ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್ಎಲ್ 2019: ಪ್ಲೇ ಆಫ್ ಸ್ಥಾನಕ್ಕಾಗಿ ಕದನ ಕುತೂಹಲ

By ಐಎಸ್ಎಲ್ ಮಾಧ್ಯಮ

ಮುಂಬೈ, ಫೆಬ್ರವರಿ 12: ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಈಗ ಪ್ಲೇ ಆಫ್ ತಲಪುವ ಹಂತಕ್ಕಾಗಿ ತೀವ್ರ ಹೋರಾಟ ಆರಂಭಗೊಂಡಿದೆ. ಮುಂಬೈಯಲ್ಲಿ ಬುಧವಾರದಂದು ನಡೆಯಲಿರುವ ಪಂದ್ಯದಲ್ಲಿ ಆತಿಥೇಯ ಮುಂಬೈ ಸಿಟಿ ಎಫ್ ಸಿ ಹಾಗೂ ನಾರ್ತ್ ಈಸ್ಟ್ ಯುನೈಟೆಡ್ ತಂಡಗಳ ನಡುವೆ ಹೋರಾಟ ನಡೆಯಲಿದೆ.

2019ರ ಏಷ್ಯಾಕಪ್‌ಗಾಗಿ ತಂಡಗಳಿಗೆ ವಿರಾಮ ಸಿಗುವ ಮೊದಲು ಉತ್ತಮ ಪೈಪೋಟಿ ನೀಡಿದ್ದವು. ಆದರೆ, ಕೆಲವು ತಂಡಗಳು ಚೇತರಿಸಿಕೊಳ್ಳುವಲ್ಲಿ ವಿಫಲವಾದವು. ಗೋವಾ ಹಾಗೂ ಜೆಮ್ಷೆಡ್ಪುರ ವಿರುದ್ಧ ಮುಂಬೈ ಸೋಲಿನ ಆಘಾತ ಕಂಡಿತ್ತು. ಕೆಳ ಹಂತದಲ್ಲಿರುವ ತಂಡಗಳು ಉಳಿದಿರುವ ಪಂದ್ಯಗಳಲ್ಲಿ ನಿರಂತರ ಜಯ ಗಳಿಸಿದರೆ, ಜಾರ್ಜ್ ಕೋಸ್ಟಾ ಪಡೆ ಹಾದಿ ಕಠಿಣವಾಗುವುದು ಸ್ಪಷ್ಟ. ಮುಂಬೈ ಈಗ 27 ಅಂಕಗಳನ್ನು ಗಳಿಸಿ ಎರಡನೇ ಸ್ಥಾನದಲ್ಲಿದೆ. ಆದರೆ ನಾರ್ತ್‌ಈಸ್ಟ್ ತಂಡ ಮುಂಬೈಗಿಂತ ಕೇವಲ ಮೂರು ಅಂಕ ಹಿಂದೆ ಇದ್ದು, ನಾಲ್ಕನೇ ಸ್ಥಾನದಲ್ಲಿದೆ.

ಎಸ್ಎಲ್ಎಲ್ 2019: ಗೋಲಿನ ಗುರಿ ಕಂಡ ಸ್ಟಾರ್ ಆಟಗಾರ ಜೆಜೆ ಎಸ್ಎಲ್ಎಲ್ 2019: ಗೋಲಿನ ಗುರಿ ಕಂಡ ಸ್ಟಾರ್ ಆಟಗಾರ ಜೆಜೆ

