ಐಎಸ್‌ಎಲ್: ಅಂಕ ಹಂಚಿಕೊಂಡ ಹೈದರಾಬಾದ್ ಎಫ್‌ಸಿ ಮತ್ತು ಮೋಹನ್ ಬಾಗನ್

By Isl Media

ಗೋವಾ, ಫೆಬ್ರವರಿ 22: ಕೇವಲ 10 ಮಂದಿ ಆಟಗಾರಲ್ಲೇ ಇಡೀ ಪಂದ್ವಯನ್ನು ಆಡಿದ ಹೈದರಾಬಾದ್ ಎಫ್ ಸಿ ತಂಡ ಬಲಿಷ್ಠ ಮೋಹನ್ ಬಾಗನ್ ವಿರುದ್ಧ 2-2 ಗೋಲುಗಳಿಂದ ಡ್ರಾ ಸಾಧಿಸಿ ಪ್ಲೇ ಆಫ್ ಹಂತವನ್ನು ಜೀವಂತವಾಗಿರಿಸಕೊಂಡಿದೆ. ಹೈದರಾಬಾದ್ ಪರ ಅರಿದಾನೆ ಸ್ಯಾಂಟನಾ (8ನೇ ನಿಮಿಷ) ಮತ್ತು ರೊಲ್ಯಾಂಡ್ ಅಲ್ಬರ್ಗ್ (75ನೇ ನಿಮಿಷ) ಗೋಲು ಗಳಿಸಿದರೆ, ಎಟಿಕೆ ಮೋಹನ್ ಬಾಗನ್ ಪರ ಮನ್ವೀರ್ ಸಿಂಗ್ (57ನೇ ನಿಮಿಷ) ಹಾಗೂ ಪ್ರೀತಂ ಕೊತಾಲ್ (90ನೇ ನಿಮಿಷ) ಗೋಲು ಗಳಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಈ ಫಲಿತಾಂಶದೊಂದಿಗೆ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲೇ ಉಳಿಯಿತು. ಎಟಿಕೆ ಮೋಹನ್ ಬಾಗನ್ ಲೀಗ್ ಚಾಂಪಿಯನ್ ಪಟ್ಟಕ್ಕೆ ಬಹುತೇಕ ಅರ್ಹತೆ ಪಡೆಯಿತು.

ಹೈದರಾಬಾದ್ ಗೆ ಮುನ್ನಡೆ: ಕೇವಲ 10 ಆಟಗಾರರಲ್ಲೇ ಬಲಿಷ್ಠ ಎಟಿಕೆ ಮೋಹನ್ ಬಾಗನ್ ಗೆ ದಿಟ್ಟ ಉತ್ತರ ನೀಡಿದ ಹೈದರಾಬಾದ್ ಎಫ್ ಸಿ ಪ್ರಥಮಾರ್ಧದಲ್ಲಿ 1-0 ಗೋಲಿನಿಂದ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯ ಆರಂಭಗೊಂಡ 5ನೇ ನಿಮಿಷದಲ್ಲೇ ಚೆಂಗಸ್ಲೆನಾ ಸಿಂಗ್ ರೆಡ್ ಕಾರ್ಡ್ ಪಡೆಯುವ ಮೂಲಕ ಹೈದರಾಬಾದ್ ಕೇವಲ 10 ಮಂದಿ ಆಟಗಾರರಲ್ಲೇ ಪಂದ್ಯವನ್ನು ಮುನ್ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿತು. ಆದರೆ ತಂಡ ಎಲ್ಲಿಯೂ ತನ್ನ ಆಟಗಾರರ ಸಂಖ್ಯೆಯಲ್ಲಿ ಕೊರತೆ ಆಗಿರುವುದನ್ನು ತೋರಿಸಿಲ್ಲ. 8ನೇ ನಿಮಿಷದಲ್ಲಿ ಅರಿದಾನೆ ಸ್ಯಾಂಟನಾ ಗಳಿಸಿದ ಗೋಲಿನಿಂದ ಹೈದರಾಬಾದ್ 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿತು.

ಚುಟುಕು ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡ ಆಸ್ಟ್ರೇಲಿಯಾ

ಕೇವಲ 10 ಮಂದಿ ಆಟಗಾರರಿದ್ದರೂ ಮುನ್ನಡೆ ಕಂಡಿರುವುದು ನಿಜವಾಗಿಯೂ ಅದ್ಭುತ ಸಾಧನೆ ಎಂದರೆ ತಪ್ಪಾಗಲಾರದು. ಎಡ ಭಾಗದಲ್ಲಿ ಚೆಂಡು ಹಾಲಿಚರಣ್ ಆವರ ನಿಯಂತ್ರಣದಲ್ಲಿತ್ತು. ಪ್ರೀತಮ್ ಕೊತಾಲ್ ನಂತರ ನಿಯಂತ್ರಣಕ್ಕೆ ತೆಗೆದುಕೊಂಡರು. ಅವರು ಆತ್ಮವಿಶ್ವಾಸವಿಲ್ಲದೆ ಚೆಂಡನ್ನು ಗೋಲ್ ಕೀಪರ್ ಕಡೆಗೆ ತಳ್ಳಿದರು. ಕೀಪರ್ ಗೆ ಮುನ್ನ ಚೆಂಡನ್ನು ಅರಿದಾನೆ ಸ್ಯಾಂಟನಾ ನಿಯಂತ್ರಣಕ್ಕೆ ತೆಗೆದುಕೊಂಡರು. ಅವರು ಗೋಲ್ ಬಾಕ್ಸ್ ಕಡೆಗೆ ತುಳಿದರು, ಆದರೆ ಅದರಲ್ಲಿ ಬಲ ಇರಲಿಲ್ಲ. ಚೆಂಡು ನಿಧಾನವಾಗಿ ನೆಟ್ ಕಡೆಗೆ ಸಾಗಿತು. ಅರಿಂದಂ ಭಟ್ಟಾಚಾರ್ಯ ಚೆಂಡನ್ನು ತಡೆಯಲು ಯತ್ನಿಸಿದರೂ ಸಿಗಲಿಲ್ಲ. ಸುಭಾಶೀಶ್ ಭೋಸ್ ಕಾಲಿನಿಂದ ನಿಯಂತ್ರಿಸಿದರೂ ಚೆಂಡು ಆಗಲೇ ನೆಟ್ ಗೆ ಮುತ್ತಿಟ್ಟಿತ್ತು. ಹೈದರಾಬಾದ್ 1-0 ಅಂತರದಲ್ಲಿ ಮೇಲುಗೈ ಸಾಧಿಸಿತು.

