ಐಎಸ್ಎಲ್ : ಪುಣೆ ಸದೆಬಡಿದ ಬೆಂಗಳೂರು ಎಫ್ ಸಿ

Posted By:

ಬೆಂಗಳೂರು, ಡಿಸೆಂಬರ್ 15: ಇಲ್ಲಿನ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣ ಮೈದಾನದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಪಂದ್ಯದಲ್ಲಿ ಪುಣೆ ಎಫ್ ಸಿ ತಂಡವನ್ನು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಸುಲಭವಾಗಿ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಬಿಎಫ್ ಸಿಯ ಮುಂಪಡೆ ಆಟಗಾರ ಮಿಕು ಆಟಕ್ಕೆ ಪುಣೆಯ ಪ್ರೇಕ್ಷಕರು ಮನ ಸೋತರು. ಎಫ್‌ಸಿ ಪುಣೆ ಸಿಟಿ ತಂಡದ ವಿರುದ್ಧ ಬಿಎಫ್‌ಸಿ 3-1 ಗೋಲುಗಳಿಂದ ಜಯ ದಾಖಲಿಸಿದೆ.

ISL: Miku stars as Bengaluru FC beat FC Pune City to Top the table

35ನೇ ನಿಮಿಷದಲ್ಲಿ ಇಸಾಕ್ ವನ್‌ಮೌಸಲ್ಮಾ ಅವರ ನೆರವಿನಿಂದ ಆದಿಲ್ ಖಾನ್‌ ಗೋಲು ಗಳಿಸಿ ಪುಣೆಗೆ ಮುನ್ನಡೆ ತಂದುಕೊಟ್ಟರು.

51ನೇ ನಿಮಿಷದಲ್ಲಿ ಸುನಿಲ್ ಚೆಟ್ರಿ ಗಳಿಸುವ ಪ್ರಯತ್ನ ವಿಫಲವಾದರೂ ಅಂತಿಮ ಕ್ಷಣದಲ್ಲಿ ಗೋಲು ಗಳಿಸಿದರು.


ಇದಕ್ಕೂ ಮುನ್ನ ವೆನೆಜುವೆಲಾ ಮೂಲದ ಬಿಎಫ್ ಸಿ ಆಟಗಾರ ಮಿಕು 64 ಹಾಗೂ 78ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

ಈ ಗೆಲುವಿನೊಂದಿಗೆ ಬೆಂಗಳೂರು ಫುಟ್ಬಾಲ್ ಕ್ಲಬ್ ಐದು ಪಂದ್ಯಗಳಿಂದ 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Story first published: Friday, December 15, 2017, 10:46 [IST]
Other articles published on Dec 15, 2017
Please Wait while comments are loading...
POLLS