ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ 2019: ಗೋವಾದ ಮುನ್ನಡೆಗೆ ಡೆಲ್ಲಿ ತಡೆಯೊಡ್ಡುತ್ತಾ?

By Isl Media
ISL 2019: Can an improved Delhi thwart Goa’s top-four march?

ಹೊಸದಿಲ್ಲಿ, ಫೆಬ್ರವರಿ 4: ಸೋಮವಾರ (ಫೆಬ್ರವರಿ 4) ಇಲ್ಲಿನ ಜವಾಹರ ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಡೆಲ್ಲಿ ಡೈನಮೋಸ್ ತಂಡ ಪ್ಲೇ ಆಫ್ ನ ಅಂಚಿನಲ್ಲಿರುವ ಗೋವಾಕ್ಕೆ ಆಘಾತ ನೀಡುವ ಗುರಿ ಹೊಂದಿದೆ.

ಎಂಎಸ್ ಧೋನಿ ಉಲ್ಲೇಖಿಸಿ ಐಸಿಸಿ ಮಾಡಿದ ವೈರಲ್ ಟ್ವೀಟ್‌ನಲ್ಲೇನಿದೆ?!ಎಂಎಸ್ ಧೋನಿ ಉಲ್ಲೇಖಿಸಿ ಐಸಿಸಿ ಮಾಡಿದ ವೈರಲ್ ಟ್ವೀಟ್‌ನಲ್ಲೇನಿದೆ?!

ಈ ಋತುವಿನಲ್ಲಿ ಆಡಿರುವ 11 ಪಂದ್ಯಗಳಲ್ಲೂ ಜಯ ಕಾಣಲು ವಿಲವಾಗಿರುವ ಡೆಲ್ಲಿ ಡೈನಮೋಸ್ ಇತ್ತೀಚಿನ ಎರಡು ಪಂದ್ಯಗಳಲ್ಲಿ ಜಯ ಗಳಿಸಿ ಅಚ್ಚರಿ ಮೂಡಿಸಿದೆ. ಋತುವಿನ ಕೊನೆಯ ಪಂದ್ಯಕ್ಕೆ ಮುನ್ನ ಆದಷ್ಟು ಪಂದ್ಯಗಳನ್ನು ಗೆದ್ದು ಸುಧಾರಣೆ ಕಂಡುಕೊಳ್ಳುವ ಗುರಿ ಹೊಂದಿರುವ ಡೆಲ್ಲಿ ಗೋವಾಕ್ಕೂ ಅಚ್ಚರಿಯ ಸೋಲುಣಿಸುವ ತವಕದಲ್ಲಿದೆ.

ಪಂದ್ಯದ Live Score ಇಲ್ಲಿದೆ. ಸ್ಕೋರ್‌ಕಾರ್ಡ್‌ಗೆ ಕಳಗಿನ ಲಿಂಕ್ ಕ್ಲಿಕ್ ಮಾಡಿ

1
1042955

13 ಪಂದ್ಯಗಳನ್ನಾಡಿರುವ ಗೋವಾ ಒಟ್ಟು 23 ಅಂಕಗಳನ್ನು ಗಳಿಸಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಂಬೈ ವಿರುದ್ಧ ನಡೆದ ಪಂದ್ಯದಲ್ಲಿ ಪ್ರಯಾಸದ ಜಯದ ಜಯ ಕಂಡ ಗೋವಾಕ್ಕೆ, ಇನ್ನು ಒಂದು ಅಂಕ ದೊರೆತರೆ ನಾರ್ತ ಈಸ್ಟ್ ಯನೈಟೆಡ್ ತಂಡಕ್ಕಿಂತ ಮೇಲುಗೈ ಸಾಧಿಸಲಿದೆ.

ನೆರವು ಬೇಡುವ ಮಾಜಿ ಸೈನಿಕನ ಫೋಟೋ ಶೇರ್ ಮಾಡಿದ ಗೌತಮ್ ಗಂಭೀರ್!ನೆರವು ಬೇಡುವ ಮಾಜಿ ಸೈನಿಕನ ಫೋಟೋ ಶೇರ್ ಮಾಡಿದ ಗೌತಮ್ ಗಂಭೀರ್!

