ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್‌ನಲ್ಲಿ ಬಲಿಷ್ಠ ಮುಂಬೈ-ಬೆಂಗಳೂರು ತಂಡಗಳ ಹೋರಾಟ

By Isl Media
ISL 2019: Two of ISL’s best face off in Mumbai

ಮುಂಬೈ ಜನವರಿ 26: ಮುಂಬೈ ಫುಟ್ಬಾಲ್ ಅರೆನಾದಲ್ಲಿ ಭಾನುವಾರ (ಜ.27) ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಬೆಂಗಳೂರು ಎಫ್ಸಿ ಹಾಗೂ ಮುಂಬೈ ಸಿಟಿ ಎಫ್ಸಿ ತಂಡಗಳು ಮುಖಾಮುಖಿಯಾಗುವುದರಿಂದ ಫುಟ್ಬಾಲ್ ಅಭಿಮಾನಿಗಳಿಗೆ ಕುತೂಹಲದ ಪಂದ್ಯವೊಂದು ಕಾಣಸಿಗಲಿದೆ.

ಅಜರುದ್ದೀನ್ ದಾಖಲೆ ಸರಿದೂಗಿಸಿದ ಧೋನಿ, ದ್ರಾವಿಡ್ ಮೀರಿಸುವತ್ತ ಕಣ್ಣು!ಅಜರುದ್ದೀನ್ ದಾಖಲೆ ಸರಿದೂಗಿಸಿದ ಧೋನಿ, ದ್ರಾವಿಡ್ ಮೀರಿಸುವತ್ತ ಕಣ್ಣು!

ವಿಶ್ರಾಂತಿಗೆ ಮೊದಲು ನಡೆದ ಪಂದ್ಯದಲ್ಲಿ ಬೆಂಗಳೂರು ಹಾಗೂ ಮುಂಬೈ ಮುಖಾಮುಖಿಯಾಗಿದ್ದು, ಪಂದ್ಯ 1-1ರಲ್ಲಿ ಸಮಬಲಗೊಂಡಿತ್ತು. ಮುಂಬೈ ಮಾಡಿದ ಪ್ರಮಾದದ ಕಾರಣ ಕೇವಲ 10 ಮಂದಿ ಆಟಗಾರರು ತಂಡದಲ್ಲಿರಬೇಕಾಯಿತು. ಚಳಿಗಾಲದ ವಿಶ್ರಾಂತಿಯ ನಂತರ ನಮ್ಮ ತಂಡ ಉತ್ತಮ ಪ್ರದರ್ಶನ ತೋರಲು ಸಜ್ಜಾಗಿದೆ ಎಂದು ಮುಂಬೈ ತಂಡದ ಕೋಚ್ ಜಾರ್ಜ್ ಕೋಸ್ಟಾ ಹೇಳಿದ್ದಾರೆ.

ಬೇ ಓವಲ್, 2ನೇ ಏಕದಿನ: 90 ರನ್‌ನಿಂದ ನ್ಯೂಜಿಲ್ಯಾಂಡ್ ಮಣಿಸಿದ ಭಾರತಬೇ ಓವಲ್, 2ನೇ ಏಕದಿನ: 90 ರನ್‌ನಿಂದ ನ್ಯೂಜಿಲ್ಯಾಂಡ್ ಮಣಿಸಿದ ಭಾರತ

