ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ Live Score: ಎಫ್‌ಸಿ ಗೋವಾ-ನಾರ್ತ್ ಈಸ್ಟ್ ಮುಖಾಮುಖಿ

By Isl Media
ISL 2018: Goa vs NorthEast United live streaming

ಗೋವಾ ಡಿಸೆಂಬರ್ 14: ಗೋವಾ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳು ಶುಕ್ರವಾರ (ಡಿಸೆಂಬರ್ 14) ಗೋವಾದಲ್ಲಿ ಮುಖಾಮುಖಿಯಾಗುವುದರೊಂದಿರೆ ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಗೋಲ್ಡನ್ ಬೂಟ್ ಗೌರವಕ್ಕಾಗಿ ಹೋರಾಟ ನಡೆಯಲಿದೆ. ಗೋವಾದ ಫೆರಾನ್ ಕೊರೊಮಿನಾಸ್ ಎಂಟು ಗೋಲುಗಳನ್ನು ಗಳಿಸಿರುವುದಲ್ಲದೆ ಐದು ಗೋಲುಗಳಿಕೆಯಲ್ಲಿ ನೆರವಾಗಿದ್ದಾರೆ. ಅದೇ ರೀತಿ ನಾರ್ತ್ ಈಸ್ಟ್ ಯುನೈಟೆಡ್‌ನ ಬಾರ್ತಲೋಮ್ಯೊ ಒಗ್ಬಚೆ ಕೂಡ ಎಂಟು ಗೋಲುಗಳನ್ನು ಗಳಿಸಿ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿದ್ದಾರೆ.

ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022356

'ಕೋರೊ ಅವರು ಅತ್ಯಂತ ಪ್ರಮುಖ ಆಟಗಾರರು. ಅವರು ಕೇವಲ ಎಂಟು ಗೋಲುಗಳನ್ನು ಗಳಿಸಿದ ಕಾರಣಕ್ಕೆ ಮಾತ್ರ ಪ್ರಮುಖರಲ್ಲ, ಬದಲಾಗಿ ಐದು ಗೋಲುಗಳನ್ನು ಗಳಿಸುವಲ್ಲಿಯೂ ನೆರವಾಗಿದ್ದಾರೆ. ಲೀಗ್‌ನಲ್ಲಿ ಎಷ್ಟು ಆಟಗಾರರು ಎಷ್ಟು ಗೋಲುಗಳನ್ನು ಗಳಿಸಿದ್ದಾರೆ ಹಾಗೂ ಎಷ್ಟು ಗೋಲುಗಳಿಗೆ ನೆರವಾಗಿದ್ದಾರೆ ಎಂಬುದನ್ನು ಗಮನಿಸಿದಾಗ ಕೋರೊ ಪ್ರಮುಖರಾಗುತ್ತಾರೆ. ಈ ರೀತಿಯಲ್ಲಿ ತಂಡಕ್ಕೆ ನೆರವಾದರು ಬಹಳ ವಿರಳ,' ಎಂದು ಗೋವಾ ತಂಡದ ಕೋಚ್ ಸರ್ಗಿಯೊ ಲೊಬೆರಾ ಹೇಳಿದ್ದಾರೆ.

ವಿಶೇಷವೆಂದರೆ ಈ ಇಬ್ಬರೂ ಆಟಗಾರರು ತಾವು ಆಡಿರುವ ಹಿಂದಿನ ಮೂರು ಪಂದ್ಯಗಳಲ್ಲಿ ಗೋಲು ಗಳಿಸಿರಲಿಲ್ಲ. ಇದು ಆಯಾ ತಂಡಗಳ ಮೇಲೆ ಪರಿಣಾಮ ಬೀರಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ಗೋವಾ ಹಾಗೂ ನಾರ್ತ್ ಈಸ್ಟ್ ತಂಡಗಳು ಜಯ ಗಳಿಸುವಲ್ಲಿ ವಿಫಲವಾಗಿವೆ.

'ಪ್ರಮುಖ ಅಂಶವೆಂದರೆ ನಾವು ಕೆಲವು ಪಂದ್ಯಗಳಲ್ಲಿ ಗೋಲು ಗಳಿಸುತ್ತಿರಲಿಲ್ಲ. ನಾವು ಮಾಡಿರುವ ತಪ್ಪಗಳನ್ನು ತಿದ್ದಿಕೊಂಡು ಪಾಠ ಕಲಿಯಬೇಕಾಗಿದೆ. ಇದು ನಮ್ಮ ಉಳಿದ ಪಂದ್ಯಗಳಿಗೆ ಒಂದು ರೀತಿಯಲ್ಲಿ ಪಾಠ ವಿದ್ದಂತೆ,' ಎಂದು ಗೋವಾದ ಕೋಚ್ ಹೇಳಿದ್ದಾರೆ.

ಇದರ ನಡುವೆ 22 ಗೋಲುಗಳನ್ನು ಗಳಿಸಿರುವ ಗೋವಾ ತಂಡ ಐಎಸ್‌ಎಲ್‌ನಲ್ಲಿ ಅತಿ ಹೆಚ್ಚು ಗೋಲುಗಳಿಸಿರುವ ತಂಡವೆನಿಸಿದೆ. ನಾರ್ತ್ ಈಸ್ಟ್ ತಂಡ ಗೋಲು ಗಳಿಕೆಯಲ್ಲಿ ಗೋವಾಕ್ಕಿಂತ ಹಿಂದೆ ಇರಬಹುದು, ಆದರೆ ಕೇವಲ ಆರು ಗೋಲುಗಳ ಹಿಂದೆ ಇದೆ.

ಅಂಕ ಕಳೆದುಕೊಂಡಿರುವ ನಾಲ್ಕು ಪಂದ್ಯಗಳಲ್ಲಿ ಗೋವಾ ತಂಡವನ್ನು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಮೊದಲು ಎದುರಾಳಿ ತಂಡಕ್ಕೆ ಗೋಲು ನೀಡಿ ನಂತರ ಗೋಲಿಗಾಗಿ ಪರದಾಡಿದ್ದು. ಬಳಿಕ ಸಮಬಲ ಸಾಧಿಸಲು ಹೆಣಗಾಡಿದ್ದು. ಈ ಗೊಂದಲದಿಂದ ಹೊರ ಬಂದು ತಂಡ ಜಯದ ಹಾದಿ ಕಂಡುಕೊಳ್ಳಬೇಕಾಗಿದೆ.

Story first published: Friday, December 14, 2018, 19:26 [IST]
Other articles published on Dec 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X