ಹೈದರಾಬಾದ್ ಗೆ ಜಯದ ಅನಿವಾರ್ಯ: ಹೀರೋ ಇಂಡಿಯನ್ ಸೂಪರ್ ಲೀಗ್ ನ 103 ನೇ ಪಂದ್ಯದಲ್ಲಿ ಎಟಿಕೆಎಂಬಿ ಮತ್ತು ಹೈದರಾಬಾದ್ ತಂಡಗಳು ಮುಖಾಮುಖಿಯಾದವು. ಇಲ್ಲಿ ಹೈದರಾಬಾದ್ ಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಎಟಿಕೆ ಮೋಹನ್ ಬಾಗನ್ ಈಗಾಗಲೇ ಪ್ಲೇ ಆಫ್ ಗೆ ಪ್ರವೇಶ ಪಡೆದಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ, ಲೀಗ್ ಚಾಂಪಿಯನ್ ಪಟ್ಟ ಗೆಲ್ಲಲು ತಂಡಕ್ಕೆ ಇಲ್ಲಿ ಮತ್ತೊಂದು ಜಯದ ಅನಿವಾರ್ಯತೆ ಇದೆ. ನಿಜಾಮರ ಪಡೆ ಅಂಕ ಪಟ್ಟಿಯಲ್ಲಿ ನಾರ್ಥ್ ಈಸ್ಟ್ ಜತೆ ಸಮಬಲ ಸಾಧಿಸಿದೆ. ಗೋಲು ಗಳಿಕೆಯಲ್ಲಿ ಮುನ್ನಡೆ ಕಂಡಿದ್ದರಿಂದ ಹೈದರಾಬಾದ್ ಗೆ ಇಲ್ಲಿ ಜಯದ ಅನಿವಾರ್ಯತೆ ಇದೆ.

ವಿಜಯ್ ಹಜಾರೆ ಟ್ರೋಫಿ: ಕೇರಳ ವೇಗಿ ಶ್ರೀಶಾಂತ್ ಅಪರೂಪದ ದಾಖಲೆ

ಮಾನ್ವೆಲ್ ಮಾರ್ಕ್ವೆಜ್ ಪಡೆ ಈ ಪಂದ್ಯಕ್ಕೆ ಆಗಮಿಸುವ ಮುನ್ನ ಕೇರಳ ಬ್ಲಾಸ್ಟರ್ಸ್ ವಿರುದ್ಧ 4-0 ಗೋಲುಗಳ ಅಂತರದಲ್ಲಿ ಜಯ ಗಳಿಸಿತ್ತು. ಇದರೊಂದಿಗೆ 10 ಪಂದ್ಯಗಳಲ್ಲಿ ಜಯ ಗಳಿಸಿದ ಗೌರವಕ್ಕೆ ತಂಡ ಪಾತ್ರವಾಗಿದೆ. ಕಳೆದ ಎಂಟು ಪಂದ್ಯಗಳಲ್ಲಿ ಹೈದರಾಬಾದ್ ಆರು ಪಂದ್ಯಗಳಲ್ಲಿ ಡ್ರಾ ಗಳಿಸಿದೆ. ಮೋಹನ್ ಬಾಗನ್ ಸತತ 5 ಪಂದ್ಯಗಳಲ್ಲಿ ಜಯ ಸೋಲು ಕಂಡಿರಲಿಲ್ಲ. 13 ಪ<�ಂದ್ಯಗಳಲ್ಲಿ 13 ಗೋಲುಗಳನ್ನು ಗಳಿಸಿದ ಎಟಿಕೆ ಮೋಹನ್ ಬಾಗನ್ ತಂಡವನ್ನು ಸೋಲಿಸುವುದು ಅಷ್ಟು ಸುಲಭವಲ್ಲ. ಮಾರ್ಸೆಲೋ ಪೆರೆರಾ ಅವರ ಆಗಮನ ತಂಡದ ಬಲವನ್ನು ಹೆಚ್ಚಿಸಿದೆ. ರಾಯ್ ಕೃಷ್ಣ ಅವರನ್ನು ತಡೆದರೆ ಮಾತ್ರ ಹೈದರಾಬಾದ್ ತಂಡದ ಜಯದ ಹಾದಿ ಸುಗಮವಾಗಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, February 22, 2021, 23:00 [IST]
Other articles published on Feb 22, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X