ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಐಎಸ್‌ಎಲ್ 2019: ಅಜೇಯ ಗೋವಾ ಎಫ್‌ಸಿಗೆ ಜೇಮ್ಶೆಡ್ಪುರ ಎಫ್‌ಸಿ ಸವಾಲು

By Isl Media
ISL: With two suspensions, unbeaten Goa take on Jamshedpur

ಗೋವಾ, ನವೆಂಬರ್ 26: ಇಲ್ಲಿನ ಜವಾಹರ ಲಾಲ್ ನೆಹರು ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಜೇಮ್ಶೆಡ್ಪುರ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಎಫ್ ಸಿ ಗೋವಾ ಮುನ್ನಡೆಯಲ್ಲಿರುವ ತಂಡಗಳ ನಡುವಿನ ಅಂತರವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಗೆಲ್ಲಲೇಬೇಕಾದ ಸ್ಥಿತಿಯಲ್ಲಿದೆ.

ಕ್ರಿಕೆಟ್ ಅಂಗಳದಲ್ಲಿ ಮತ್ತೆ ಸದ್ದು ಮಾಡಿದ ಜನಾಂಗೀಯ ನಿಂದನೆಕ್ರಿಕೆಟ್ ಅಂಗಳದಲ್ಲಿ ಮತ್ತೆ ಸದ್ದು ಮಾಡಿದ ಜನಾಂಗೀಯ ನಿಂದನೆ

ಲೀಗ್ ನಲ್ಲಿ ಇದುವರೆಗೂ ಸೋಲು ಕಂಡಿರದ ಗೋವಾ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎಂಟು ಅಂಕಗಳನ್ನು ಗಳಿಸಿದೆ. ಇಲ್ಲಿ ಜಯ ಗಳಿಸಿದರೆ ಗೋವಾ ಇಂಡಿಯನ್ ಸೂಪರ್ ಲೀಗ್ ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲಿದೆ. ಆದರೆ ತಂಡ ಇದುವರೆಗೂ ಸತತ ಜಯ ಕಂಡಿಲ್ಲವೆಂಬ ಚಿಂತೆ ಕೋಚ್ ಸರ್ಗಿಯೊ ಲೊಬೆರಾ ಅವರನ್ನು ಕಾಡಿದೆ. ಗೋವಾ ತಂಡ ಒಂದು ಜಯ ಹಾಗೂ ಡ್ರಾ ಸಾಧಿಸಿರುವುದು ಸ್ಪೇನ್ ಮೂಲದ ಕೋಚ್ ಗೆ ಯೋಚಿಸುವ ವಿಷಯವಾಗಿದೆ.

ಐಎಸ್‌ಎಲ್ 2019: ಸೂಪರ್ ಫುಟ್ಬಾಲ್, ಚೆನ್ನೈಯಿನ್‌ಗೆ ಸೂಪರ್ ಜಯಐಎಸ್‌ಎಲ್ 2019: ಸೂಪರ್ ಫುಟ್ಬಾಲ್, ಚೆನ್ನೈಯಿನ್‌ಗೆ ಸೂಪರ್ ಜಯ

ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧದ ಪಂದ್ಯದ ವೇಳೆ ಜಗಳವಾಡಿದ ಕಾರಣ ಗೋವಾ ತಂಡದ ಹ್ಯೂಗೋ ಬೌಮೌಸ್ ಹಾಗೂ ಸೈಮಿನ್ಲೆನ್ ಅವರು ಅಮಾನತುಗೊಂಡಿರುವುದು ತಂಡದ ಶಕ್ತಿ ಕುಂದುವಂತೆ ಮಾಡಿದೆ.

''ವೈಯಕ್ತಿಕ ಬಲಿಷ್ಠ ಆಟಗಾರರಿಂದ ಕೂಡಿದ ತಂಡ ನಮ್ಮದಾಗಿದೆ. ನಾಳೆ ಇದನ್ನು ಪ್ರಕಟಿಸಲು ಉತ್ತಮ ಅವಕಾಶ, ಇದು ನಮಗೆ ಅಷ್ಟು ಸುಲಭವಾದುದಲ್ಲ, ಆದರೆ ಕೋಚ್ ಆಗಿ ನಾನು ಪರಿಸ್ಥಿತಿಯನ್ನು ಬದಲಾಯಿಸಲು ಯತ್ನಿಸಬಹುದು,'' ಎಂದು ಕೋಚ್ ಲೊಬೆರಾ ಹೇಳಿದ್ದಾರೆ.

ISL: With two suspensions, unbeaten Goa take on Jamshedpur

ಈಗ ಗೋವಾ ತಂಡ ಅಹ್ಮದ್ ಜಹೌಹ್ ಮತ್ತು ಲೆನ್ನಿ ರಾಡ್ರಿಗಸ್ ಅವರನ್ನು ಸೆಂಟರ್ ವಿಭಾಗದಲ್ಲಿ ಹೆಚ್ಚು ಆಧರಿಸಿದೆ. ಬ್ರಾಂಡನ್ ಫೆರ್ನಾಂಡಿಸ್ ಮತ್ತು ಜಾಕಿಚಾಂದ್ ಸಿಂಗ್ ಎದುರಾಳಿ ತಂಡದ ನಿಯಂತ್ರಣದ ಶಕ್ತಿಯಾಗಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಎಡು ಗಾರ್ಸಿಯಾ ಆಗಮಿಸಿರುವುದು ತಂಡದ ಬಲ ಹೆಚ್ಚಿಸಿದೆ. ಈಗಾಗಲೇ ಮೂರು ಗೋಲು ಗಳಿಸಿರುವ ಫರಾನ್ ಕೊರೊಮಿನಾಸ್ ತಂಡಕ್ಕೆ ಮತ್ತೊಂದು ಶಕ್ತಿ.

