ಐಎಸ್‌ಎಲ್: ನಾರ್ಥ್ ಈಸ್ಟ್ ಪ್ಲೇಆಫ್‌ಗೆ ಅಡ್ಡಿಯಾದೀತೇ ಈಸ್ಟ್ ಬೆಂಗಾಲ್

By Isl Media

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಈಗಾಗಲೇ ಪ್ಲೇ ಆಫ್ ಸ್ಪರ್ಧೆಯಿಂದ ದೂರ ಸರಿದಿರುವ ಎಸ್ ಸಿ ಈಸ್ಟ್ ಬೆಂಗಾಲ್ ತಂಡ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿರುವ ನಾರ್ಥ್ ಈಸ್ಟ್ ಯುನೈಟೆಡ್‌ ವಿರುದ್ಧ ಜಯ ಗಳಿಸಿ ಗೌರವ ಕಾಯ್ದುಕೊಳ್ಳುವ ಗುರಿ ಹೊಂದಿದೆ. ಈಸ್ಟ್ ಬೆಂಗಾಲ್ ತಂಡಕ್ಕೆ ಪ್ಲೇ ಆಫ್ ತಲಪುವ ಅವಕಾಶವಿದ್ದಿತ್ತು ಆದರೆ ತಂಡದ ಅಟ್ಯಾಕ್ ವಿಭಾಗ ವಿಫಲವಾಗಿರುವುದು ವೈಫಲ್ಯಕ್ಕೆ ಕಾರಣವಾಯಿತು.

ಕುಟುಂಬದ ಮುದ್ದಾದ ಫೋಟೋ ಹಂಚಿಕೊಂಡು ಮಗುವಿನ ಹೆಸರು ಘೋಷಿಸಿದ ನಟರಾಜನ್

ಜನವರಿ 21 ರಿಂದ ಅಂದರೆ ಕಳೆದ ಒಂದು ತಿಂಗಳಿಂದ ಕೋಲ್ಕತಾ ಪಡೆ ಆರು ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 5 ಗೋಲುಗಳು. ಟಾರ್ಗೆಟ್ ಗೆ ಗುರಿ ಇಟ್ಟಿದ್ದು ಕೇವಲ 13 ಬಾರಿ ಇದು ತಂಡವೊಂದರ ಕಡಿಮೆ ದಾಖಲೆಯಾಗಿದೆ.

ತಂಡ ಜಯ ಗಳಿಸಲಿದೆ

ತಂಡ ಜಯ ಗಳಿಸಲಿದೆ

ಇನ್ನು ಎರಡು ಪಂದ್ಯಗಳು ಬಾಕಿ ಇರುವಂತೆ ಎಸ್ ಸಿ ಈಸ್ಟ್ ಬೆಂಗಾಲ್ ಸಹಾಯಕ ಕೋಚ್ ಟಾನಿ ಗ್ರಾಂಟ್ ಉಳಿದಿರುವ ಎರಡು ಪಂದ್ಯಗಳಲ್ಲಿ ತಮ್ಮ ತಂಡ ಜಯ ಗಳಿಸಲಿದೆ ಎಂದು ಹೇಳಿದ್ದಾರೆ. ಇಂಥ ಕ್ಲಬ್ ವಿರುದ್ಧ ಆಡಬೇಕಾದರೆ ಭುಜ ತಟ್ಟಿ ನಿಲ್ಲಬೇಕು.ಎಸ್ ಸಿ ಈಸ್ಟ್ ಬೆಂಗಾಲ್ ಪಗಲೇ ಆಫ್ ತಲಪುವಲ್ಲಿ ವಿಫಲವಾಗಿರಬಹುದು, ಆದರೆ ನಾರ್ಥ್ ಈಸ್ಟ್ ತಂಡವನ್ನು ಸೋಲಿಸುವ ಸಾಮರ್ಥ್ಯ ಈಸ್ಟ್ ಬೆಂಗಾಲ್ ತಂಡಕ್ಕಿದೆ."ನನ್ನ ಪ್ರಕಾರ ಅವರು ಉತ್ತಮ ತಂಡ. ಉತ್ತಮ ರೀತಿಯಲ್ಲಿಯೇ ಋತುವನ್ನು ಆರಂಭಿಸಿದರು. ಅವರ ತಂಡದಲ್ಲಿ ಯುವ ಆಟಗಾರರ ಪಡೆಯೇ ಇದೆ. ಈಗ ಅವರು ಎಲ್ಲಿದ್ದಾರೋ ಅದಕ್ಕಿಂತಲೂ ಉನ್ನತ ಸ್ಥಾನ ತಲಪುವ ಸಾಮರ್ಥ್ಯ ಅವರಿಗಿದೆ. ನಾಳೆಯ ಪಂದ್ಯ ನಿಜವಾಗಿಯೂ ಕಠಿಣ ಪರೀಕ್ಷೆ ಎನಿಸಲಿದೆ" ಎಂದರು.