'ನಾವು ಯಾವ ರೀತಿಯಲ್ಲಿ ಆಡುತ್ತಿದ್ದೇವೋ ಅದೇ ರೀತಿಯಲ್ಲಿ ಆಟವನ್ನು ಮುಂದುವರಿಸಲಿದ್ದೇವೆ, ನಾರ್ತ ಈಸ್ಟ್ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಅದೇ ರೀತಿ ನಾರ್ತ್ ಈಸ್ಟ್ ಆಕ್ರಮಣಕಾರಿ ಆಟವಾಡುವ ತಂಡ. ಕ್ಲಬ್‌ಗಳ ವಿಷಯದಲ್ಲಿ ಬಂದಾಗ ಭಾರತದಲ್ಲೇ ಉತ್ತಮ ಸಂಘಟನೆ ಎನಿಸಿದೆ. ನಾವು ಉತ್ತಮವಾಗಿ ಆಡಬೇಕಾಗಿದೆ. ನಾವು ಮೂರು ಅಂಕಗಳೊಂದಿಗೆ ಪಂದ್ಯವನ್ನು ಮುಗಿಸಬೇಕಾಗಿದೆ,' ಎಂದು ಕೋಸ್ಟಾ ಹೇಳಿದ್ದಾರೆ. ನಾಲ್ಕನೇ ಯಲ್ಲೋ ಕಾರ್ಡ್ ಪಡೆದ ಲೂಸಿಯಾನ್ ಗೊಯಾನ್ ನಾಳೆಯ ಪಂದ್ಯದಲ್ಲಿ ಆಡುವುದಿಲ್ಲ.

ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿವೆ

ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿವೆ

ಮುಂಬೈ ತಂಡಕ್ಕೆ ಇನ್ನು ಮೂರು ಪಂದ್ಯಗಳು ಬಾಕಿ ಉಳಿದಿವೆ. ನಾರ್ತ್ ಈಸ್ಟ್ ವಿರುದ್ಧ ಗೆಲ್ಲುವ ಮೂಲಕ ಮುಂಬೈ ಅಂತಿಮ ನಾಲ್ಕರ ಹಂತ ತಲುಪಲಿದೆ. ನಾರ್ತ್ ಈಸ್ಟ್ ವಿರುದ್ಧ ಆಡುವ ಮೂಲಕ ಮುಂಬೈ ಮನೆಯಂಗಣದಲ್ಲಿ ಋತುವಿನ ಕೊನೆಯ ಪಂದ್ಯವನ್ನಾಡಲಿದೆ. ಎಟಿಕೆ ಹಾಗೂ ಪುಣೆ ತಂಡದ ವಿರುದ್ಧ ಉಳಿದಿರುವ ಎರಡು ಪಂದ್ಯಗಳನ್ನು ಆಡುವುದಕ್ಕೆ ಮೊದಲು ಮುಂಬೈ ಆದಷ್ಟು ಪಂದ್ಯಗಳನ್ನು ಗಳಿಸಿ ಸುಸ್ಥಿತಿ ತಲಪುವ ಗುರಿ ಹೊಂದಿದೆ.

ನಾರ್ತ್ ಈಸ್ಟ್ ಉತ್ತಮ ಆರಂಭ

ನಾರ್ತ್ ಈಸ್ಟ್ ಉತ್ತಮ ಆರಂಭ

ನೂತನ ಕೋಚ್‌ಎಲ್ಕೋ ಷೆಟೋರಿ ಅವರ ತರಬೇತಿಯಲ್ಲಿ ಪಳಗಿದ ನಾರ್ತ ಈಸ್ಟ್ ಈ ಬಾರಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಉತ್ತಮ ಆರಂಭ ಕಂಡಿತ್ತು. ಆದರೆ ಇತ್ತೀಚಿನ ಪಂದ್ಯಗಳಲ್ಲಿ ತಂಡದ ಯಶಸ್ಸು ಉತ್ತಮವಾಗಿರಲಿಲ್ಲ. ಕಳೆದ ಏಳು ಪಂದ್ಯಗಳಲ್ಲಿ ತಂಡ ಗೆದ್ದಿರುವುದು ಕೇವಲ ಒಂದು ಪಂದ್ಯದಲ್ಲಿ, ಷೆಟೋರಿ ಪಡೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರಬಹುದು, ಆದರೆ ಜೆಮ್ಷೆಡ್ಪುರರ ಹಾಗೂ ಎಟಿಕೆ ತಂಡಗಳು ಕೂಡ ಈ ಸ್ಥಾನಕ್ಕಾಗಿ ಸ್ಪರ್ಧೆಯಲ್ಲಿವೆ. ಮೂರು ಪಂದ್ಯಗಳು ಬಾಕಿ ಉಳಿದಿರುವ ಕಾರಣ ಪ್ಲೇ ಆಫ್ ತಂಡಗಳನ್ನು ಸುಲಭವಾಗಿ ನಿರ್ಧರಿಸಲಾಗದು.

