ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌: ಪುಟಿದೇಳುವ ಉತ್ಸಾಹದಲ್ಲಿ ನಾರ್ತ್ ಈಸ್ಟ್ ಯುನೈಟೆಡ್ ಎಫ್‌ಸಿ

By Isl Media
ISL 2018: Hope floats for revitalised NorthEast United

ಮುಂಬೈ, ನವೆಂಬರ್ 14: ನಾರ್ತ್ ಈಸ್ಟ್ ಯುನೈಟೆಡ್ ತಂಡ ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಉತ್ತಮ ಆರಂಭ ಕಂಡಿದೆ. ಆದರೆ ತಂಡದ ಎಲ್ಲ ಅಭಿಮಾನಿಗಳು ಖುಷಿಯಾಗಿಲ್ಲ. ಏಕೆಂದರೆ ಈ ತಂಡ ಇನ್ನೂ ಪ್ಲೇ ಆಫ್ ಹಂತಕ್ಕೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಈ ಹಿಂದಿನ ನಾಲ್ಕು ಋತುವಿನಲ್ಲೂ ತಂಡ ಪ್ಲೇ ಆಫ್ ಹಂತ ತಲುಪಿಲ್ಲ. ಆದರೆ ಈ ಬಾರಿ ಉತ್ತಮ ಆರಂಭ ಕಂಡ ಹಿನ್ನೆಲೆಯಲ್ಲಿ ಪ್ಲೇ ಆಫ್ ಹಂತ ತಲುಪುವ ಉತ್ಸಾಹದಲ್ಲಿದೆ.

ಬೌಲಿಂಗ್ ವೇಳೆ ರಕ್ತವಾಂತಿ: ಕ್ರಿಕೆಟ್‌ಗೆ ವಿದಾಯ ಹೇಳಿದ ಜಾನ್ ಹೇಸ್ಟಿಂಗ್ಸ್ಬೌಲಿಂಗ್ ವೇಳೆ ರಕ್ತವಾಂತಿ: ಕ್ರಿಕೆಟ್‌ಗೆ ವಿದಾಯ ಹೇಳಿದ ಜಾನ್ ಹೇಸ್ಟಿಂಗ್ಸ್

ಈಗಾಗಲೇ ಲೀಗ್‌ನಲ್ಲಿ ನಾಲ್ಕು ಪಂದ್ಯವನ್ನಾಡಿರುವ ತಂಡ ಈ ಹಿಂದಿನ ಬಾರಿಗಿಂತ ಉತ್ತಮ ಪ್ರದರ್ಶನ ತೋರಿದೆ. ಹಿಂದಿನ ಸೋಲಿನ ಭೂತ ತಂಡವನ್ನು ಇದುವರೆಗೂ ಆವರಿಸಿಲ್ಲ. ಕ್ಲಬ್ ಈಗ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಒಂದು ಪಂದ್ಯ ಉಳಿದಿದ್ದು, ಅಗ್ರ ಸ್ಥಾನದಲ್ಲಿರುವ ಗೋವಾಕ್ಕಿಂತ ಐದು ಅಂಕ ಹಿಂದೆ ಬಿದ್ದಿದೆ.

ಇದೀಗ ಅಧಿಕೃತ, ಐಪಿಎಲ್ ನಲ್ಲಿ ಕೆಕೆಆರ್ ತಂಡದಿಂದ ಸ್ಟಾರ್ಕ್ ಬಿಡುಗಡೆಇದೀಗ ಅಧಿಕೃತ, ಐಪಿಎಲ್ ನಲ್ಲಿ ಕೆಕೆಆರ್ ತಂಡದಿಂದ ಸ್ಟಾರ್ಕ್ ಬಿಡುಗಡೆ

ಅಭಿಮಾನಿಗಳು ಈ ಹಿಂದೆಯೂ ಇದೇ ರೀತಿಯ ಪರಿಸ್ಥಿತಿಯನ್ನು ನೋಡಿದ್ದಾರೆ. 2016ರಲ್ಲಿ ಗೋಲ್ ಗಳಿಸುವ ತಜ್ಞ ಎಮಿಲಿಯಾನೋ ಅಲ್ಫಾರೋ ಅವರ ಮುಂದಾಳತ್ವದಲ್ಲಿ ತಂಡ ಐದು ಪಂದ್ಯಗಳನ್ನು ಮುಗಿಸಿದಾಗ ಹತ್ತು ಅಂಕ ಗಳಿಸಿತ್ತು. ಆದರೆ ನತಂರದ ನಾಲ್ಕು ಪಂದ್ಯಗಳಲ್ಲಿ ಸತತ ಸೋಲನುಭವಿಸಿ ಅಂಕ ಪಟ್ಟಿಯಲ್ಲಿ ಹಿಂದೆ ಬಿದ್ದಿತು. ಉತ್ತಮ ಸ್ಥಿತಿಯಲ್ಲಿದ್ದರೂ ಕೇರಳ ತಂಡದ ವಿರುದ್ಧದ ಸೋಲು ತಂಡವನ್ನು ಎರಡು ಅಂಕಗಳಿಂದ ಹಿಂದೆ ಬೀಳುವಂತೆ ಮಾಡಿತು. ಇದೇ ವೇಳೆ ಎಟಿಕೆ ತಂಡ ಮುನ್ನಡೆ ಕಂಡು ಆ ವರ್ಷ ಚಾಂಪಿಯನ್ ಪಟ್ಟ ಗೆದ್ದಿತು.

