂಕಾ ಅವರು ಈ ತಂತ್ರ ಬಳಸಿದರು. ಹೀಗಾಗಿ, ಈ ರೀತಿ ಕಿಕ್ ಗೆ ಪೆನಂಕಾ ಪೆನಾಲ್ಟಿ ಕಿಕ್ ಎಂಬ ಹೆಸರು ಬಂದಿದೆ.

Story first published: Monday, March 12, 2018, 0:02 [IST]
Other articles published on Mar 12, 2018
Read in English:
+ ಇನ್ನಷ್ಟು
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