ನೂತನ ಕೋಚ್‌ಎಲ್ಕೋ ಷೆಟೋರಿ

ನೂತನ ಕೋಚ್‌ಎಲ್ಕೋ ಷೆಟೋರಿ

‘ಇಲ್ಲಿ ಗೆದ್ದರೆ ಮಾತ್ರ ಮುನ್ನಡೆ. ಈ ಬಗ್ಗೆ ನಮ್ಮ ಆಟಗಾರರಿಗೆ ತಿಳಿಸಿರುವೆ. ಈ ಹಂತವೆಂಬುದು ಕ್ಷಣಾರ್ಧದಲ್ಲೇ ಮುಗಿದುಹೋಗುವ ಹಂತ. ಋತುವಿನ ಆರಂಭ‘ದಲ್ಲಿ ನೀವಿದ್ದ ರೀತಿಗೂ ಈಗಿರುವುದಕ್ಕೂ ಸಾಕಷ್ಟು ಭಿನ್ನತೆ ಇದೆ. ಇಲ್ಲಿ ತಪ್ಪುಗಳನ್ನು ಮಾಡುವಂತಿಲ್ಲ. ಏಕೆಂದರೆ ಇಲ್ಲಿ ತಿದ್ದಿಕೊಳ್ಳಲು ಸಮಯವಿಲ್ಲ. ಜೆಮ್ಷೆಡ್ಪುರ ಹತ್ತಿರದಲ್ಲಿದೆ, ಕೇರಳ ಸ್ಪಲ್ಪ ದೂರದಲ್ಲಿದೆ, ಹೇಗೆ ಗೆಲ್ಲುತ್ತೇವೆ ಎಂಬುದು ಮುಖ್ಯವಲ್ಲ, ನಮಗೆ ಮೂರು ಅಂಕ ಅಗತ್ಯವಿದೆ,‘ ಎಂದು ಷೆಟೋರಿ ಹೇಳಿದ್ದಾರೆ.

ನಾರ್ತ್ ಈಸ್ಟ್ ಸ್ಪಲ್ಪ ಮಟ್ಟಿಗೆ ದುರ್ಬಲ ತಂಡ

ನಾರ್ತ್ ಈಸ್ಟ್ ಸ್ಪಲ್ಪ ಮಟ್ಟಿಗೆ ದುರ್ಬಲ ತಂಡ

ಪ್ಲೇ ಆಫ್ ತಲುಪಲು ಹೋರಾಟ ನಡೆಸುತ್ತಿರುವ ಅಂತಿಮ ಐದು ತಂಡಗಳಲ್ಲಿ ನಾರ್ತ್ ಈಸ್ಟ್ ಸ್ಪಲ್ಪ ಮಟ್ಟಿಗೆ ದುರ್ಬಲ ತಂಡವೆನಿಸಿದೆ. ಏಕೆಂದರೆ 15 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 19 ಗೋಲುಗಳು. ಬಾರ್ತಲೋಮ್ಯೊ ಹಾಗೂ ಗಲ್ಲೆಗೋ ಇದುವರೆಗೂ ದಾಖಲಾಗಿರುವ 19 ಗೋಲುಗಲಲ್ಲಿ 15 ಗೋಲುಗಳನ್ನು ಹಂಚಿಕೊಂಡಿದ್ದಾರೆ.

Story first published: Tuesday, February 12, 2019, 19:08 [IST]
Other articles published on Feb 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X