ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್ 2018: ಪ್ರತಿಯೊಂದು ಪಂದ್ಯವೂ ಫೈನಲ್, ಜೆಎಫ್ಸಿ ಕೋಚ್

ISL 2018 : Every game is a final, says JFC coach ahead of Kerala clash

ಜೆಮ್ಷೆಡ್ಪುರ, ಅಕ್ಟೋಬರ್ 28: ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಸೋಮವಾರ ನಡೆಯುವ ಪಂದ್ಯದಲ್ಲಿ ಇದುವರೆಗೂ ಸೋಲು ಕಾಣದ ಜೆಮ್ಷೆಡ್ಪುರ ಎಫ್ ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಸೋಲರಿಯದ ತಂಡಗಳಿಗೆ ಇಲ್ಲಿ ಜಯದ ಹುಡುಕಾಟವಿದೆ. ಮುಂಬೈ ತಂಡದ ವಿರುದ್ಧ ಜಯ ಗಳಿಸಿದ ನಂತರ ಜೆಮ್ಷೆಡ್ಪುರ ಸತತ ಮೂರು ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ. ಎಟಿಕೆ ವಿರುದ್ಧ ಜಯ ಗಳಿಸಿದ ನಂತರ ಕೇರಳ ತಂಡ ಸತತ ಎರಡು ಪಂದ್ಯಗಳಲ್ಲಿ ಡ್ರಾ ಕಂಡಿದೆ.

ಐಎಸ್‌ಎಲ್ 2018: ಡೆಲ್ಲಿ ವಿರುದ್ಧ ಗೆದ್ದು ಸೋಲಿನ ಕಹಿ ಮರೆತ ಮುಂಬೈ ಐಎಸ್‌ಎಲ್ 2018: ಡೆಲ್ಲಿ ವಿರುದ್ಧ ಗೆದ್ದು ಸೋಲಿನ ಕಹಿ ಮರೆತ ಮುಂಬೈ

ಚೆಂಡನ್ನು ಹೆಚ್ಚು ನಿಯಂತ್ರಿಸುವ ಆಟವನ್ನೇ ನೆಚ್ಚಿಕೊಂಡಿರುವ ಜೆಮ್ಷೆಡ್ಪುರ ತಂಡ ಪಂದ್ಯದ ಮೇಲೆ ಹೆಚ್ಚು ಹಿಡಿತ ಸಾಧಿಸಿರುವುದು ಸ್ಪಷ್ಟ. ಆದರೆ ಗೋಲ್ ಬಾಕ್ಸ್‌ಗೆ ಗುರಿ ಇಟ್ಟು ಹೊಡೆಯುವ ನಿಖರತೆಯಲ್ಲಿ ಹಿಂದೆ ಬಿದ್ದ ಕಾರಣ ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಟಾಟಾ ಪಡೆ ವಿಲವಾಗಿದೆ.

ISL 2018 : Every game is a final, says JFC coach ahead of Kerala clash

ನಾಲ್ಕು ವಿಶ್ವಕಪ್ ಪಂದ್ಯಗಳನ್ನಾಡಿರುವ ಆಸ್ಟ್ರೇಲಿಯಾ ಮೂಲದ ಆಟಗಾರ ಟಿಮ್ ಕಾಹಿಲ್ ಇನ್ನೂ ಆಟಕ್ಕೆ ಹೊಂದಿಕೊಳ್ಳದಿರುವುದು ಕೋಚ್ ಸೇಸರ್ ಫೆರಾಂಡೋ ಅವರಿಗೆ ತಲೆನೋವಾಗಿದೆ. ಫಾರ್ವರ್ಡ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಈ ಆಟಗಾರನಿಂದ ನಾಳೆಯ ಪಂದ್ಯದಲ್ಲಿ ಸಾಕಷ್ಟು ನೆರವಾಗಬಹುದು ಎಂದು ಟಾಟಾ ಪಡೆಯ ನಿರೀಕ್ಷೆ.

ತಿರಿ ಅವರು ಬ್ಯಾಕ್‌ಲೈನ್‌ನಲ್ಲಿ ಬಲಿಷ್ಠರಾಗಿರುವುದು ಜೆಮ್ಷೆಡ್ಪುರ ತಂಡ ನೆಮ್ಮದಿಯಲ್ಲಿ ಇರುವಂತೆ ಮಾಡಿದೆ. ಮಿಡ್‌ಫೀಲ್ಡ್ ವಿಭಾಗದಲ್ಲಿ ಮಾರಿಯೋ ಅಕ್ವೆಸ್ ಹಾಗೂ ಮೆಮೊ ಕೇರಳ ಬ್ಲಾಸ್ಟರ್ಸ್ ಪಡೆಯನ್ನು ನಿಯಂತ್ರಿಸಲಿದ್ದಾರೆ.

ISL 2018 : Every game is a final, says JFC coach ahead of Kerala clash

ಇದು ಫೆರಾಂಡೊ ಪಡೆಯ ನೈಜ ಶಕ್ತಿ. ಯುವ ಆಟಗಾರ ಮೊಬಾಶಿರ್ ರೆಹಮಾನ್ ಇನ್ನೂ ಗಾಯದಿಂದ ಚೇತರಿಸಿಕೊಳ್ಳದಿರುವುದು ಫೆರಾಂಡೋ ಅವರಿಗೆ ಬದಲಿ ಆಟಗಾರರನ್ನೇ ಅವಲಂಬಿಸಬೇಕಾಗಿದೆ.

