ಐಎಸ್‌ಎಲ್: ಚೆನ್ನೈಯಿನ್ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ನಡುವಿನ ಪಂದ್ಯ ಡ್ರಾ

ಇಂಡಿಯನ್ ಸೂಪರ್ ಲೀಗ್‌ನ 59ನೇ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ಹಾಗೂ ಹೈದರಾಬಾದ್ ಎಫ್‌ಸಿ ತಂಡಗಳು ಮುಖಾಮುಖಿಯಾಗಿತ್ತು. ರೋಚಕವಾಗಿ ಸಾಗಿದ ಈ ಕಾದಾಟದಲ್ಲಿ ಎರಡು ತಂಡಗಳು ಕುಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದ್ದು ಎರಡು ತಂಡಗಳು ಕೂಡ ತಲಾ ಒಂದು ಗೋಲು ದಾಖಲಿಸಿತು. ಇದರ ಪರಿಣಾಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ.

ಪಂದ್ಯದ ಆರಂಭದಿಂದಲೇ ಎರಡು ತಂಡಗಳು ಕೂಡ ಸಾಕಷ್ಟು ಪೈಪೋಟಿಯ ಪ್ರದರ್ಶನ ನೀಡಿದವು. ಪಂದ್ಯ ಆರಂಭವಾದ 13ನೇ ನಿಮಿಷದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಮೊದಲ ಗೋಲು ಗಳಿಸುವಲ್ಲಿ ಯಶಸ್ವಿಯಾಯಿತು. ಮೊಹಮ್ಮದ್ ಸಾಜಿದ್ ಧೋತ್ ಚೆನ್ನೈಯಿನ್ ತಂಡಕ್ಕೆ ಈ ಮೊದಲ ಯಶಸ್ಸು ದೊರಕಿಸಿಕೊಟ್ಟಿದ್ದರು. ಈ ಮೇಲುಗೈಯನ್ನು ಮೊದಲಾರ್ಧದ ಅಂತ್ಯದವರೆಗೆ ಕಾಪಾಡಿಕೊಂಡಿದ್ದರೂ ಅಂತಿಮ ಹಂತದಲ್ಲಿ ಹೈದರಾಬಾದ್ ಎಫ್‌ಸಿ ತಂಡ ಕೂಡ ಗೋಲು ದಾಖಲಿಸುವಲ್ಲಿ ಸಫಲವಾಗಿತ್ತು. ಪಂದ್ಯದ 45ನೇ ನಿಮಿಷದಲ್ಲಿ ಜೇವಿಯರ್ ಸಿವೆರಿಯೊ ಹೈದರಾಬಾದ್ ಎಫ್‌ಸಿ ತಂಡದ ಪರವಾಗಿ ಗೋಲು ಸಿಡಿಸಿದ್ದರು. ಈ ಮೂಲಕ ಪಂದ್ಯದಲ್ಲಿ ಸಮಬಲ ಸಾಧಿಸಲು ಕಾರಣವಾದರು.

ಭಾರತದ ಹೊರಗೆ ನಡೆಯಲಿಲ್ಲ ಮಯಾಂಕ್ ಆಟ : 14 ಇನ್ನಿಂಗ್ಸ್‌ನಲ್ಲಿ ಗಳಿಸಿರುವುದು 1 ಅರ್ಧಶತಕಭಾರತದ ಹೊರಗೆ ನಡೆಯಲಿಲ್ಲ ಮಯಾಂಕ್ ಆಟ : 14 ಇನ್ನಿಂಗ್ಸ್‌ನಲ್ಲಿ ಗಳಿಸಿರುವುದು 1 ಅರ್ಧಶತಕ

ಇನ್ನು ದ್ವಿತೀಯಾರ್ಧದಲ್ಲಿಯೂ ಎರಡು ತಂಡಗಳು ಕೂಡ ಗೋಲು ಗಳಿಸಲು ನಿರಂತರ ಪ್ರಯತ್ನ ನಡೆಸಿದರಾದರೂ ಇದರಲ್ಲಿ ಯಾವ ತಂಡ ಕೂಡ ಸಫಲವಾಗಲಿಲ್ಲ. ಹೀಗಾಗಿ ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಗಿದೆ.

