ಐಎಸ್‌ಎಲ್: ಪ್ಲೇ ಆಫ್ ಕೊನೆಯ ಸ್ಥಾನಕ್ಕಾಗಿ ನೇರ ಶೂಟೌಟ್

By Isl Media

ಗೋವಾ: ನೈಜ ಪ್ಲೇ ಆಫ್ ಗೆ ಮುನ್ನ ಮಿನಿ ಪ್ಲೇ ಆಫ್. ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಭಾನುವಾರ ನಡೆಯಲಿರುವ ಪಂದ್ಯವು ಹೈದರಾಬಾದ್ ಹಾಗೂ ಗೋವಾ ಎಫ್ ಸಿ ತಂಡಗಳ ನಡುವಿನದ್ದಾಗಿದೆ. ಇದು ಈ ಬಾರಿಯ ಐಎಸ್ ಎಲ್ ನಲ್ಲೇ ಅತ್ಯಂತ ನಿರೀಕ್ಷೆಯ ಪಂದ್ಯ ಎಂದರೆ ತಪ್ಪಾಗಲಾರದು. 19 ಪಂದ್ಯಗಳ ನಂತರ ಉಳಿದಿರುವ ಈ 90 ನಿಮಿಷಗಳ ಪಂದ್ಯವು ಎರಡು ತಂಡಗಳ ಭವಿಷ್ಯವನ್ನು ತೀರ್ಮಾನಿಸಲಿದೆ.

ಗೋವಾ ತಂಡಕ್ಕೆ ಕೇವಲ ಒಂದು ಅಂಕ ದೊರೆತರೂ ಅಂತಿಮ ನಾಲ್ಕರ ಹಂತ ತಲುಪಲಿದೆ. ಆದರೆ ಕೋಚ್ ಜುವಾನ್ ಫೆರಾಂಡೋ ಅವರು ತಮ್ಮ ತಂಡವು ಕೇವಲ ಒಂದು ಅಂಕಕ್ಕಾಗಿ ಆಡುವುದಿಲ್ಲ ಎಂದಿದ್ದಾರೆ. "ಪ್ರತಿಯೊಂದು ಪಂದ್ಯದಲ್ಲೂ ಒತ್ತಡವಿರುತ್ತದೆ. ನಮ್ಮ ಕ್ಲಬ್ ನ ಮನಸ್ಥಿತಿ ಪ್ರತಿಯೊಂದು ಪಂದ್ಯದಲ್ಲೂ ಮೂರು ಅಂಕಗಳನ್ನು ಗೆಲ್ಲುವುದು. ಖಂಡಿತವಾಗಿಯೂ ನಮಗೆ ನಾಳೆ ಮೂರು ಅಂಕಗಳು ಬೇಕು. ಏಕೆಂದರೆ ಈ ಕ್ಲಬ್ ನ ಮನಸ್ಥಿತಿ ಉನ್ನತವಾದುದು,' ಎಂದಿದ್ದಾರೆ.

ಅಪಾಯಕಾರಿ ತಂಡ

ಅಪಾಯಕಾರಿ ತಂಡ

ಗೋವಾ ತಂಡವೆಂದರೆ ಲೀಗ್ ನಲ್ಲಿ ಅಪಾಯಕಾರಿ ತಂಡ, ಅವರ ಆಕ್ರಮಣಕಾರಿ ಆಟ ರೋಚಕ ಕ್ಷದಣಲ್ಲೂ ಅಂಕಗಳನ್ನು ತಂದುಕೊಟ್ಟಿದೆ. ಆದರೆ ಡಿಫೆನ್ಸ್ ವಿಭಾಗ ನಿರೀಕ್ಷಿತ ಮಟ್ಟದಲ್ಲಿಲ್ಲ. ಏಕೆಂದರೆ ತಂಡ 23 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿದೆ.

ಗೋವಾ ತಂಡ 12 ಪಂದ್ಯಗಳಲ್ಲಿ ಸೋಲರಿಯದೆ ಬಂದಿದೆ. ಗೋಲು ಗಳಿಸುವುದು ಫೆರಾಂಡ್ ಪಡೆಗೆ ಕಷ್ಟವಲ್ಲ. ಕೊನೆಯ ಕ್ಷಣದವರೆಗೂ ಹೋರಾಟ ನೀಡುವ ಗೋವಾ ಅಮೂಲ್ಯ ಅಂಕಗಳನ್ನು ಗಳಿಸಿತ್ತು. ಅದೇ ಯೋಜನೆಯನ್ನು ಅಳವಡಿಸುವ ಮತ್ತು ಕಾರ್ಯರೂಪಕ್ಕೆ ತರುವ ಯೋಜನೆಯನ್ನು ಫೆರಾಂಡೋ ಹೊಂದಿದ್ದಾರೆ.