ಅಂಕದಲ್ಲಿ ಸಾಕಷ್ಟು ವ್ಯತ್ಯಾಸ

ಅಂಕದಲ್ಲಿ ಸಾಕಷ್ಟು ವ್ಯತ್ಯಾಸ

ಈ ಬಾರಿ ಅಂಕದಲ್ಲಿ ಸಾಕಷ್ಟು ವ್ಯತ್ಯಾಸ ಇರುವುದು ನಿಜ. ಎಲ್ಕೊ ಷಟೋರಿ ಅವರ ಪ್ರಭಾವ ತಂಡದ ಮೇಲೆ ಉತ್ತಮ ರೀತಿಯ ಪರಿಣಾಮ ಬೀರಿದೆ. ಜಾನ್ ಅಬ್ರಾಂ ಸಹ ಮಾಲೀಕತ್ವದ ತಂಡ ಈ ಬಾರಿ ನೀರಿಗಿಳಿದ ಬಾತುಕೋಳಿಯಂತೆ ನಿರಂತರ ಈಜುತ್ತಿದೆ. ಇದುವರೆಗೂ ನೆಲ ಕಂಡಿಲ್ಲ. ‘ನಾವು ಈ ಹಂತದಲ್ಲಿ ಇರುತ್ತೇವೆ ಎಂದು ಯಾರೂ ಊಹಿಸಿರಲಿಲ್ಲ. ನನ್ನ ನಿರ್ವಹಣೆಯಲ್ಲಿ ತಂಡ ಉತ್ತಮ ಸ್ಥಿತಿಯಲ್ಲಿದೆ. ಕ್ಲಬ್, ಸಿಬ್ಬಂದಿ ಹಾಗೂ ಆಟಗಾರರು ಈಗಿರುವ ಹಂತದ ಬಗ್ಗೆ ಖುಷಿಯಾಗಿದ್ದಾರೆ. ಆದರೂ ಇದೊಂದು ಸುದೀರ್ಘ ಹಾದಿ. ನಮ್ಮ ಹೋರಾಟ ಮುಂದುವರಿಸಬೇಕಾಗಿದೆ,‘ ಎಂದು ಷಟೋರಿ ಹೇಳಿದ್ದಾರೆ.

ಉತ್ತಮ ಸ್ಥಿತಿಗೆ ಒಗ್ಬಚೆ ಕಾರಣ

ಉತ್ತಮ ಸ್ಥಿತಿಗೆ ಒಗ್ಬಚೆ ಕಾರಣ

ಪರ್ವತಪ್ರದೇಶದ ತಂಡ ಅಂಕಪಟ್ಟಿಯಲ್ಲಿ ಉತ್ತಮ ಸ್ಥಿತಿ ಕಾಯ್ದುಕೊಳ್ಳಲು ಬಾರ್ತಲೋಮ್ಯೊ ಒಗ್ಬಚೆ ಅವರ ಯಶಸ್ಸು ಪ್ರಮುಖ ಕಾರಣವಾಗಿದೆ. ಅತಿ ಹೆಚ್ಚು ಗೋಲು ಗಳಿಕೆಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. 34 ವರ್ಷದ ಆಟಗಾರ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ತಂಡ ಗಳಿಸಿರುವ 10 ಗೋಲುಗಳಲ್ಲಿ ಆರು ಗೋಲುಗಳನ್ನು ಒಗ್ಬಚೆ ಒಬ್ಬರೇ ಗಳಿಸಿದ್ದಾರೆ. ತಂಡ ಗಳಿಸಿರುವ ಶೇ. 60 ಭಾಗದಷ್ಟು ಗೋಲುಗಳನ್ನು ಒಗ್ಬಚೆ ಗಳಿಸಿದ್ದಾರೆ. ನೈಜೀರಿಯಾದ ಆಟಗಾರ ಒಗ್ಬಚೆ ಮುಂದಿನ ಪಂದ್ಯಗಳಲ್ಲಿ ಅಚಿಲ್ಲೆ ಅವರ ಹೆಜ್ಜೆಯಲ್ಲೇ ಅನುಸರಿಸಿಲಿದ್ದಾರೆ.

