ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಪುಣೆಗೆ ಮೊದಲ ಜಯದ ಸಿಹಿ, ಜೆಮ್ಷೆಡ್ಪುರಕ್ಕೆ ಮೊದಲ ಸೋಲಿನ ಕಹಿ

ISL : First win for Pune, first defeat for Jamshedpur

ಪುಣೆ, ನವೆಂಬರ್ 22 : ಡಿಯಾಗೋ ಕಾರ್ಲೋಸ್ (5ನೇ ನಿಮಿಷ) ಹಾಗೂ ಮ್ಯಾಟ್ ಮಿಲ್ಸ್ (86ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಜೆಮ್ಷೆಡ್ಪುರ ತಂಡದ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯಗಳಿಸಿದ ಎಫ್ ಸಿ ಪುಣೆ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಕೊನೆಗೂ ಜಯದ ಖಾತೆ ತೆರೆದು ಸಂಭ್ರಮಿಸಿತು. ಜೆಮ್ಷೆಡ್ಪುರ ತಂಡದ ಪರ ಸುಮೀತ್ ಪಸ್ಸಿ 10ನೇ ಮಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಸಮಬಲ ಬಲದ ಹೋರಾಟ

ಮೊದಲ ಹತ್ತು ನಿಮಿಷದ ಅವಧಿಯಲ್ಲಿ ಇತ್ತಂಡಗಳು ಉತ್ತಮ ಆಟ ಪ್ರದರ್ಶಿಸಿದುದರ ಪರಿಣಾಮ, ಆ ಅವಧಿಯಲ್ಲಿಯೇ ಪಂದ್ಯ 1-1ರಲ್ಲೇ ಸಮಬಲ ಸಾಧಿಸಿದವು. ನಂತರದ 20 ನಿಮಿಷಗಳ ಆಟದಲ್ಲಿ ಯಾವುದೇ ಗೋಲಾಗದ ಕಾರಣ ಪ್ರಥಮಾರ್ಧ 1-1ರಲ್ಲಿ ಸಮಬಲಗೊಂಡಿತು.

ISL : First win for Pune, first defeat for Jamshedpur

ಆರಂಭದಲ್ಲೇ ಮುನ್ನಡೆ ಕಂಡ ಪುಣೆ ತಂಡದ ಸಂಭ್ರಮ ಕೇವಲ ಐದು ನಿಮಿಷಕ್ಕೆ ಸೀಮಿತವಾಯಿತು. 10ನೇ ನಿಮಿಷದಲ್ಲಿ ಕಾರ್ಲೋಸ್ ಕಾಲ್ವೋ ನೀಡಿದ ಪಾಸ್ ಮೂಲಕ ಸುಮೀತ್ ಪಸ್ಸಿ ಗಳಿಸಿದ ಗೋಲಿನಿಂದ ಪಂದ್ಯ ಸಮಬಲಗೊಂಡಿತು. ಪುಣೆ ಸಿಟಿಯ ಇಬ್ಬರು ಡಿಫೆಂಡರ್‌ಗಳನ್ನು ತಪ್ಪಿಸಿದ ಕಾಲ್ವೋ ನೀಡಿದ ಪಾಸ್ ಸುಮೀತ್ ಅವರಿಗೆ ಗೋಲು ಗಳಿಸಲು ಸುಲಭವಾಯಿತು. ಪೆನಾಲ್ಟಿ ವಲಯದಲ್ಲೇ ಇದ್ದ ಸುಮೀತ್ ಯಾವುದೇ ಪ್ರಮಾದವೆಸಗದೆ ಚೆಂಡನ್ನು ನೆಟ್‌ಗೆ ತಲುಪಿಸುವಲ್ಲಿ ಯಶಸ್ವಿಯಾದರು. ಪುಣೆಯ ಗೋಲ್‌ಕೀಪರ್ ಅವರ ತಡೆಯುವ ಪ್ರಯತ್ನ ಯಶಸ್ಸು ಕೊಡಲಿಲ್ಲ.

ಐಎಸ್‌ಎಲ್‌ 2018: ಅಗ್ರ ಸ್ಥಾನಕ್ಕಾಗಿ ಗೋವಾ, ಬೆಂಗಳೂರು ನಡುವೆ ಫೈಟ್! ಐಎಸ್‌ಎಲ್‌ 2018: ಅಗ್ರ ಸ್ಥಾನಕ್ಕಾಗಿ ಗೋವಾ, ಬೆಂಗಳೂರು ನಡುವೆ ಫೈಟ್!