ಪಾಕ್ ಕ್ರಿಕೆಟಿಗರಿಂದ ಹಣ ಪಡೆಯಲು ನಿರಾಕರಿಸಿದ ಭಾರತದ ಟಾಕ್ಸಿ ಚಾಲಕ!ಪಾಕ್ ಕ್ರಿಕೆಟಿಗರಿಂದ ಹಣ ಪಡೆಯಲು ನಿರಾಕರಿಸಿದ ಭಾರತದ ಟಾಕ್ಸಿ ಚಾಲಕ!

''ನನ್ನ ಪ್ರಕಾರ ಜೇಮ್ಶೆಡ್ಪುರ ಬಲಿಷ್ಠ ತಂಡ, ಉತ್ತಮ ಡಿಫೆಂಡರ್ಸ್ ಮತ್ತು ದಾಳಿಕಾರರಿಂದ ಕೂಡಿದೆ. ದಾಳಿ ಮತ್ತು ರಕ್ಷಣೆ ವಿಭಾಗಗಳ ನಡುವೆ ಉತ್ತಮ ಹೊಂದಾಣಿಕೆ ಇದೆ. ಆದ್ದರಿಂದ ನಮಗೆ ಕಠಿಣ ಸವಾಲು ಎದುರಾಗುವುದು ಸಹಜ,'' ಎಂದು ಲೊಬೆರಾ ಹೇಳಿದ್ದಾರೆ.

ಗೋವಾ ವಿರುದ್ಧ ಸ್ಪರ್ಧಿಸುತ್ತಿರುವ ಜೇಮ್ಶೆಡ್ಪುರ ತಂಡದ ಕೋಚ್ ಅಂಟೋನಿಯೋ ಇರಿಯೊಂಡೋ ಅವರಿಗೆ ಜಯದ ಲಯಕ್ಕೆ ಬರುವುದು ಮುಖ್ಯವಾಗಿದೆ. ಮೊದಲ ಮೂರು ಪಂದ್ಯಗಳಿಂದ ಏಳು ಅಂಕಗಳನ್ನು ಗಳಿಸಿದ ನಂತರ ಎಟಿಕೆ ವಿರುದ್ಧ ಸೋಲನುಭವಿಸಿತ್ತು. ಗೋವಾದಲ್ಲಿ ಜಯ ಗಳಿಸಿ ಬಡ ಪ್ರವಾಸಿ ತಂಡವೆಂಬ ಹಣೆಪಟ್ಟಿಯನ್ನು ಕಳಚಬೇಕೆಂಬುದು ಜೇಮ್ಶೆಡ್ಪುರ ತಂಡದ ಗುರಿಯಾಗಿದೆ.

''ಸದ್ಯದ ಸ್ಥಿತಿಯಲ್ಲಿ ಗೋವಾ ತಂಡ ಅಗ್ರ ಸ್ಥಾನದಲ್ಲಿರುವ ಮೂರು ತಂಡಗಳಲ್ಲಿ ಒಂದಾಗಿದೆ. ಅವರನ್ನು ಹೇಗೆ ಸೋಲಿಸಬೇಕೆಂಬುದನ್ನು ನಾನು ನಿಮಗೆ ಹೇಳಲು ಯತ್ನಿಸುವುದಿಲ್ಲ. ರಣತಂತ್ರ ಹಾಗೂ ಯೋಜನೆಗಳಿಂದ ಅದು ಸಾಧ್ಯವಾಗಬಹುದು, ಆದರೆ, ಅವರು ಉತ್ತಮ ತಂಡ. ಇದುವರೆಗೂ ಅವರು ಸೋತಿಲ್ಲ, ನಿಜ ಅವರದ್ದು ಕಠಿಣ ತಂಡ,'' ಎಂದು ಇರಿಯೊಂಡೋ ಹೇಳಿದ್ದಾರೆ.

ಹಿಂದಿನ ಪಂದ್ಯದಲ್ಲಿ ಮಿಡ್ ಫೀಲ್ಡರ್ ಪಿಟಿ ಗಾಯಗೊಂಡಿದ್ದು, ಪಂದ್ಯದ ವೇಳೆ ಚೇತರಿಸಿಕೊಳ್ಳುತ್ತಾರೋ ಕಾದು ನೋಡಬೇಕು. ಮೂರು ಗೋಲುಗಳನ್ನು ಗಳಿಸಿರುವ ಸರ್ಗಿಯೋ ಕ್ಯಾಸ್ಟಲ್ ಲೀಗ್ ನಲ್ಲಿ ಉತ್ತಮ ಆರಂಭ ಕಂಡಿದ್ದಾರೆ. ಗೋವಾದ ಡಿಫೆಂಡರ್ ಗಳಾದ ಕಾರ್ಲೋಸ್ ಪೆನ ಹಾಗೂ ಮೌರ್ತದ ಫಾಲ್ ಅವರನ್ನು ಹೇಗೆ ನಿಯಂತ್ರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

Story first published: Tuesday, November 26, 2019, 16:28 [IST]
Other articles published on Nov 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X