ಗೋವಾದ ಪ್ರಧಾನ ಕೋಚ್ ಸರ್ಗಿಯೋ ಲೊಬೆರಾ ಕೂಡ ವೇಗದಲ್ಲಿ ಗೋಲು ಗಳಿಸಿ ಗೋಲಿನ ಅಂತರವನ್ನು ಕಾಯ್ದುಕೊಳ್ಳುವ ಗುರಿ ಹೊಂದಿದ್ದಾರೆ. ಪ್ರತಿ ಬಾರಿಯೂ ಗೋವಾತಂಡ ಗೋಲು ಗಳಿಕೆಯಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುತ್ತಿದೆ. ಕಳೆದ ಬಾರಿ 42 ಗೋಲುಗಳನ್ನು ಗಳಿಸಿತ್ತು. ಈ ಬಾರಿ ಈಗಾಗಲೇ 29 ಗೋಲುಗಳನ್ನು ಗಳಿಸಿ ಅಗ್ರ ಸ್ಥಾನದಲ್ಲಿದೆ. ಇನ್ನೂ ಐದು ಪಂದ್ಯಗಳನ್ನು ಆಡಬೇಕಾಗಿದೆ.

ಅತ್ಯಂತ ಖುಷಿಯ ವಿಚಾರ

ಅತ್ಯಂತ ಖುಷಿಯ ವಿಚಾರ

‘ಲೀಗ್‌ನಲ್ಲಿ ನಾವು ಅತಿ ಹೆಚ್ಚು ಗೋಲು ಗಳಿಸಿ ಗೋಲುಗಳ ಅಂತರವನ್ನು ಕಾಯ್ದುಕೊಂಡಿದ್ದೇವೆ. ಇದು ಅತ್ಯಂತ ಖುಷಿಯ ವಿಚಾರ. ಈ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಹೆಚ್ಚಿನ ಗಮನ ಹರಿಸಲಿದ್ದೇವೆ. ಕ್ಲೀನ್ ಶೀಟ್ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ, ಬದಲಾಗಿ ನಾವು ಹೆಚ್ಚು ಗೋಲುಗಳನ್ನು ಗಳಿಸಬೇಕಾಗಿದೆ,‘ ಎಂದು ಲೊಬೆರಾ ಹೇಳಿದ್ದಾರೆ.

ಕಳಪೆ ಎಂಬಂತೆ ಆರಂಭಿಸಿತ್ತು

ಕಳಪೆ ಎಂಬಂತೆ ಆರಂಭಿಸಿತ್ತು

ಡೆಲ್ಲಿ ತಂಡ ಈ ಬಾರಿ ಋತುವನ್ನು ಅತ್ಯಂತ ಕಳಪೆ ಎಂಬಂತೆ ಆರಂಭಿಸಿತ್ತು. ಆದರೆ ಗೊಂಬೌ ಅವರ ಫುಟ್ಬಾಲ್ ತತ್ವಜ್ಞಾನ ತಂಡದ ಮೇಲೆ ಅಪಾರ ಪರಿಣಾಮ ಬೀರಿದೆ. ದಾಳಿಯಲ್ಲಿ ಡೆಲ್ಲಿ ಅತ್ಯಂತ ಅಪಾಯಕಾರಿ ಎಂಬುದು ಹಲವು ಪಂದ್ಯಗಳಲ್ಲಿ ಸಾಬೀತಾಗಿದೆ. ಲಾಲಿಯಾನ್ಜುವಾಲಾ ಚಾಂಗ್ಟೆ ಹಾಗೂ ನಂದಕುಮಾರ್ ಶೇಖರ್ ಫುಲ್ ಬ್ಯಾಕ್‌ನಲ್ಲಿ ಅಪಾಯ ತಂದೊಡ್ಡಬಲ್ಲ ಆಟಗಾರರು. ಡೆಲ್ಲಿ ತಂಡ ಅಂತಿಮ ನಾಲ್ಕರ ಹಂತ ತಲಪುವ ತಂಡಕ್ಕೆ ಅಘಾತ ನೀಡುವ ಹಾದಿಯಲ್ಲಿದೆ. ಉತ್ತಮವಾಗಿ ಆಡಿದರೂ ಗೋಲು ಗಳಿಸುವಲ್ಲಿ ವಿಲವಾಗಿರುವುದು ಡೆಲ್ಲಿ ತಂಡದ ದೊಡ್ಡ ದೌರ್ಬಲ್ಯ.

