ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ Live: ಬೆಂಗಳೂರು-ನಾರ್ತ್ ಈಸ್ಟ್ ಯುನೈಟೆಡ್ ಉಗ್ರ ಹೋರಾಟ

By Isl Media
ISL 2018: NEUFC, Bengaluru in top of the table clash

ಗುವಾಹಟಿ, ಡಿಸೆಂಬರ್ 5: ಬೆಂಗಳೂರು ಎಫ್‌ಸಿ ತಂಡ ಲೀಗ್‌ನಲ್ಲಿ ಇದುವರೆಗೂ ಉತ್ತಮ ತಂಡವಾಗಿ ಮೂಡಿ ಬಂದಿದೆ. ಆಡಿರುವ ಎಂಟು ಪಂದ್ಯಗಳಲ್ಲಿ ಬೆಂಗಳೂರು ಅಜೇಯವಾಗಿ ಉಳಿಸಿದೆ. ಏಳು ಪಂದ್ಯಗಳಲ್ಲಿ ಜಯ ಗಳಿಸಿದೆ. ಸತತ ಆರು ಪಂದ್ಯಗಳಲ್ಲಿ ನಿರಂತರ ಜಯ ಕಂಡಿದೆ. ಆದರೆ ಇನ್ನು ಮುಂದೆ ಲೀಗ್‌ನಲ್ಲಿ ತನಗಂತಿ ಬಲಿಷ್ಠ ತಂಡಗಳೊಂದಿಗೆ ಹೋರಾಡುವ ಹಂತ ತಲುಪಿದೆ. ಅವುಗಳಲ್ಲಿ ಒಂದು ನಾರ್ತ್ ಈಸ್ಟ್ ಯುನೈಟೆಡ್ ತಂಡ. ಇಲ್ಲಿನ ಇಂದಿರಾ ಗಾಂಧಿ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಬುಧವಾರ (ಡಿಸೆಂಬರ್ 5) ಇತ್ತಂಡಗಳು ಕುತೂಹಲದ ಪಂದ್ಯಕ್ಕೆ ಮುಖಾಮುಖಿಯಾಗಲಿವೆ.

ಪಂದ್ಯದ Live Score ಕೆಳಗಿದೆ. ಸ್ಕೋರ್ ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
1022348

ಬೆಂಗಳೂರು ತಂಡದ ಅಜೇಯ ಓಟಕ್ಕೆ ಬ್ರೇಕ್ ಹಾಕಲು ನಾರ್ತ್ ಈಸ್ಟ್ ತಂಡದ ಕೋಚ್ ಎಲ್ಕೋ ಷಟೋರಿ ಉತ್ಸುಕರಾಗಿದ್ದಾರೆ. ಆತಿಥೇಯ ತಂಡ ಮನೆಯಂಗಣದಲ್ಲಿ ಮಿಶ್ರಫಲ ಕಂಡಿದೆ. ಮನೆಯಂಗಣದಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಗೆದ್ದಿರುವುದು ಒಂದು ಮಾತ್ರ. ಆದರೆ ಬುಧವಾರದ ಪಂದ್ಯದಲ್ಲಿ ನಾರ್ತ್ ಈಸ್ಟ್ ತಂಡ ಬೆಂಗಳೂರಿನ ಓಟಕ್ಕೆ ತಡೆಯೊಡ್ಡಲಿದೆ ಎಂದು ಷಟೋರಿ ಅತ್ಯಂತ ಆತ್ಮವಿಶ್ವಾಸದಲ್ಲಿ ಹೇಳಿದ್ದಾರೆ. ಆದರೆ ನಿರಂತರ ಪಂದ್ಯಗಳು ಇರುವುದರಿಂದ ನಾರ್ತ್ ಈಸ್ಟ್ ತಂಡಕ್ಕೆ ಇದು ಸುಲಭ ಸಾಧ್ಯವಾದುದಲ್ಲ.

'ವೇಳಾಪಟ್ಟಿಯನ್ನು ಗಮನಿಸಿದರೆ ಬೆಂಗಳೂರು ತಂಡಕ್ಕೆ ಇಲ್ಲಿ ಹೆಚ್ಚು ಲಾಭವಾಗಿದೆ. ಆದರೆ ಅವರ ಉತ್ತಮ ಆಟಗಾರ ಮಿಕು ಅವರು ಅಲಭ್ಯವಾಗಿದ್ದಾರೆ. ಇದು ತಂಡಕ್ಕೆ ಹಿನ್ನಡೆಯ ವಿಚಾರ. ಆದರೆ ಅವರು ಮಿಕು ಇಲ್ಲದೆಯೂ ಪಂದ್ಯ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಬಾರ್ತಲೋಮ್ಯೊ ಒಗ್ಬಚೆ ಅವರೊಂದಿಗೆ ಗೋಲ್ಡನ್ ಬೂಟ್ ಸ್ಪರ್ಧೆಯಲ್ಲಿ ಮಿಕು ಕೂಡ ಇದ್ದಾರೆ' ಎಂದು ಷಟೋರಿ ಹೇಳಿದ್ದಾರೆ.
ಬೆಂಗಳೂರು ತಂಡದ ಡಿಮಾಸ್ ಡೆಲ್ಗಾಡೋ ಹಾಗೂ ಎಲಿಕ್ ಪಾರ್ತಲು ಅವರಿಗೆ ಮಿಡ್‌ಫೀಲ್ಡ್‌ನಲ್ಲಿ ಸವಾಲೊಡ್ಡಲು ಜೋಸ್ ಲ್ಯೂಡೋ ಹಾಗೂ ರೌಲಿಂಗ್ ಬೋರ್ಗಸ್ ಸಜ್ಜಾಗಿದ್ದಾರೆ.

ಮನೆಯಂಗಣದ ಹೊರಗಡೆ ನಡೆದ ಪಂದ್ಯದಲ್ಲಿ ಬೆಂಗಳೂರು ಆಡಿರುವ ನಾಲ್ಕು ಪಂದ್ಯಗಳಲ್ಲಿ ನಾಲ್ಕರಲ್ಲೂ ಜಯ ಗಳಿಸಿ ಶೇ. 100ರ ಸಾಧನೆ ಮಾಡಿದೆ. ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿರುವ ಮಿಕು ಅವರ ಅನುಪಸ್ಥಿತಿಯಲ್ಲೂ ಸುನಿಲ್ ಛೆಟ್ರಿ ಹಾಗೂ ಉದಾಂತ ಸಿಂಗ್ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.

Story first published: Wednesday, December 5, 2018, 19:05 [IST]
Other articles published on Dec 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X