ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌: ಜಯಕ್ಕಾಗಿ ಸೆಣಸಾಡಲಿವೆ ಚೆನ್ನೈಯ್ಯಿನ್, ಡೆಲ್ಲಿ ಡೈನಮೋಸ್

ISL 2018 preview: Delhi Dynamos and Chennaiyin FC

ಹೊಸದಿಲ್ಲಿ, ಅಕ್ಟೋಬರ್ 22: ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಇನ್ನೂ ಜಯದ ಖಾತೆ ತೆರೆಯದ ಹಾಲಿ ಚಾಂಪಿಯನ್ ಚೆನ್ನೈಯ್ಯಿನ್ ಹಾಗೂ ಡೆಲ್ಲಿ ಡೈನಮೋಸ್ ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ (ಅಕ್ಟೋಬರ್ 22) ನಡೆಯುವ ಪಂದ್ಯದಲ್ಲಿ ಇತ್ತಂಡಗಳಿಗೂ ಜಯವೊಂದೇ ಮಂತ್ರವಾಗಿದೆ.

ಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ vs ಡೆಲ್ಲಿ ಡೈನಮೋಸ್ ಪಂದ್ಯ ಸಮಬಲಐಎಸ್‌ಎಲ್: ಕೇರಳ ಬ್ಲಾಸ್ಟರ್ಸ್ vs ಡೆಲ್ಲಿ ಡೈನಮೋಸ್ ಪಂದ್ಯ ಸಮಬಲ

ಆತಿಥೇಯ ಡೆಲ್ಲಿ ತಂಡ ಹಿಂದೆ ಕೇರಳ ಬ್ಲಾಸ್ಟರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆಂಡ್ರಿಜಾ ಕಲುಡೆರೋವಿಕ್ ಗಳಿಸಿದ ಗೋಲಿನ ನೆರವಿನಿಂದ ಸಾಧಿಸಿ ಅಂಕ ಹಂಚಿಕೊಂಡಿತ್ತು. ಎಫ್ಸಿ ಪುಣೆ ಸಿಟಿ ವಿರುದ್ಧದ ಪಂದ್ಯದಲ್ಲೂ ಡೆಲ್ಲಿ ತಂಡ ಅಂತಿಮ ಹಂತದಲ್ಲಿ ಅಂಕ ಹಂಚಿಕೊಂಡಿತ್ತು. ಹೀಗಾಗಿ ಮೂರು ಪಂದ್ಯಗಳಲ್ಲಿ ಎರಡು ಅಂಕಕ್ಕಿಂತ ಹೆಚ್ಚಿನ ಸಾಧನೆ ಮಾಡಬೇಕಾದ ಅನಿವಾರ್ಯತೆ ಈಗ ಡೆಲ್ಲಿ ಕೋಚ್ ಜೊಸೆಫ್ ಗೊಂಬಾವ್ ಅವರ ಮುಂದಿದೆ.

'ನಮ್ಮದು ಹೊಸ ತಂಡ, ನಾವು ಹೊಸ ಶೈಲಿಯ ಫುಟ್ಬಾಲ್ ಆಡಲು ಯತ್ನಿಸುತ್ತಿದ್ದೇವೆ. ಇದು ಒಂದೇ ದಿನದಲ್ಲಿ ಆಗುವಂಥದ್ದಲ್ಲ. ನಾವು ಎರಡು ಅಂಕಗಳಿಗಿಂತ ಹೆಚ್ಚಿನ ಸಾಧನೆ ಮಾಡಬೇಕಿತ್ತು. ಆಡಿರುವ ಮೂರೂ ಪಂದ್ಯಗಳಲ್ಲೂ ನಮಗೆ ಗೆಲ್ಲುವ ಅವಕಾಶವಿತ್ತು' ಎಂದು ಕೋಚ್ ಗೊಂಬಾವ್ ಹೇಳಿದ್ದಾರೆ.

ವ್ಯಾಲೆಟ್ಟಾ ಎಫ್‌ಸಿ ಆಫರ್ ನಿರಾಕರಿಸಿದ ಮಿಂಚಿನ ಓಟಗಾರ ಉಸೇನ್ ಬೋಲ್ಟ್‌ವ್ಯಾಲೆಟ್ಟಾ ಎಫ್‌ಸಿ ಆಫರ್ ನಿರಾಕರಿಸಿದ ಮಿಂಚಿನ ಓಟಗಾರ ಉಸೇನ್ ಬೋಲ್ಟ್‌

'ಲಾಲ್‌ಲಿಯಾನ್ಜುವಾಲಾ ಚಾಂಗ್ಟೆ ಹಾಗೂ ರೋಮಿಯೋ ಫೆರ್ನಾಂಡೀಸ್ ತಮ್ಮ ನೈಜ ಗುಣಮಟ್ಟದ ಆಟವನ್ನು ತೋರಿಸಿದ್ದಾರೆ. ಗೋಲ್‌ಬಾಕ್ಸ್‌ನ ಸಮ್ಮುಖದಲ್ಲಿ ಹೊಂದಾಣಿಕೆ ಇಲ್ಲದಿರುವುದು ಡೆಲ್ಲಿಯ ಸೋಲಿಗೆ ಅಥವಾ ಡ್ರಾ ಸಾಧನೆಗೆ ಪ್ರಮುಖ ಕಾರಣವಾಗಿತ್ತು. ಉತ್ತಮ ಅವಕಾಶವನ್ನು ನಿರ್ಮಿಸಿರುವ ಡೆಲ್ಲಿ ತಂಡ ಗಳಿಸಿದ್ದು ಮಾತ್ರ ಮೂರು ಪಂದ್ಯಗಳಿಂದ ಮೂರು ಗೋಲು.

ಮುಖ್ಯ ಅಂಶವೆಂದರೆ ನಾವು ಉತ್ತಮ ುಟ್ಬಾಲ್ ಆಡುತ್ತಿದ್ದೇವೆ. ನಾವು ಹುಟ್ಟುಹಾಕಿದ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದರೆ ಪಂದ್ಯ ಗೆದ್ದಂತೆ. ನಮ್ಮಲ್ಲಿ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಇದೆ, ನಾವು ಗೆಲ್ಲುತ್ತೇವೆ' ಎಂದು ಪಂದ್ಯಕ್ಕೂ ಮುನ್ನಾದಿನ (ಅ.22) ಗೊಂಬಾವ್ ವಿಶ್ವಾಸ ವ್ಯಕ್ತಪಡಿಸಿದರು.

Story first published: Monday, October 22, 2018, 20:14 [IST]
Other articles published on Oct 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X