ಶಿಸ್ತಿನ ತಂಡ

ಶಿಸ್ತಿನ ತಂಡ

ಅಂಗಣದಲ್ಲಿ ಅತ್ಯಂತ ಶಿಸ್ತಿನಿಂದ ಆಡುವ ತಂಡ ನಾರ್ತ್‌ಈಸ್ಟ್ ಯುನೈಟೆಡ್. ತಂಡದ ಡಿಫೆನ್ಸ್ ವಿಭಾಗ ಉತ್ತಮವಾಗಿದೆ. ಇದುವರೆಗೂ ಎದುರಾಳಿ ತಂಡಕ್ಕೆ ಕೇವಲ ಏಳು ಗೋಲುಗಳನ್ನು ನೀಡಿವೆ. ಬೆಂಗಳೂರು ತಂಡ ಬಿಟ್ಟರೆ ಕಡಿಮೆ ಗೋಲು ನೀಡಿರುವ ತಂಡ ಎಂಬ ಹೆಗ್ಗಳಿಕೆಗೆ ಪಾತ್ರಲವಾಗಿದೆ. ಅತ್ಯಂತ ಜಾಣ್ಮೆಯಿಂದ ಆಟಗಾರರನ್ನು ಬದಲಾಯಿಸುತ್ತಿರುವುದು ಷಟೋರಿ ಅವರ ತರಬೇತಿಯ ತಂತ್ರವಾಗಿದೆ. ಇದು ಯಶಸ್ಸು ತಂದುಕೊಟ್ಟಿದೆ. ಡಿೆನ್ಸ್ ವಿಭಾಗದ ಮೇಲೆ ಹೆಚ್ಚು ನಿಗಾ ವಹಿಸಿ ಅದು ಸಮರ್ಪಕರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಅವರು ನೋಡಿಕೊಂಡಿದ್ದಾರೆ.

ಚಾಲಾಕಿ ಆಟ ಮುಖ್ಯ

ಚಾಲಾಕಿ ಆಟ ಮುಖ್ಯ

ಐಎಸ್‌ಎಲ್‌ನಲ್ಲಿ ತಂಡಗಳು ಆಗಾಗ ಬದಲಾವಣೆಗಳನ್ನು ಮಾಡಿ ಎದುರಾಳಿ ತಂಡದ ನ್ಯೂನ್ಯತೆಯನ್ನು ಅರಿತು ಲಿತಾಂಶದ ಮೇಲೆ ಹೆಚ್ಚಿನ ಪರಿಣಾಮವಾಗುವಂತೆ ಮಾಡುತ್ತವೆ. ನಾರ್ತ್ ಈಸ್ಟ್ ತಂಡ 4-2-3-1 ಹಾಗೂ 4-4-2 ಯೋಜನೆಯೊಂದಿಗೆ ಆಟವನ್ನು ಮುಂದುವರಿಸುತ್ತಿದೆ. ಹಾಲಿ ಚಾಂಪಿಯನ್ ಚೆನ್ನೆಯಿನ್ ತಂಡದ ವಿರುದ್ಧ 4-3 ಗೋಲಿನಿಂದ ಗೆದ್ದಿರುವುದು ನಾರ್ತ್ ಈಸ್ಟ್ ಯುನೈಟೆಡ್‌ನ ರಣತಂತ್ರಕ್ಕೆ ಉತ್ತಮ ಉದಾಹರಣೆಯಾಗಿದೆ. ಮುಂದಿನ ಕೆಲವು ಪಂದ್ಯಗಳು ನಾರ್ತ್ ಈಸ್ಟ್ ಯುನೈಟೆಡ್ ಅಭಿಮಾನಿಗಳಿಗೆ ಸ್ಪಷ್ಟ ಚಿತ್ರಣ ನೀಡಲಿದೆ. ಇದುವರೆಗೂ ಯಶಸ್ಸಿಗಾಗಿ ಕಾದು ಕುಳಿತವರಿಗೆ ಕೊನೆಗೊಂದು ಸಂಭ್ರಮಕ್ಕೆ ಅವಕಾಶ ಸಿಗದಿರದು.

Story first published: Wednesday, November 14, 2018, 17:19 [IST]
Other articles published on Nov 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X