ಇನ್ನು ಈ ಪಂದ್ಯದಲ್ಲಿ ಡ್ರಾ ಸಾಧಿಸಿದ ಬಳಿಕ ಹೈದರಾಬಾದ್ ಎಫ್‌ಸಿ ತಂಡ ಅಂಕಪಟ್ಟಿಯಲ್ಲಿ ಒಂದು ಸ್ಥಾನದ ಏರಿಕೆ ಕಂಡಿದೆ. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಹೈದರಾಬಾದ್ ಎಫ್‌ಸಿ ತಂಡ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಟೂರ್ನಿಯಲ್ಲಿ 11 ಪಂದ್ಯಗಳನ್ನು ಆಡಿರುವ ಹೈದರಾಬಾದ್ ಎಫ್‌ಸಿ ತಂಡ ನಾಲ್ಕು ಗೆಲುವು, ಐದು ಡ್ರಾ ಹಾಗೂ ಎರಡು ಸೋಲು ಕಂಡಿದೆ. ಇನ್ನು ಚೆನ್ನೈಯಿನ್ ತಂಡ ಅ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. 6ನೇ ಸ್ಥಾನದಲ್ಲಿಯೇ ಮುಂದುವರಿದಿದೆ.

 ಭಾರತ vs ದ.ಆಫ್ರಿಕಾ: ಮೈದಾನದಲ್ಲಿ ಮಯಾಂಕ್ ಕುರಿತು ಅಸಮಾಧಾನ ಹೊರಹಾಕಿದ ಕೊಹ್ಲಿ ಭಾರತ vs ದ.ಆಫ್ರಿಕಾ: ಮೈದಾನದಲ್ಲಿ ಮಯಾಂಕ್ ಕುರಿತು ಅಸಮಾಧಾನ ಹೊರಹಾಕಿದ ಕೊಹ್ಲಿ

ಹೈದರಾಬಾದ್ ಎಫ್‌ಸಿ: ಲಕ್ಷ್ಮೀಕಾಂತ್ ಕಟ್ಟಿಮನಿ (ಗೋಲ್‌ ಕೀಪರ್), ಚಿಂಗ್ಲೆನ್ಸನಾ ಸಿಂಗ್, ಜುವಾನನ್, ಆಕಾಶ್ ಮಿಶ್ರಾ, ಆಶಿಶ್ ರೈ, ಜೋವೊ ವಿಕ್ಟರ್ (ನಾಯಕ), ಅನಿಕೇತ್ ಜಾಧವ್, ಎಡು ಗಾರ್ಸಿಯಾ, ಸೌವಿಕ್ ಚಕ್ರಬರ್ತಿ, ನಿಖಿಲ್ ಪೂಜಾರಿ, ಜೇವಿಯರ್ ಸಿವೆರಿಯೊ.

ಚೆನ್ನೈಯಿನ್ ಎಫ್‌ಸಿ: ದೇಬ್ಜಿತ್ ಮಜುಂದರ್ (ಗೋಲ್‌ ಕೀಪರ್), ಮೊಹಮ್ಮದ್ ಸಾಜಿದ್ ಧೋತ್, ಜೆರ್ರಿ ಲಾಲ್ರಿಂಜುಲಾ, ನಾರಾಯಣ ದಾಸ್, ಸ್ಲಾವ್ಕೊ ದಮ್ಜಾನೋವಿಕ್, ಎಡ್ವಿನ್ ವಾನ್ಸ್ಪಾಲ್, ನಿಂಥೋಯಿಂಗನ್ಬಾ ಮೀಟೆಲ್, ಅನಿರುದ್ಧ್ ಥಾಪಾ (ನಾಯಕ), ಮಿರ್ಲಾನ್ ಮುರ್ಜೇವ್, ಜರ್ಮನ್ಪ್ರೀತ್ ಸಿಂಗ್, ನೆರಿಜಸ್ ವಾಲ್ಸ್ಕಿಸ್.

For Quick Alerts
ALLOW NOTIFICATIONS
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS
Story first published: Thursday, January 13, 2022, 22:47 [IST]
Other articles published on Jan 13, 2022
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X