ಆಡಿದ ಅನುಭವ ಹೊಂದಿಲ್ಲ

ಆಡಿದ ಅನುಭವ ಹೊಂದಿಲ್ಲ

"ಇವರಲ್ಲಿ ಅನೇಕ ಯುವಕರು ಐಎಸ್ ಎಲ್ ಆಡಿದ ಅನುಭವ ಹೊಂದಿಲ್ಲ. ಮೊದಲ ದಿನದಿಂದಲೂ ನಾವು ಮುಂದಿನ ವರ್ಷದ ಬಗ್ಗೆ ಗುರಿ ಇಟ್ಟಿದ್ದೆವು. ಹಾಗೆಯೇ ಆಯಿತು. ಪ್ರತಿಯೊಂದು ಕ್ಲಬ್ ಕೂಡ ಇದೇ ರೀತಿಯ ಗುರಿ ಹೊಂದಿರಬೇಕು" ಎಂದರು.ನಾರ್ಥ್ಈಸ್ಟ್ ತಂಡಕ್ಕೆ ಈಗ ಯಾವುದೇ ರೀತಿಯ ಹಿನ್ನಡೆ ಆಗುವಂತಿಲ್ಲ. ಖಾಲೀದ್ ಜಮೀಲ್ ಕೋಚ್ ಆದಾಗಿನಿಂದ ತಂಡ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಜೇಯವಾಗಿ ಮುನ್ನಡೆದಿದೆ. ಇದಕ್ಕೆ ಮುಖ್ಯ ಕಾರಣ ತಂಡದ ಅಟ್ಯಾಕ್ ವಿಭಾಗ.

ಎರಡು ಪಂದ್ಯಗಳಲ್ಲಿ ಜಯ

ಎರಡು ಪಂದ್ಯಗಳಲ್ಲಿ ಜಯ

ಪ್ಲೇ ಆಫ್ ಹಂತ ತಲುಪಬೇಕಾದರೆ ನಾರ್ಥ್ ಈಸ್ಟ್ ಗೆ ಮುಂದಿನ ಎರಡು ಪಂದ್ಯಗಳಲ್ಲಿ ಜಯ ಗಳಿಸಬೇಕಾಗಿದೆ. ಆದರೆ ತಂಡದ ಕೋಚ್. ಅಲಿಸನ್ ಖರ್ಸಿಂಟಿವ್ ತಂಡ ಸದ್ಯ ಈಸ್ಟ್ ಬೆಂಗಾಲ್ ವಿರುದ್ಧ ಮಾತ್ರ ಜಯದ ಗುರಿ ಹೊಂದಿದೆ ಎಂದರು."ನಾವು ನಾಳೆಯ ಪಂದ್ಯದ ಬಗ್ಗೆ ಮಾತ್ರ ಹೆಚ್ಚಿನ ಗಮನಹರಿಸಲಿದ್ದೇವೆ. ನಂತರ ನಾವು ಮುಂದಿನ ಪಂದ್ಯದ ಬಗ್ಗೆ ಯೋಚಿಸಲಿದ್ದೇವೆ. ಅದು ಕೆಬಿಎಫ್ ಸಿ ವಿರುದ್ಧ. ನಾಳೆ ನಮಗೆ ಪದರಮುಖ ಪಂದ್ಯ "ಎಂದರು." ನಾವು ಉತ್ತಮವಾಗಿ ಆಡಬೇಕು. ನಾವು ಉತ್ತಮ ರೀತಿಯಲ್ಲಿ ಡಿಫೆಂಡ್ ಮಾಡಬೇಕು. ನಾವು ಉತ್ತಮ ರೀತಿಯಲ್ಲಿ ಅಟ್ಯಾಕ್ ಮಾಡಬೇಕು. ಅವಕಾಶಗಳನ್ನು ನಿರ್ಮಿಸಿ ಅದನ್ನು 100ಪ್ರತಿಶತ ಉಪಯೋಗಿಸಿಕೊಳ್ಳಬೇಕು. 90 ನಿಮಿಷಗಳ ಕಾಲ ನಾವು ನಮ್ಮ ಸಾಮರ್ಥ್ಯ ವನ್ನು ಪ್ರದರ್ಶಿಸಿದರೆ ನಾಳೆ ಜಯ ನಮ್ಮದೇ"ಎಂದರು.

For Quick Alerts
ALLOW NOTIFICATIONS
For Daily Alerts
Story first published: Tuesday, February 23, 2021, 8:37 [IST]
Other articles published on Feb 23, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X