'ಅಂತಾರಾಷ್ಟ್ರೀಯ ಲೀಗ್‌ನಲ್ಲಿ 34 ಪಂದ್ಯಗಳಿರುತ್ತದೆ. ಆದರೆ ಇಲ್ಲಿ 18 ಪಂದ್ಯಗಳಿವೆ. ಆದ್ದರಿಂದ ಪ್ರತಿಯೊಂದು ಪಂದ್ಯವೂ ಫೈನಲ್ ಇದ್ದಂತೆ. ನನ್ನ ಪಾಲಿಗೆ ನಾಳೆಯ ಪಂದ್ಯ ಫೈನಲ್ ಇದ್ದಂತೆ,' ಎಂದು ಫೆರಾಂಡೋ ಹೇಳಿದ್ದಾರೆ.

ಐಎಸ್‌ಎಲ್‌: ಸೊರಗಿದ ಮುಂಬೈ ಸಿಟಿ ಎಫ್‌ಸಿಗೆ ಡೆಲ್ಲಿ ಡೈನಮೋಸ್ ಸವಾಲು ಐಎಸ್‌ಎಲ್‌: ಸೊರಗಿದ ಮುಂಬೈ ಸಿಟಿ ಎಫ್‌ಸಿಗೆ ಡೆಲ್ಲಿ ಡೈನಮೋಸ್ ಸವಾಲು

ಕೇರಳ ಬ್ಲಾಸ್ಟರ್ಸ್ ತಂಡ ಇದುವರೆಗೂ ಆಡಿದ್ದು ಕೇವಲ ಮೂರು ಪಂದ್ಯಗಳು. ಎಟಿಕೆ ವಿರುದ್ಧ 2-0 ಅಂತರದಲ್ಲಿ ಗೆದ್ದ ನಂತರ ತಂಡ ಇದುವರೆಗೂ ಪರಿಣಾಮಕಾರಿ ಆಡಿಲ್ಲ. ಸೋಮವಾರ ನಡೆಯುವ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತನ್ನ ನೈಜ ಸಾಮರ್ಥ್ಯ ತೋರಬೇಕಾಗಿದೆ. ಸ್ಟ್ರೈಕರ್‌ಗಳು ಹೆಚ್ಚು ಗೋಲುಗಳನ್ನು ಗಳಿಸಬೇಕು. 90 ನಿಮಿಷಗಳ ಕಾಲ ತಂಡ ಪಂದ್ಯದ ಮೇಲೆ ಏಕಾಗೃತೆ ವಹಿಸಬೇಕಿದೆ ಎಂದು ಕೋಚ್ ಡೇವಿಡ್ ಜೇಮ್ಸ್ ಹೇಳಿದ್ದಾರೆ.

ISL 2018 : Every game is a final, says JFC coach ahead of Kerala clash

ಇಂಗ್ಲೆಂಡ್ ಮೂಲದ ಕೋಚ್ ಈ ಬಾರಿ ವಿದೇಶಿ ಆಟಗಾರರ ಸಂಪೂರ್ಣ ಬಲವನ್ನು ಪ್ರಯೋಗಿಸಿಲ್ಲ. ಯುವ ಆಟಗಾರರಾದ ಮೊಹಮ್ಮದ್ ರಾಕಿಪ್ ಹಾಗೂ ಸಹಲ್ ಅಬ್ದುಲ್ ಸಮದ್ ಅವರಂಥ ಆಟಗಾರರಿಗೆ ಹೆಚ್ಚು ಅವಕಾಶ ಕಲ್ಪಿಸಿದ್ದಾರೆ. ಜೆಮ್ಷೆಡ್ಪುರ ವಿರುದ್ಧವೂ ಅದೇ ರೀತಿಯ ತಂಡವನ್ನು ಮುನ್ನಡೆಸುವ ಯೋಜನೆ ಹಾಕಿಕೊಂಡಿದ್ದಾರೆ.

ಮೂರು ಪಂದ್ಯಗಳಿಗೆ ಅಮಾನುತುಗೊಂಡಿರರುವ ಎಡಾತೋಡಿಕಾ ಅನಾಸ್ ಅವರು ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ. 'ಅನಾ ಅವರು ನನ್ನೊಂದಿಕೆ ಪಕ್ಕದಲ್ಲಿ ಕುಳಿತಿರುತ್ತಿದ್ದರು. ತಂಡದ ಆಯ್ಕೆಯ ವಿಚಾರ ಪಂದಾಗ ಇದು ಸಾಕಷ್ಟು ಯೋಚನೆ ಮಾಡುವಂತೆ ಮಾಡುತ್ತಿತ್ತು.

ISL 2018 : Every game is a final, says JFC coach ahead of Kerala clash

ಇಡೀ ತಂಡವೇ ಅತ್ಯಂತ ಸ್ಪರ್ಧಾತ್ಮಕ ಆಟಗಾರರಿಂದ ಕೂಡಿದಾಗ ಇಂಥ ಸಮಸ್ಯೆಗಳು ಸಾಮಾನ್ಯವಾಗಿರುತ್ತದೆ. ಇದು ಕೋಚ್ ಆದವನ ಸಮಸ್ಯೆಯಾಗಿರುತ್ತದೆ. ಪ್ರತಿಯೊಬ್ಬರಿಗೂ ತಂಡದಲ್ಲಿ ಆಡುವ ಹಂಬಲ ಇದ್ದೇ ಇರುತ್ತದೆ,' ಎಂದು ಜೆಮ್ಸ್ ಹೇಳಿದ್ದಾರೆ.

Story first published: Sunday, October 28, 2018, 20:41 [IST]
Other articles published on Oct 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X