ಆಕ್ರಮಣಕಾರಿ ಆಟವಾಡುತ್ತೇವೆ

ಆಕ್ರಮಣಕಾರಿ ಆಟವಾಡುತ್ತೇವೆ

"ನಾವು ಯಾವಾಗಲೂ ಆಕ್ರಮಣಕಾರಿ ಆಟವಾಡುತ್ತೇವೆ. ಏಕೆಂದರೆ ನಮಗೆ ಪಂದ್ಯ ಗೆಲ್ಲಬೇಕಾಗಿದೆ. ನಾವು 1-0 ಗೋಲಿನಿಂದ ಗೆಲ್ಲುವುದಾದರೂ ಅದೇ ಯೋಜನೆಯೊಂದಿಗೆ ಅಂಗಣಕ್ಕಿಳಿಯತ್ತೇವೆ. ಅವರು ನಮ್ಮ ಮುಂದೆ ಆರಂಭದಲ್ಲೇ ಗೋಲು ಗಳಿಸಿದರೆ ನಾವು 1-1 ಸಾಧಿಸಲು ಹೋರಾಡುತ್ತೇವೆ. ಮತ್ತೆ ಎರಡನೇ ಗೋಲಿನ ಕಡೆಗೆ ಗುರಿ ಇಡುತ್ತೇವೆ, ನಮ್ಮ ಮನಸ್ಥಿತಿಯೇ ಹಾಗೆ. ಇದು ನನಗೆ ಖುಷಿಕೊಟ್ಟಿದೆ. ಇದರಿಂದ ಈ ತಂಡವನ್ನು ಸುಧಾರಿಸಲು ಸಾಧ್ಯವಾಯಿತು," ಎಂದರು.

ಬೇರೇನೂ ಬೇಕಾಗಿಲ್ಲ

ಬೇರೇನೂ ಬೇಕಾಗಿಲ್ಲ

ಗೋವಾ ವಿರುದ್ಧ ಹೈದರಾಬಾದ್ ಗೆ ಜಯ ಹೊರತು ಬೇರೇನೂ ಬೇಕಾಗಿಲ್ಲ. ಸ್ಪರ್ಧೆಯಲ್ಲಿ ಉಳಿಯಬೇಕಾದರೆ ಜಯ ಬೇಕು. ನಾರ್ಥ್ ಈಸ್ಟ್ ಯನೈಟೆಡ್ ಎಫ್ ಸಿ ಸೋತರೆ ಅಥವಾ ಡ್ರಾ ಮಾಡಿಕೊಂಡರೆ ತಮಗೆ ಲಾಭವಾಗಬಹುದು ಎಂದು ಕೋಚ್ ಮ್ಯಾನ್ವೆಲ್ ಮಾರ್ಕ್ವೆಜ್ ಊಹಿಸಿದ್ದರು, ಆದರೆ ಕೇರಳ ಬ್ಲಾಸ್ಟರ್ ಸೋಲು ಅನುಭವಿಸುವ ಮೂಲಕ ಈಗ ಹೈದರಾಬಾದ್ ಗೆಲ್ಲಲೇಬೇಕಾಗಿದೆ.

"ನಾರ್ಥ್ ಈಸ್ಟ್ ತಂಡ ಎರಡೂ ಪಂದ್ಯಗಳನ್ನು ಸೋತಿರುತ್ತಿದ್ದರೆ ನಮ್ಮ ಹಾದಿ ಸುಗಮವಾಗುತ್ತಿತ್ತು. ಈ ನಾವು ಮಂಬೈ ಸಿಟಿ ಮತ್ತು ಎಟಿಕೆಎಂಬಿ ಜತೆಯಲ್ಲಿ ನಾರ್ಥ್ ಈಸ್ಟ್ ಗೂ ಅಭಿನಂದನೆ ಸಲ್ಲಸಬೇಕಾಗಿದೆ.," ಎಂದರು.

"ನಮ್ಮ ತಂಡದ ಆಟಗಾರರು ಉಲ್ಲಾಸದಲ್ಲಿದ್ದಾರೆ. ಮೊದಲ ದಿನದಿಂದ ಹಿಡಿದು ಇಂದಿನ ವರೆಗೂ ಗೆಲ್ಲುವ ತಂಡ ಮಾತ್ರ ಸ್ಪರ್ಧೆಯಲ್ಲಿ ಉಳಿಯುತ್ತದೆ. ಇದು ಹೆಚ್ಚು ಕಡಿಮೆ ಫೈನಲ್ ಇದ್ದಂತೆ. ಇದು ನಮ್ಮ ಪಾಲಿಗೆ ಕಠಿಣ ಪಂದ್ಯ," ಎಂದು ಮಾರ್ಕ್ವೇಜ್ ಹೇಳಿದರು.

For Quick Alerts
ALLOW NOTIFICATIONS
For Daily Alerts
Story first published: Saturday, February 27, 2021, 21:42 [IST]
Other articles published on Feb 27, 2021
+ ಇನ್ನಷ್ಟು
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X