'ಈ ರೀತಿಯ ಬಿಡುವು ಸಿಕ್ಕಿದ್ದರಿಂದ ನಮ್ಮ ಆಟದ ಬಗ್ಗೆ ಯೋಚಿಸಲು ಸಾಧ್ಯವಾಯಿತು. ದೈಹಿಕ ಹಾಗೂ ಮಾನಸಿಕವಾಗಿ ವಿಶ್ರಾಂತಿ ಪಡೆಯಲು ಆಟಗಾರರಿಗೆ ಸಾಧ್ಯವಾಯಿತು. ನಮ್ಮ ತಂಡ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರುತ್ತಿದೆ ಎಂಬುದು ಗೊತ್ತು, ಆದರೆ ಆಟಗಾರರು ತಮ್ಮ ಕುಟುಂಬದ ಸದಸ್ಯರೊಂದಿಗೆ ವಿಶ್ರಾಂತಿಯಲ್ಲಿ ದಿನಗಳನ್ನು ಕಳೆದಿದ್ದರು ಎಂಬುದನ್ನು ಮರೆಯುವಂತಿಲ್ಲ,' ಎಂದು ಪೋರ್ಚುಗೀಸ್ ಮೂಲದ ಕೋಚ್ ಹೇಳಿದ್ದಾರೆ. ಕೇರಳ ಬ್ಲಾಸ್ಟರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಗಾಯಗೊಂಡಿದ್ದ ಜಾಯ್ನರ್ ಲೌರೆಂಕೊ ಭಾನುವಾರದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ಋತು ಮುಗಿಯುವವರೆಗೂ ಜೆಮ್ಷೆಡ್ಪುರ ತಂಡದ ಆಟಗಾರ ಸಂಜಯ್ ಬಾಲ್‌ಮುಚು ಅವರು ಮುಂಬೈ ಪರ ಆಡಲಿದ್ದಾರೆ.

ವಿದೇಶಿ ಆಟಗಾರರೇ ಆಸರೆ

ವಿದೇಶಿ ಆಟಗಾರರೇ ಆಸರೆ

ವಿದೇಶಿ ಆಟಗಾರರನ್ನೇ ಹೆಚ್ಚು ಆತುಕೊಂಡಿರುವ ಜಾರ್ಜ್ ಕೋಸ್ಟಾ ಅಟ್ಯಾಕ್ ವಿಭಾಗದಲ್ಲಿ ಮೌಡೌ ಸೌಗೌ, ರೊಲ್ ಬಾಸ್ಟೋಸ್ ಮತ್ತು ಅರ್ನಾಲ್ಡ್ ಇಸ್ಸೊಕೊ ಪ್ರಮುಖ ಅಸ್ತ್ರವೆನಿಸಿದ್ದಾರೆ. ಸೌಗೌ ಉತ್ತಮ ಪ್ರದರ್ಶನ ತೋರುತ್ತಿದ್ದು,ಇದುವರೆಗೂ ಒಂಬತ್ತು ಗೋಲುಗಳನ್ನು ಗಳಿಸಿದ್ದಾರೆ.

ಸೆಹ್ನಾಜ್ ಸಿಂಗ್ ಆಡಲು ಸಜ್ಜು

ಸೆಹ್ನಾಜ್ ಸಿಂಗ್ ಆಡಲು ಸಜ್ಜು

ಒಂದು ಪಂದ್ಯಕ್ಕೆ ಅಮಾನತುಗೊಂಡಿರುವ ಸೆಹ್ನಾಜ್ ಸಿಂಗ್ ಆಡಲು ಸಜ್ಜಾಗಿದ್ದಾರೆ. ಮಿಲಾನ್ ಸಿಂಗ್ ಹಾಗೂ ರೇನಿಯರ್ ಫೆರ್ನಾಂಡೀಸ್ ಮಿಡ್‌ಫೀಲ್ಡ್ ವಿಭಾಗದಲ್ಲೇ ಮುಂದುವರಿಯುವುದರಿಂದ ಸಿಂಗ್ ಅವರ ಸ್ಥಾನಪಲ್ಲಟವಾಗುವ ಸಾಧ್ಯತೆ ಹೆಚ್ಚಿದೆ. 12 ಪಂದ್ಯಗಳಿಂದ 24 ಅಂಕ ಗಳಿಸಿರುವ ಮುಂಬೈ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ, ಮುಂದಿನ ಐದು ಪಂದ್ಯಗಳಲ್ಲಿ ಮುಂಬೈ ಪ್ಲೇ ಆ್ ಹಂತ ತಲುಪಲಿರುವ ತಂಡಗಳ ವಿರುದ್ಧ ಸೆಣಸಲಿದೆ. ಅದೇ ರೀತಿ ಏರು ಪೇರು ತಂಡದ ಮುನ್ನಡೆಗೆ ಅಡ್ಡಿಯಾಗಲಿದೆ. ಕೋಸ್ಟಾ ತಂಡವನ್ನು ಈ ಕಾರಣಕ್ಕಾಗಿ ಉತ್ತಮ ರೀತಿಯಲ್ಲ ಸಜ್ಜುಗೊಳಿಸಿದ್ದಾರೆ.