ಉತ್ತಮ ಫುಟ್ಬಾಲ್ ಆಟ

ಉತ್ತಮ ಫುಟ್ಬಾಲ್ ಆಟ

‘ನಾವು ಇದುವರೆಗೂ ಉತ್ತಮ ಫುಟ್ಬಾಲ್ ಆಟವನ್ನು ಆಡಿದ್ದೇವೆ. ನಾವು ಹಲವಾರು ಅವಕಾಶಗಳನ್ನು ಸೃಷ್ಟಿಮಾಡಿದ್ದೇವೆ. ಆದರೆ ಗೋಲು ಗಳಿಸುವಲ್ಲಿ ವಿಲರಾಗಿದ್ದೇವೆ. ನಮ್ಮ ಡಿಫೆನ್ಸ್ ವಿಭಾಗ ಸುಧಾರಣೆ ಆಗಬೇಕಿದೆ, ನಾವು ಎದುರಾಳಿಗೆ ಹೆಚ್ಚು ಗೋಲುಗಳನ್ನು ನೀಡಿದ್ದೇವೆ. ನಾವು ಮನೆಯಂಗಣದ ಹೊರಗೆ ಆಡುವಾಗಲೂ ಗೋಲು ಗಳಿಸುವ ಅವಕಾಶಗಳನ್ನು ನಿರ್ಮಿಸಿದ್ದೇವೆ, ಆದರೆ ಗೋಲು ದಾಖಲಾಗದಿರುವುದು ಬೇಸರದ ಸಂಗತಿ,‘ ಎಂದು ಗೊಂಬೌ ಹೇಳಿದ್ದಾರೆ.

ಆಟದ ಶೈಲಿಗೆ ಬದ್ಧ

ಆಟದ ಶೈಲಿಗೆ ಬದ್ಧ

ಕೋಚ್‌ಗಳು ಈಗ ಫಲಿತಾಂಶದ ಬಗ್ಗೆ ಹೆಚ್ಚು ಯೋಚಿಸದೆ ತಮ್ಮ ಆಟದ ಶೈಲಿಗೆ ಬದ್ಧರಾಗಿದ್ದಾರೆ. ಅಹಮ್ಮದ್ ಜೊಹೌವು ಹಾಗೂ ಎಡು ಬೇಡಿಯಾ ಉತ್ತಮವಾಗಿ ಆಡುತ್ತಿದ್ದರು, ಆದರೆ ಗಾಯಕಗೊಂಡ ಕಾರಣ ಪಂದ್ಯದಿಂದ ಹೊರಗುಳಿಯಬೇಕಾಯಿತು. ಚೊಚ್ಚಲ ಪಂದ್ಯದಲ್ಲೇ ಅದ್ಭುತ ಆಟ ಪ್ರದರ್ಶಿಸಿದ್ದ ಡೆಲ್ಲಿಯ ಹೊಸ ಆಟಗಾರರ ಯುಲಿಸಸ್ ಡೆವಿಲಾ ಗೋವಾ ತಂಡಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ. ಇತ್ತಂಡಗಳು ಹನ್ನೊಂದು ಬಾರಿ ಮುಖಾಮುಖಿಯಾಗಿದ್ದು, ಡೆಲ್ಲಿ ಕೇವಲ ಮೂರ ಬಾರಿ ಗೆದ್ದಿದೆ. ಲೀಗ್ ಕುತೂಹಲದ ಕಡೆಗೆ ಹೆಜ್ಜೆ ಹಾಕಿರುವಾಗ ಡೆಲ್ಲಿ ತಂಡ ಸತತ ಎರಡು ಪಂದ್ಯಗಳಲ್ಲಿ ಗೆದ್ದಿರುವುದು ಗೋವಾ ವಿರುದ್ಧದ ಪಂದ್ಯಕ್ಕೆ ಮತ್ತಷ್ಟು ಕುತೂಹಲವನ್ನುಂಟು ಮಾಡಿದೆ.

Story first published: Monday, February 4, 2019, 14:57 [IST]
Other articles published on Feb 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X