ಪುಣೆ ದಿಟ್ಟ ಆರಂಭ

ಪಂದ್ಯ ಆರಂಭಗೊಂಡ 5ನೇ ನಿಮಿಷದಲ್ಲಿ ಡಿಯಾಗೋ ಕಾರ್ಲೋಸ್ ಗಳಿಸಿದ ಗೋಲಿನಿಂದ ಅತಿಥೇಯ ತಂಡ ಮುನ್ನಡೆ ಕಂಡುಕೊಂಡಿತು. ಮೂರು ಪಂದ್ಯಗಳಿಂದ ನಿಷೇಧಕ್ಕೊಳಗಾಗಿದ್ದ ಕಾರ್ಲೋಸ್ ತಂಡಕ್ಕೆ ಅಗತ್ಯವಿರುವ ಗೋಲಿನ ಮೂಲಕ ಪ್ರವೇಶ ಕಂಡರು. ಮಧ್ಯ ಭಾಗದಲ್ಲಿ ಮಾರ್ಸೆಲೋ ಪೆರೆರಾ ನೀಡಿದ ಪಾಸ್‌ಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ ಒಂಟಿಯಾಗಿಯೇ ಚೆಂಡನ್ನು ಮುನ್ನಡೆಸಿದರು. ಜೆಮ್ಷೆಡ್ಪುರ ಗೋಲ್‌ಕೀಪರ್ ಸುಬ್ರತಾ ಪಾಲ್ ಉತ್ತಮ ರೀತಿಯಲ್ಲಿ ಜಿಗಿದು ಚೆಂಡನ್ನು ತಡೆಯಲು ಯತ್ನಿಸಿದರೂ ಕಾರ್ಲೋಸ್ ತುಳಿದ ಚೆಂಡು ವೇಗವಾಗಿ ನೆಟ್ ಸೇರಿತ್ತು. ಮನೆಯಂಗಣದಲ್ಲಿ ಜಯ ಗಳಿಸಲು ಪುಣೆ ದಿಟ್ಟ ಹೆಜ್ಜೆಯನ್ನಿಟ್ಟಿತು.

ISL : First win for Pune, first defeat for Jamshedpur

ಎಮಿಲಿಯಾನೊ ಅಲ್ಫಾರೋ ಎಟಿಕೆ ತಂಡವನ್ನು ಸೇರಿಕೊಂಡಿದ್ದು ಪುಣೆ ತಂಡದ ಬಲವನ್ನು ಮತ್ತಷ್ಟು ದುರ್ಬಲಗೊಳಿಸಿದೆ. ಈಗಾಗಲೇ ಋತುವಿನಲ್ಲಿ ಮೊದಲ ಜಯ ಗಳಿಸುವಲ್ಲಿ ವಿಫಲವಾಗಿರುವ ತಂಡ ಉತ್ತಮ ಫಾರ್ವರ್ಡ್ ಆಟಗಾರನನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಈ ಋತುವಿನಲ್ಲಿ ಕೇವಲ ಒಂದು ಗೋಲು ಗಳಿಸಿದರೂ ಉರುಗ್ವೆ ಮೂಲದ ಆಟಗಾರ ಪುಣೆ ಪರ 10 ಗೋಲುಗಳನ್ನು ಗಳಿಸಿ ತಂಡದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರೆನಿಸಿದ್ದಾರೆ.

ಐಎಸ್‌ಎಲ್‌ 2018: ಜಿಕೋಗೆ ಸಾಧ್ಯವಾಗದ್ದನ್ನು ಲೊಬೆರಾ ಸಾಧಿಸ್ತಾರಾ?! ಐಎಸ್‌ಎಲ್‌ 2018: ಜಿಕೋಗೆ ಸಾಧ್ಯವಾಗದ್ದನ್ನು ಲೊಬೆರಾ ಸಾಧಿಸ್ತಾರಾ?!

ಪುಣೆ ತಂಡ 7 ಪಂದ್ಯಗಳಿಂದ ಆರು ಗೋಲು ಗಳಿಸಿದೆ. ಇಯಾನ್ ಹ್ಯೂಮೆ ತಂಡವನ್ನು ಸೇರಿಕೊಂಡಿದ್ದು, ಐಎಸ್‌ಎಲ್‌ನಲ್ಲಿ ಅತಿ ಹೆಚ್ಚು (28) ಗೋಲುಗಳನ್ನು ಗಳಿಸಿರುವ ಹ್ಯೂಮೆ ತಂಡದ ಬಲವನ್ನು ಹೆಚ್ಚಿಸಿದ್ದಾರೆ. ಐಎಸ್‌ಎಲ್‌ನ ಎಲ್ಲಾ ಋತುವಿನಲ್ಲೂ ಆಡಿದ ಮೊದಲ ವಿದೇಶಿ ಆಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಆದರೆ ತಂಡವನ್ನು ಪ್ರಕಟಿಸುವಾಗ ಅವರು ಬದಲಿ ಆಟಗಾರರ ಪಟ್ಟಿಯಲ್ಲಿರುವುದು ಅಚ್ಚರಿಯನ್ನುಂಟು ಮಾಡಿತ್ತು.

Story first published: Thursday, November 22, 2018, 11:45 [IST]
Other articles published on Nov 22, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X