ಬಲಿಷ್ಠ ತಂಡ ಬೆಂಗಳೂರು

ಬಲಿಷ್ಠ ತಂಡ ಬೆಂಗಳೂರು

ಬೆಂಗಳೂರು ಎಫ್ಸಿ ತಂಡ ಈ ಬಾರಿಯ ಇಂಡಿಯನ್ ಸೂಪರ್‌ಲೀಗ್‌ನಲ್ಲಿ ಬಲಿಷ್ಠ ತಂಡವಾಗಿ ಹೊರಹೊಮ್ಮಿದೆ. ನೀಲಿ ಪಡೆ ಆಡಿರುವ 11 ಪಂದ್ಯಗಳಲ್ಲಿ ಅಜೇಯವಾಗಿ ಸಾಗಿದೆ. ‘ಅಜೇಯವಾಗಿ ಮುಂದುವರಿಯುತ್ತಿರುವುದು ಸಂತಸದ ವಿಷಯ, ಆದರೆ ಆದಷ್ಟು ಬೇಗನೆ ಪ್ಲೇ ಆಫ್ ನಲ್ಲಿ ನಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳವುದು ನಮ್ಮ ಗುರಿ. ದೀರ್ಘ ವಿಶ್ರಾಂತಿ ತಂಡದ ಲಯದ ಮೇಲೆ ಪರಿಣಾಮ ಬೀರಿದೆಯೋ ಇಲ್ಲವೋ ಗೊತ್ತಿಲ್ಲ. ಅದನ್ನು ಕಾಲವೇ ತಿಳಿಸುತ್ತದೆ. ನಾವು ಲಯ ಕಂಡುಕೊಳ್ಳಲು ಕಠಿಣ ಶ್ರಮ ವಹಿಸುತ್ತಿದ್ದೇವೆ. ನಮ್ಮಲ್ಲಿ ಸಾಧ್ಯವಿರುವ ತನಕ ಈ ಓಟವನ್ನು ಮುಂದುವರಿಸಿಕೊಂಡು ಹೋಗುತ್ತೇವೆ,‘ ಎಂದು ಕೋಚ್ ಕಾರ್ಲ್ಸ್ ಕ್ಯುಡ್ರಾಟ್ ಹೇಳಿದ್ದಾರೆ.

ಬೆಂಗಳೂರು ಬಲ ಹೆಚ್ಚಳ

ಬೆಂಗಳೂರು ಬಲ ಹೆಚ್ಚಳ

ಪ್ರಮುಖ ಆಟಗಾರ ಮಿಕು ತಂಡವನ್ನು ಸೇರಿಕೊಂಡಿರುವುದು ಬೆಂಗಳೂರಿನ ಬಲ ಹೆಚ್ಚಿಸಿದೆ. ನಿಶು ಕುಮಾರ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ನಾಳೆಯ ಪಂದ್ಯಕ್ಕೆ ಅವರು ಅಲ‘್ಯರಾಗಲಿದ್ದಾರೆ. ಬೆಂಗಳೂರು ತಂಡ ಎದುರಾಳಿ ತಂಡಕ್ಕೆ ಕೇವಲ ಎಂಟು ಗೋಲುಗಳನ್ನು ನೀಡಿದ್ದು, ಮುಂಬೈಗೆ ಇದೊಂದು ಸವಾಲಾಗಲಿದೆ. ಬೆಂಗಳೂರು ಸೋಲಿಸದ ಮೂರು ತಂಡಗಳಲ್ಲಿ ಮುಂಬೈ ಕೂಡ ಒಂದು.

Story first published: Saturday, January 26, 2019, 17:00 [IST]
Other articles published on Jan 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X